ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸುವ ಮೂಲಕ ಗಿಲ್ಲಿ ನಟ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಈಗ ಅವರು ಸಿನಿಮಾದಲ್ಲಿ ಹೀರೋ ಆಗಿ ನಟಿಸೋಕೆ ರೆಡಿ ಆಗಿದ್ದಾರೆ. ಮುಂಬರುವ ಅವರ ಚಿತ್ರಕ್ಕೆ ‘ಪಳಾರ್’ ಎಂಬ ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಬಗ್ಗೆ ಅವರು ವೇದಿಕೆ ಒಂದರಲ್ಲಿ ಮಾತನಾಡಿದ್ದಾರೆ. ರಾಮನಗರ ಹಾಗೂ ಕನಕಪುರ ಸುತ್ತಮುತ್ತ ಸುಮಾರು 15 ರಿಂದ 20 ದಿನಗಳ ಕಾಲ ಈ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಗ್ ಬಾಸ್ ರೀತಿಯೇ ಪ್ರೋತ್ಸಾಹಿಸಿ
ವೇದಿಕೆಯಲ್ಲಿ ಉಪಸ್ಥಿತರಿದ್ದ ಸಾವಿರಾರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಗಿಲ್ಲಿ, ‘ನನಗೆ ಬಿಗ್ ಬಾಸ್ನಲ್ಲಿದ್ದಾಗ ಎಷ್ಟು ಪ್ರೋತ್ಸಾಹ ಮತ್ತು ಪ್ರೀತಿ ನೀಡಿದಿರೋ, ಅದೇ ರೀತಿ ನಮ್ಮ ‘ಪಳಾರ್’ ಸಿನಿಮಾ ರಿಲೀಸ್ ಆದಾಗಲೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಬೆಂಬಲಿಸಬೇಕು’ ಎಂದು ಮನವಿ ಮಾಡಿಕೊಂಡರು. ಇದಕ್ಕೆ ನೆರೆದಿದ್ದ ಜನಸ್ತೋಮ ಕರತಾಡನದ ಮೂಲಕ ಧ್ವನಿಗೂಡಿಸಿತು.
100 ದಿನ ಓಡಿಸುವ ಭರವಸೆ
ಕಾರ್ಯಕ್ರಮದ ನಿರೂಪಕರು ಮಾತನಾಡಿ, ‘ಅಭಿಮಾನಿಗಳು ಬಿಗ್ ಬಾಸ್ನಲ್ಲಿ ಗಿಲ್ಲಿ ಅವರನ್ನು ಗೆಲ್ಲಿಸಿದ ರೀತಿಯೇ, ಈ ಪಳಾರ್ ಚಿತ್ರವನ್ನೂ 100 ಅಥವಾ 200 ದಿನಗಳ ಕಾಲ ಓಡಿಸಿ ಖಂಡಿತ ಗೆಲ್ಲಿಸುತ್ತಾರೆ’ ಎಂದು ಸಭಿಕರ ಪ್ರೀತಿಯನ್ನು ಎತ್ತಿ ತೋರಿಸಿದರು.
ಇದನ್ನೂ ಓದಿ: ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಅವರದ್ದೇ ಟೈಟಲ್
‘ಪಳಾರ್’ ಸಿನಿಮಾ ಟೈಟಲ್ ಇಡೋದಕ್ಕೂ ಒಂದು ಕಾರಣ ಇದೆ. ‘ಬಿಗ್ ಬಾಸ್’ ಮನೆಯಲ್ಲಿ ಇದ್ದಾಗ ಎಲ್ಲರೂ ಗಿಲ್ಲಿಗೆ ಪಳಾರ್ ಎಂದು ಕರೆದರು. ಸ್ಥಳೀಯ ಪ್ರಾದೇಶಿಕ ಆಡುಭಾಷೆಯಲ್ಲಿ ‘ಪಳಾರ್’ ಎಂದರೆ ಚುರುಕಾದ, ಖಡಕ್ ಆದ ಅಥವಾ ರಫ್, ಮಾಸ್ ವ್ಯಕ್ತಿತ್ವದವ ಎಂಬ ಅರ್ಥದಲ್ಲೂ ಬಳಸಲಾಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.