Headlines

‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ | Pavithra Gowda Is Mentally Disturbed, Says Karnataka Women’s Commission President Nagalakshmi Chowdary

ಆನೇಕಲ್​​, ಆಗಸ್ಟ್​​ 18: ‘ಜೈಲಿನಲ್ಲಿ ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ. ಅವರ ಸ್ಥಿತಿ ನೋವಿನಿಂದ ಕೂಡಿದೆ. ತಾಯಿಯಾಗಿ ನಮಗೆ ಪವಿತ್ರಾಗೌಡ ಅಥವಾ ಇತರ ಯಾವುದೇ ಹೆಣ್ಣುಮಗಳು ಇರಲಿ ಎಲ್ಲರೂ ಒಂದೇ, ಆಕೆಯೂ ನನಗೆ ಮಗಳ ಸಮಾನ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಹೇಳಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಮಹಿಳಾ ಕೈದಿಗಳ ಯೋಗಕ್ಷೇಮ ಹಾಗೂ ಸಮಸ್ಯೆಗಳನ್ನು ಪರಿಶೀಲಿಸಿದ ಬಳಿಕ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ‘ಪವಿತ್ರಾಗೌಡ ಮತ್ತು ಎಲ್ಲರ ಜೊತೆಗೆ ಮಾತನಾಡಿದ್ದೇನೆ. ಈಗಾಗಲೇ ಒಂದು ತಪ್ಪನ್ನು ಮಾಡಿ ಜೈಲಿಗೆ ಹೋಗಿರುತ್ತಾರೆ. ಮತ್ತೆ ನಾವು ಅವರ ಬಗ್ಗೆ ಹೆಚ್ಚಾಗಿ ಮಾತನಾಡಿದಾಗ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ’ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *