Headlines

ನೈಜರ್​ನ ಅಂತಾರಾಷ್ಟ್ರೀಯ ಏರ್​ಪೋರ್ಟ್​​ನಲ್ಲಿ ಗುಂಡಿನ ದಾಳಿ, 13 ಮಂದಿ ಸಾವು – Kannada News | Niger Airport Attack: 13 Dead in Al Qaeda Claimed Niamey Violence

ನೈಜರ್, ಜೂನ್ 19: ಪಶ್ಚಿಮ ಆಫ್ರಿಕಾದ ನೈಜರ್​ನ ನಿಯಾಮಿ ಅಂತಾರಾಷ್ಟ್ರೀಯ ಏರ್​ಪೋರ್ಟ್​ನಲ್ಲಿ ಗುಂಡಿನ ದಾಳಿ(Firing) ನಡೆದಿದ್ದು, ಘಟನೆಯಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದಾಳಿಯಲ್ಲಿ ಇಪ್ಪತ್ತೆರಡು ಶಸ್ತ್ರಸಜ್ಜಿತ ದಾಳಿಕೋರರು ಸಹ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 20 ಶಂಕಿತರನ್ನು ಬಂಧಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಅಲ್ ಖೈದಾ ಉಗ್ರ ಗುಂಪು ನೈಜರ್ ರಾಜಧಾನಿಯಲ್ಲಿರುವ ವಿಮಾನ ನಿಲ್ದಾಣ ಮತ್ತು ಮಿಲಿಟರಿ ವಾಯುನೆಲೆಯ ಮೇಲೆ ನಡೆದ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ಗುರುವಾರ ನಿಯಾಮಿಯಲ್ಲಿ ಬೆಳಗ್ಗೆ 6 ಗಂಟೆಗೆ ಗುಂಡಿನ ದಾಳಿ ಶುರುವಾಗಿತ್ತು, ಎರಡು ಗಂಟೆಗೂ ಹೆಚ್ಚಿನ ಕಾಲ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ವರ್ಷ ವಿಮಾನ ನಿಲ್ದಾಣದಲ್ಲಿ ನಡೆದ ಎರಡನೇ ದಾಳಿ ಇದಾಗಿದೆ.

ಅಲ್​ ಖೈದಾ ಸಂಗ ಸಂಸ್ಥೆಯಾದ ಜಮಾತ್ ನುಸ್ರತ್ ಅಲ್ ಇಸ್ಲಾಂ ವಾಲ್ ಮುಸ್ಲಿಮೀನ್ ತನ್ನ ಅಧಿಕೃತ ಮಾಧ್ಯಮ ವಿಭಾಗವಾದ ಅಜ್ ಜಲ್ಲಕಾ ಫೌಂಡೇಶನ್ ಮೂಲಕ ಹೇಳಿಕೆಯನ್ನು ಪ್ರಕಟಿಸಿದೆ.
ಜೆಎನ್​ಐಎಂ ಬುರ್ಕಿನಾ ಫಾಸೊ ಮತ್ತು ಮಾಲಿಯಲ್ಲೂ ಈ ಗುಂಪು ಸಕ್ರಿಯವಾಗಿದೆ. ಅಲ್ಲಿ ಅದು ಏಪ್ರಿಲ್​ನಲ್ಲಿ ರಾಷ್ಟ್ರವ್ಯಾಪಿ ದಾಳಿಗಳನ್ನು ನಡೆಸಿತ್ತು. ರಾಜಧಾನಿ ಬಮಾಕೊದ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿ, ರಕ್ಷಣಾ ಸಚಿವರನ್ನು ಕೊಂದು, ಹಲವಾರು ಸೇನಾ ನೆಲೆಗಳನ್ನು ವಶಪಡಿಸಿಕೊಂಡಿತ್ತು.

ಮತ್ತಷ್ಟು ಓದಿ:

ಅಮೆರಿಕದ ಶ್ವೇತಭವನ ಸಂಕೀರ್ಣದ ಬಳಿ ಗುಂಡಿನ ದಾಳಿ: ಪ್ರತಿದಾಳಿಗೆ ಆಗಂತುಕ ಸಾವು

ಈ ದಾಳಿಯಲ್ಲಿ 11 ಭದ್ರತಾ ಪಡೆಗಳ ಸದಸ್ಯರು ಹಾಗೂ ಇಬ್ಬರು ನಾಗಕರಿಕರು ಸಾವನ್ನಪ್ಪಿದ್ದರು. ಸರ್ಕಾರಿ ಪಡೆಗಳು ದಾಳಿಯನ್ನು ಹಿಮ್ಮೆಟ್ಟಿಸಿ 22 ದಾಳಿಕೋರರನ್ನು ಕೊಂದಿವೆ. ಆದರೆ ಸುಮಾರು 20 ಜನರನ್ನು ಬಂಧಿಸಲಾಗಿದೆ. ವಿವಿಧ ರೀತಿಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ನೈಜರ್, ತನ್ನ ನೆರೆಯ ಮಾಲಿ ಮತ್ತು ಬುರ್ಕಿನಾ ಫಾಸೊದಂತೆ, ಮೂರು ದೇಶಗಳಲ್ಲಿ ಸಾವಿರಾರು ಜನರನ್ನು ಕೊಂದು ಲಕ್ಷಾಂತರ ಜನರನ್ನು ಸ್ಥಳಾಂತರಿಸಿರುವ ಜಿಹಾದಿ ಗುಂಪುಗಳ ದಾಳಿಯನ್ನು ತಡೆಯಲು ಹೆಣಗಾಡುತ್ತಿದೆ. ನಿಯಾಮಿಯಲ್ಲಿ ಮಧ್ಯಾಹ್ನದ ವೇಳೆಗೆ ಪರಿಸ್ಥಿತಿ ಬಹುತೇಕ ಶಾಂತವಾಗಿ ಕಂಡುಬಂದಿತ್ತು ಎಂದು ಸುದ್ದಿಸಂಸ್ಥೆ ರಾಯ್ಟರ್ಸ್​ಗೆ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಸಾಮಾನ್ಯ ಕಾರ್ಯಾಚರಣೆಗಳು ಪುನರಾರಂಭಗೊಂಡಿವೆ ಎಂದು ನೈಜರ್ ನಾಗರಿಕ ವಿಮಾನಯಾನ ಸಂಸ್ಥೆ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ. ಮಿಲಿಟರಿ ಆಸ್ತಿಗಳಿಗೆ ಆಗಿರುವ ಹಾನಿಯ ಪ್ರಮಾಣ ಸ್ಪಷ್ಟವಾಗಿಲ್ಲ.

ನಿಯಾಮಿ ವಿಮಾನ ನಿಲ್ದಾಣ ಮತ್ತು ಮಿಲಿಟರಿ ವಾಯುನೆಲೆ ಒಂದೇ ಸಂಕೀರ್ಣದಲ್ಲಿದ್ದು, ನಾಗರಿಕ ಟರ್ಮಿನಲ್ ಎದುರು ಬೇಸ್ ಇದೆ. ಜನವರಿಯಲ್ಲಿ ನಡೆದ ದಾಳಿಯ ಹೊಣೆಯನ್ನು ಹೊತ್ತುಕೊಂಡ ಐಎಸ್‌ಎಸ್‌ಪಿ, ಏರ್ ಕಮಾಂಡ್ ಪ್ರಧಾನ ಕಚೇರಿ ಮತ್ತು ಡ್ರೋನ್ ಸ್ವತ್ತುಗಳನ್ನು ಗುರಿಯಾಗಿಸಿಕೊಂಡಿದೆ ಮತ್ತು ನೈಜರ್‌ನ ದಂಗೆ ನಿಗ್ರಹ ಕಾರ್ಯಾಚರಣೆಗಳಿಗೆ ನೇರ ಹೊಡೆತ ನೀಡಿದೆ ಎಂದು ಹೇಳಿಕೊಂಡಿದೆ. ಗುರುವಾರದ ದಾಳಿಯಿಂದ ಉಂಟಾದ ಹಾನಿಯ ಪ್ರಮಾಣ ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *