Headlines

ಪರಶುರಾಮನ ಪಾತ್ರಕ್ಕಾಗಿ 25 ಕೆಜಿ ಹೆಚ್ಚಿಸಿಕೊಳ್ಳಲು ರೆಡಿ ಆದ ವಿಕ್ಕಿ ಕೌಶಲ್ – Kannada News | Vicky Kaushal Undergoes Massive Weight Gain Transformation of 25 kg for Mahavatar

ಬಾಲಿವುಡ್ ನಟ ವಿಕ್ಕಿ ಕೌಶಲ್ ಯಾವುದೇ ಪಾತ್ರ ಸಿಕ್ಕರೂ ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಪ್ರತಿ ಪಾತ್ರಕ್ಕೆ ಬೇಕಿರೋ ಅಗತ್ಯ ತಯಾರಿಗಳನ್ನು ಅವರು ಮಾಡಿಕೊಳ್ಳುತ್ತಾರೆ. ‘ಛಾವಾ’ ಚಿತ್ರದ ಯಶಸ್ಸಿನ ನಂತರ ವಿಕ್ಕಿ ‘ಮಹಾವತಾರ್’ ಸಿನಿಮಾಗಾಗಿ ದೊಡ್ಡ ಸವಾಲನ್ನು ಸ್ವೀಕರಿಸಿದ್ದಾರೆ. ಅಮರ್ ಕೌಶಿಕ್ ನಿರ್ದೇಶನದ ಈ ಪೌರಾಣಿಕ ಚಿತ್ರದಲ್ಲಿ ವಿಕ್ಕಿ ಕೌಶಲ್ ಅವರು ಚಿರಂಜೀವಿ ಪರಶುರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ನಟ ಬರೋಬ್ಬರಿ 25 ಕೆಜಿಗೂ ಹೆಚ್ಚು ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಪರಶುರಾಮನ ಪಾತ್ರಕ್ಕಾಗಿ ಭಾರಿ ಸಿದ್ಧತೆ

ಪುರಾಣಗಳಲ್ಲಿ ಪರಶುರಾಮನನ್ನು ಅತ್ಯಂತ ಶಕ್ತಿಶಾಲಿ ಮತ್ತು ದೈತ್ಯ ಪ್ರತಿಭೆಯಾಗಿ ಬಣ್ಣಿಸಲಾಗಿದೆ. ಈ ಪಾತ್ರಕ್ಕೆ ಜೀವ ತುಂಬಲು ವಿಕ್ಕಿ ಕೌಶಲ್ ಭಾರಿ ಕಸರತ್ತು ನಡೆಸಲಿದ್ದಾರೆ. ಚಿತ್ರದಲ್ಲಿ ಪರಶುರಾಮನ ದಿವ್ಯ ಕೊಡಲಿಯನ್ನು ಹಿಡಿದು ಹೋರಾಡುವ ದೃಶ್ಯಗಳಿಗಾಗಿ ಅವರು ಅಗಲವಾದ ಎದೆ ಹಾಗೂ ಬಲಿಷ್ಠ ದೇಹವನ್ನು ಹೊಂದಬೇಕಾಗಿದೆ. ಇದಕ್ಕಾಗಿ ಅವರ ಫಿಟ್‌ನೆಸ್ ಕೋಚ್ ತೇಜಸ್ ಲಾಲಾವಾನಿ ಮತ್ತು ನ್ಯೂಟ್ರಿಷನಿಸ್ಟ್ ಅಲ್ಕೇಶ್ ಶರೋತ್ರಿ ವಿಶೇಷ ತರಬೇತಿ ಹಾಗೂ ಆಹಾರದ ಪ್ಲಾನ್ ಸಿದ್ಧಪಡಿಸಿದ್ದಾರೆ.

ಛಾವಾ ಚಿತ್ರಕ್ಕಿಂತಲೂ ದೊಡ್ಡ ಸವಾಲು

ವಿಕ್ಕಿ ಕೌಶಲ್ ಅವರು ಈ ಹಿಂದೆ ‘ಚಾವಾ’ ಚಿತ್ರಕ್ಕಾಗಿ ತಮ್ಮ ತೂಕವನ್ನು 80 ಕೆಜಿಯಿಂದ 105 ಕೆಜಿಗೆ ಹೆಚ್ಚಿಸಿಕೊಂಡಿದ್ದರು ಅಂದತ. ಆದರೆ ‘ಮಹಾವತಾರ್’ ಚಿತ್ರಕ್ಕಾಗಿ ಅವರು ಇದಕ್ಕಿಂತಲೂ ಹೆಚ್ಚು ದಪ್ಪಗಾಗಬೇಕಿದೆ. ಸೆಪ್ಟೆಂಬರ್ ತಿಂಗಳಿನಿಂದ ಅವರ ಕಠಿಣ ತರಬೇತಿ ಆರಂಭವಾಗಲಿದೆ. ಡಿಸೆಂಬರ್‌ನಲ್ಲಿ ಚಿತ್ರದ ಶೂಟಿಂಗ್ ಆರಂಭವಾಗುವ ಮುನ್ನ, ಅಂದರೆ ಕೇವಲ ಮೂರು ತಿಂಗಳಲ್ಲಿ ಅವರು ಇಷ್ಟು ಕೆಜಿ ಹೆಚ್ಚಿಸಿಕೊಳ್ಳಬೇಕಿದೆ.

ಇದನ್ನೂ ಓದಿ: ಮೊದಲ ಬಾರಿ ಮಗನನ್ನು ಪರಿಚಯಿಸಿದ ಕತ್ರಿನಾ ಕೈಫ್‌, ವಿಕ್ಕಿ ಕೌಶಲ್: ಆದರೆ ಒಂದು ಷರತ್ತು

ಕಠಿಣ ವರ್ಕೌಟ್ ಮತ್ತು ಡಯಟ್ ಪ್ಲಾನ್

ಈ ಹೊಸ ರೂಪಕ್ಕಾಗಿ ವಿಕ್ಕಿ ಕೌಶಲ್ ದಿನನಿತ್ಯದ ಆಹಾರದಲ್ಲಿ 250 ರಿಂದ 500 ಹೆಚ್ಚುವರಿ ಕ್ಯಾಲೊರಿಗಳನ್ನು ತೆಗೆದುಕೊಳ್ಳಲಿದ್ದಾರೆ. ಅವರ ಆಹಾರ ಕ್ರಮದಲ್ಲಿ ಡ್ರೈ ಫ್ರೂಟ್ಸ್, ಡೈರಿ ಉತ್ಪನ್ನಗಳು, ಧಾನ್ಯಗಳು ಮತ್ತು ಪ್ರೊಟೀನ್ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದರೊಂದಿಗೆ ಸ್ಕ್ವಾಟ್ಸ್, ಡೆಡ್‌ಲಿಫ್ಟ್ ಮತ್ತು ಬೆಂಚ್ ಪ್ರೆಸ್‌ನಂತಹ ಕಠಿಣ ವ್ಯಾಯಾಮಗಳನ್ನು ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *