ತಂತ್ರಜ್ಞಾನ ಮತ್ತು ಭದ್ರತೆಯ ಸಮ್ಮಿಲನ: ಪ್ರತಿಯೊಬ್ಬರ ಕೊರಳಲ್ಲಿ ರಾರಾಜಿಸುತ್ತಿರುವ ಈ QR ಕೋಡ್ ಆಧಾರಿತ ಐಡಿ ಕಾರ್ಡ್‌ಗಳು, ಪ್ರವಾಸಿಗರಿಗೆ ನೀಡಲಿವೆ ‘ತ್ವರಿತ ಗುರುತಿಸುವಿಕೆ’ಯ ಭರವಸೆ. ಪಹಲ್ಗಾಮ್‌ನ ಅತ್ಯಂತ ಸುಂದರ ತಾಣವಾದ ಬೈಸರನ್ ಹುಲ್ಲುಗಾವಲಿನಲ್ಲಿ ಇನ್ನು ಮುಂದೆ ಯಾರೂ ಅನಾಮಧೇಯರಾಗಿ ಓಡಾಡುವಂತಿಲ್ಲ. ಕುದುರೆ ಸವಾರರು, ಗೈಡ್‌ಗಳು ಅಥವಾ ಸಣ್ಣ ವ್ಯಾಪಾರಿಗಳಾಗಲಿ – ಪ್ರತಿಯೊಬ್ಬರ ಕೊರಳಲ್ಲೂ ಈಗ ಒಂದು ವಿಶಿಷ್ಟ ಕ್ಯೂ ಆರ್ ಕೋಡ್ ಇರಲಿದೆ.