
ಪಾಕಿಸ್ತಾನ ಪ್ರೀಮಿಯರ್ ಲೀಗ್ ಸದ್ಯ ಚರ್ಚೆಯಲ್ಲಿದೆ. ಈ ಸೀಸನ್ ಅಲ್ಲಿ ಫ್ಯಾನ್ಸ್ಗೆ ಎಂಟ್ರಿ ಇಲ್ಲ. ಕಾಸ್ಟ್ ಕಟಿಂಗ್ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಇಸ್ರೇಲ್, ಅಮೆರಿಕ-ಇರಾನ್ ಯುದ್ಧದಿಂದ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಕಾಣಿಸಿದ್ದು, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬೆನ್ನಲ್ಲೇ ಒಂದು ಪಿಎಸ್ಎಲ್ ಎಷ್ಟು ಬಡ ಲೀಗ್ ಎಂಬುದು ಸಾಬೀತಾಗಿದೆ. ಆಟಗಾರರ ಬೆವರಿಗೆ ಶರ್ಟ್ ಬಣ್ಣ ಬಿಟ್ಟುಕೊಂಡಿದೆ.
2008ರ ಐಪಿಎಲ್ನಲ್ಲಿ ಪಾಕ್ ಆಟಗಾರರು ಕೂಡ ಇದ್ದರು. ಆದರೆ, ಅದೇ ವರ್ಷ ಪಾಕ್ ಬೆಂಬಲಿತ ಉಗ್ರರು ಮುಂಬೈ ಮೇಲೆ ದಾಳಿ ಮಾಡಿದ ಬಳಿಕ ಪಾಕಿಸ್ತಾನ ಆಟಗಾರರನ್ನು ಐಪಿಎಲ್ನಿಂದ ಹೊರಕ್ಕೆ ಇಡಲಾಯಿತು. ವರ್ಷ ಕಳೆದಂತೆ ಐಪಿಎಲ್ ತನ್ನ ಖ್ಯಾತಿ ಹೆಚ್ಚಿಸಿಕೊಳ್ಳುತ್ತಾ ಹೋಯಿತು. ಈ ಸಂದರ್ಭದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುತ್ತಿರಲಿಲ್ಲ. ಈ ಅವಧಿಯಲ್ಲಿ ಪಾಕ್ ಆಟಗಾರರು ಖಾಲಿ ಕೂರಬೇಕಿತ್ತು ಅಥವಾ ಜಿಂಬಾಬ್ವೆ ಜೊತೆ ಸರಣಿ ಆಡಬೇಕಿತ್ತು. ಹೀಗಾಗಿ, 2016ರಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ ಆರಂಭಿಸಲಾಯಿತು.
ಇದನ್ನೂ ಓದಿ: ಪಾಕಿಸ್ತಾನ್ ಸೂಪರ್ ಲೀಗ್ ಉದ್ಘಾಟನಾ ಪಂದ್ಯ ನೋಡಲು ಒಬ್ಬರೂ ಬರಲಿಲ್ಲ
ಐಪಿಎಲ್ನಲ್ಲಿ ಅವಕಾಶ ಸಿಗದ ಕೆಲ ವಿದೇಶಿ ಆಟಗಾರರು ಹಾಗೂ ಪಾಕಿಸ್ತಾನ ಆಟಗಾರರು ಇದರಲ್ಲಿ ಆಡುತ್ತಿದ್ದಾರೆ. ವರ್ಷ ಕಳೆದಂತೆ ಪಾಕಿಸ್ತಾನ ಸೂಪರ್ ಲೀಗ್ ಸಂಕಷ್ಟ ಅನುಭವಿಸುತ್ತಿದೆ. ಈ ಬಾರಿ ಫ್ಯಾನ್ಸ್ಗಳಿಗೂ ಅವಕಾಶ ನೀಡಿಲ್ಲ. ಹೀಗಿರುವಾಗಲೇ ಆಟಗಾರರಿಗೆ ನೀಡಲಾದ ಜೆರ್ಸಿ ಗುಣಮಟ್ಟದ ಬಗ್ಗೆ ಚರ್ಚೆ ನಡೆದಿದೆ.
Hands got pink. Ball got pink due to Jersey leaving its colour. Man, PSL is full comedy. I know they are gareeb but this gareeb
pic.twitter.com/WsI96OdeD2
— Rajiv (@Rajiv1841) March 26, 2026
Peak Pakistan Super League standards
During the very first match of PSL 11, the ball literally turned pink every time Hyderabad Kingsmen players rubbed it on their kit.
Did they get knockoff kits instead of authentic ones?
International league or gully-level experiment?
pic.twitter.com/Beq5zhmSkb
— Brutal Truth (@sarkarstix) March 26, 2026
ಮಾರ್ಚ್ 26ರ ಉದ್ಘಾಟನಾ ಪಂದ್ಯದಲ್ಲಿ ಲಾಹೋರ್ ಹಾಗೂ ಹೈದರಾಬಾದ್ ಕಿಂಗ್ಸ್ಮನ್ ಮುಖಾಮುಖಿ ಆಗಿದ್ದವು. ಆಗ ಇದ್ದಕ್ಕಿಂದ ಬಿಳಿ ಬಾಲ್ ಬಣ್ಣ ಬದಲಿಸಿದೆ. ಇದನ್ನು ನೋಡಿ ಅಂಪೈರ್ಗಳು ಶಾಕ್ ಆದರು. ಆ ಬಳಿಕ ತಿಳಿದು ಬಂದಿದ್ದೇನೆಂದರೆ ಬಾಲ್ನ ಆಟಗಾರರು ಬಟ್ಟೆಗೆ ಉಜ್ಜಿದಾಗ ಅದು ಬಣ್ಣ ಬಿಟ್ಟಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಟ್ರೋಲ್ ಆಗುತ್ತಿದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
