ಪತಿಯ ಸಿನಿಮಾ ಪ್ರಚಾರ ಮಾಡಲು ಲಕ್ಷಾಂತರ ಹಣ ಕೇಳಿದ ನಯನತಾರಾ

ಪತಿಯ ಸಿನಿಮಾ ಪ್ರಚಾರ ಮಾಡಲು ಲಕ್ಷಾಂತರ ಹಣ ಕೇಳಿದ ನಯನತಾರಾ

ಸಿನಿಮಾ (Cinema) ರಂಗದಲ್ಲಿ ಎಲ್ಲವನ್ನೂ ಹಣದ ಮೇಲೆಯೇ ಅಳೆಯಲಾಗುತ್ತದೆ. ಇಲ್ಲಿ ಒಬ್ಬರಿಗೆ ಇನ್ನೊಬ್ಬರು ಹುಟ್ಟುಹಬ್ಬದ ಶುಭಾಶಯ ಕೋರಲು ಸಹ ಹಣದ ಲೆಕ್ಕಾಚಾರ ಇರುತ್ತದೆ. ಇಲ್ಲಿ ಸೆಲೆಬ್ರಿಟಿಗಳು ಹಾಕುವ ಪ್ರತಿ ಪೋಸ್ಟ್ ಹಿಂದೆಯೂ ಏಜೆನ್ಸಿಯೊಂದು ಕೆಲಸ ಮಾಡಿರುತ್ತದೆ. ಸಿನಿಮಾ ಪ್ರಚಾರದ ವಿಷಯದಲ್ಲಂತೂ ಯಾವುದೂ ಉಚಿತವಾಗಿ ಆಗುವುದಿಲ್ಲ. ಯಾವ ಮಟ್ಟಿಗೆಂದರೆ ಇದೀಗ ನಟಿ ನಯನತಾರಾ, ತಮ್ಮ ಪತಿಯ ಹೊಸ ಸಿನಿಮಾದ ಪ್ರಚಾರ ಮಾಡಲು ಲಕ್ಷಾಂತರ ರೂಪಾಯಿ ಹಣ ಕೇಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವಿಷಯವನ್ನು ಸ್ವತಃ ಅವರ ಪತಿಯೇ ಹೇಳಿದ್ದಾರೆ.

ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಕೆಲ ವರ್ಷಗಳ ಹಿಂದಷ್ಟೆ ವಿವಾಹವಾಗಿದ್ದು, ಸೆರೊಗಸಿ ಮೂಲಕ ಅವಳಿ ಮಕ್ಕಳ ಪೋಷಕರು ಸಹ ಆಗಿದ್ದಾರೆ. ಎಲ್ಲಿಗೂ ಗೊತ್ತಿರುವಂತೆ ನಯನತಾರಾ ಸ್ಟಾರ್ ನಟಿ ಆಗಿದ್ದು, ಈಗಲೂ ಸಹ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಘ್ನೇಶ್ ಸಿನಿಮಾ ನಿರ್ದೇಶಕರಾಗಿದ್ದು, ಈ ವರೆಗೆ ನಾಲ್ಕು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಐದನೇ ಸಿನಿಮಾ ನಿರ್ದೇಶಿಸಿದ್ದು ಇದೇ ಶುಕ್ರವಾರ ಸಿನಿಮಾ ತೆರೆಗೆ ಬರಲಿದೆ.

ವಿಘ್ನೇಶ್ ಶಿವನ್ ‘ಎಲ್​​ಐಕೆ’ (ಲವ್ ಇನ್ಶುರೆನ್ಸ್ ಕಂಪೆನಿ) ಹೆಸರಿನ ಸಿನಿಮಾ ನಿರ್ದೇಶಿಸಿದ್ದು, ಸಿನಿಮಾದ ನಾಯಕ ಪ್ರದೀಪ್ ರಂಗನಾಥನ್. ಸಿನಿಮಾದ ಪ್ರಚಾರ ಚಾಲ್ತಿಯಲ್ಲಿದ್ದು, ಇತ್ತೀಚೆಗಷ್ಟೆ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಿತು. ಆದರೆ ಈ ಕಾರ್ಯಕ್ರಮಕ್ಕೆ ನಯನತಾರಾ ಹಾಜರಾಗಿರಲಿಲ್ಲ. ಈ ಬಗ್ಗೆ ಮಾತನಾಡಿದ ಪತಿ ವಿಘ್ನೇಶ್, ‘ನನ್ನ ಪತ್ನಿ (ನಯನತಾರಾ) ಅನ್ನು ಅತಿಥಿಯಾಗಿ ಕರೆಯುವಷ್ಟು ಹಣ ನಮ್ಮಲ್ಲಿ ಇಲ್ಲ’ ಎಂದರು. ವಿಘ್ನೇಶ್ ಅವರ ಈ ಮಾತು ಇದೀಗ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಮತ್ತೆ ಬಾಲಿವುಡ್​​ಗೆ ನಯನತಾರಾ, ಈ ಬಾರಿ ಮತ್ತೊಬ್ಬ ಖಾನ್​​ಗೆ ಜೋಡಿ

ನಟಿ ನಯನತಾರಾ ಪತಿಯ ಸಿನಿಮಾಕ್ಕೆ ಬೆಂಬಲ ನೀಡುತ್ತಿಲ್ಲ. ಪತಿಯ ಸಿನಿಮಾ ಪ್ರಚಾರ ಮಾಡಲು ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಇದು ಸರಿಯಲ್ಲ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ. ಆದರೆ ಸಿನಿಮಾ ಎಂಬುದೇ ಉದ್ಯಮ, ‘ಡೋಂಟ್ ಡು ಬ್ಯುಸಿನೆಸ್ ವಿತ್ ಪ್ರೆಶರ್’ ಎಂಬ ಆಂಗ್ಲ ಗಾದೆಯಂತೆ, ಈ ಉದ್ಯಮದಲ್ಲಿ ಯಾವುದನ್ನೂ ಸಹ ಉಚಿತವಾಗಿ ಮಾಡುವಂತಿಲ್ಲ. ಎಲ್ಲದಕ್ಕೂ ಒಂದು ಬೆಲೆ ಇದೆ. ಅದನ್ನು ನಯನತಾರಾ ಚೆನ್ನಾಗಿ ಅರಿತಿದ್ದಾರೆ.

ನಯನತಾರಾ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನಲ್ಲಿ ‘ಮೂಕುತ್ತಿ ಅಮ್ಮನ್ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾನಲ್ಲಿ ಕನ್ನಡದ ದುನಿಯಾ ವಿಜಿ ಸಹ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಕನ್ನಡದ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿದ್ದು ಆ ಸಿನಿಮಾ ಜೂನ್ 4ಕ್ಕೆ ತೆರೆಗೆ ಬರಲಿದೆ. ಮಲಯಾಳಂನಲ್ಲಿ ಮೋಹನ್​​ಲಾಲ್, ಮಮ್ಮುಟಿ, ಫಹಾದ್ ಫಾಸಿಲ್ ಒಟ್ಟಿಗೆ ನಟಿಸಿರುವ ‘ಪೇಟ್ರಿಯಾಟ್’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *