Headlines

ಪಾಸ್‌ಪೋರ್ಟ್ ಪಡೆಯುವುದು ಈಗ ಮತ್ತಷ್ಟು ದುಬಾರಿ; ಹೊಸ ಶುಲ್ಕ ಪಟ್ಟಿ ಇಲ್ಲಿದೆ – Kannada News | Government hikes fees for passport application Check New fees List

ನವದೆಹಲಿ, ಜೂನ್ 25: ವಿದೇಶ ಪ್ರವಾಸ ಕೈಗೊಳ್ಳುವ ಯೋಚನೆಯಲ್ಲಿರುವ ನಾಗರಿಕರಿಗೆ ಕೇಂದ್ರ ಸರ್ಕಾರವು ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ. ಪಾಸ್‌ಪೋರ್ಟ್ (Passport) ಅರ್ಜಿ ಸಲ್ಲಿಕೆ ಮತ್ತು ಮರುಹಂಚಿಕೆ ಪ್ರಕ್ರಿಯೆಯ ಶುಲ್ಕವನ್ನು ಕೇಂದ್ರ ಸರ್ಕಾರವು ಅಧಿಕೃತವಾಗಿ ಏರಿಕೆ ಮಾಡಿದೆ. ಪರಿಷ್ಕೃತ ದರಗಳ ಪ್ರಕಾರ, ಸಾಮಾನ್ಯ ಹಾಗೂ ತತ್ಕಾಲ್ ಪಾಸ್‌ಪೋರ್ಟ್‌ಗಳ ದರದಲ್ಲಿ ಭಾರಿ ಏರಿಕೆಯಾಗಿದೆ. ಈ ಹೊಸ ಶುಲ್ಕ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.

36 ಪುಟಗಳನ್ನು ಹೊಂದಿರುವ ಹೊಸ ಸಾಮಾನ್ಯ ಪಾಸ್‌ಪೋರ್ಟ್‌ನ ಶುಲ್ಕ 2,500 ರೂ. ಆಗಿದೆ. ಈ ಶುಲ್ಕವು ವಯಸ್ಕರಿಗೆ ಮತ್ತು 15ರಿಂದ 18 ವರ್ಷದೊಳಗಿನ ಅಪ್ರಾಪ್ತ ವಯಸ್ಕರಿಗೆ ಅನ್ವಯಿಸುತ್ತದೆ. ಅರ್ಜಿ ಸಲ್ಲಿಸಲು, ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌ನಲ್ಲಿ (Passport Seva Online Portal) ಖಾತೆಯನ್ನು ರಚಿಸಿ.

ಇದನ್ನೂ ಓದಿ: ಪಾಸ್‌ಪೋರ್ಟ್ ಬೇಡ, ಮುಖ ಸ್ಕ್ಯಾನ್ ಮಾಡಿದ್ರೆ ಸಾಕು: ಬೆಂಗಳೂರು ವಿಮಾನ ನಿಲ್ದಾದಲ್ಲಿ ಹೊಸ ಮೈಲಿಗಲ್ಲು

ಪರಿಷ್ಕೃತ ಹೊಸ ಪಾಸ್‌ಪೋರ್ಟ್ ಶುಲ್ಕದ ವಿವರಗಳು ಇಲ್ಲಿವೆ:

ಸಾಮಾನ್ಯ ಪಾಸ್‌ಪೋರ್ಟ್ (36 ಪುಟಗಳು):

ನೀವು ಮೊದಲ ಬಾರಿಗೆ ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿದ್ದರೆ ಅಥವಾ 36 ಪುಟಗಳನ್ನು ಹೊಂದಿರುವ ಹಳೆಯ ಪಾಸ್‌ಪೋರ್ಟ್ ಅನ್ನು ನವೀಕರಿಸಲು ಬಯಸಿದರೆ, ಇನ್ಮುಂದೆ 2,500 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ತತ್ಕಾಲ್ ಪಾಸ್‌ಪೋರ್ಟ್ ಸೇವೆ:

ತುರ್ತಾಗಿ ಪಾಸ್‌ಪೋರ್ಟ್ ಅಗತ್ಯವಿರುವ ಗ್ರಾಹಕರು ತತ್ಕಾಲ್ ಯೋಜನೆಯಡಿ ಅರ್ಜಿ ಸಲ್ಲಿಸಲು ಈಗ ಭಾರಿ ಮೊತ್ತವನ್ನು ಖರ್ಚು ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರವು ತತ್ಕಾಲ್ ಪಾಸ್‌ಪೋರ್ಟ್ ಶುಲ್ಕವನ್ನು ಬರೋಬ್ಬರಿ 5,000 ರೂ.ಗೆ ಏರಿಕೆ ಮಾಡಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪಾಸ್​ಪೋರ್ಟ್ ದಾಖಲೆ​ ಪರಿಶೀಲನೆಗೆ ಹೊಸ ಮಾರ್ಗಸೂಚಿ

ದರ ಹೆಚ್ಚಳಕ್ಕೆ ಕಾರಣ:

ಪಾಸ್‌ಪೋರ್ಟ್ ವಿತರಣಾ ಪ್ರಕ್ರಿಯೆಯಲ್ಲಿ ತಾಂತ್ರಿಕ ಸುಧಾರಣೆಗಳು, ಉನ್ನತ ದರ್ಜೆಯ ಭದ್ರತಾ ಫೀಚರ್‌ಗಳ ಅಳವಡಿಕೆ (ಉದಾಹರಣೆಗೆ: ಇ-ಪಾಸ್‌ಪೋರ್ಟ್ ಚಿಪ್ ತಂತ್ರಜ್ಞಾನ) ಮತ್ತು ಆಡಳಿತಾತ್ಮಕ ವೆಚ್ಚಗಳು ಹೆಚ್ಚಾಗಿರುವುದರಿಂದ ಈ ದರ ಪರಿಷ್ಕರಣೆ ಮಾಡಲಾಗಿದೆ. ಕಳೆದ ಹಲವು ವರ್ಷಗಳಿಂದ ಪಾಸ್‌ಪೋರ್ಟ್ ಶುಲ್ಕದಲ್ಲಿ ಯಾವುದೇ ಪ್ರಮುಖ ಬದಲಾವಣೆ ಆಗಿರಲಿಲ್ಲ. ಆದರೆ, ಈಗ ಏಕಕಾಲಕ್ಕೆ ದರ ಹೆಚ್ಚಿಸಿರುವುದು ಹೊಸದಾಗಿ ಪಾಸ್‌ಪೋರ್ಟ್ ಪಡೆಯುವ ಜನಸಾಮಾನ್ಯರಿಗೆ ಕೊಂಚ ಆರ್ಥಿಕ ಹೊರೆಯಾಗಲಿದೆ. ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಹೊಸ ಶುಲ್ಕದ ಅನ್ವಯವೇ ಪಾವತಿ ಮಾಡಬೇಕಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *