
ನವದೆಹಲಿ, ಮಾರ್ಚ್ 13: ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಮ್ನ ಗುವಾಹಟಿಯಲ್ಲಿ ಇಂದು ಪಿಎಂ ಕಿಸಾನ್ ಸ್ಕೀಮ್ನಡಿ ((PM Kisan scheme) 22ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. 9.32 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ತಲಾ 2,000 ರೂನಂತೆ ಒಟ್ಟು 18,640 ಕೋಟಿ ರೂ ಹಾಕಲಾಗಿದೆ. ಕಳೆದ ಬಾರಿಗಿಂತ ಈ ಸಲ ಫಲಾನುಭವಿಗಳ ಸಂಖ್ಯೆ 4 ಲಕ್ಷದಷ್ಟು ಕಡಿಮೆ ಆಗಿದೆ. ಇಕೆವೈಸಿ ಆಗಿಲ್ಲದಿರುವುದು ಸೇರಿದಂತೆ ವಿವಿಧ ಕಾರಣಗಳಿಗೆ ಲಕ್ಷಾಂತರ ಮಂದಿಗೆ ಯೋಜನೆಯ ಲಾಭ ಕೈತಪ್ಪಿದೆ. 21ನೇ ಕಂತಿನ ಹಣವನ್ನು 9,35,79,869 ಮಂದಿ ಪಡೆದಿದ್ದರು. ಈ ಬಾರಿ 3.8 ಲಕ್ಷದಷ್ಟು ಸಂಖ್ಯೆ ಕಡಿಮೆ ಆಗಿದೆ.
ಏನಿದು ಪಿಎಂ ಕಿಸಾನ್ ಸ್ಕೀಮ್?
ಪಿಎಂ ಕಿಸಾನ್ ಯೋಜನೆಯು ರೈತರ ವ್ಯವಸಾಯಕ್ಕೆ ಸರ್ಕಾರ ನೀಡುವ ಸಹಾಯಧನದ ಸ್ಕೀಮ್. ವರ್ಷಕ್ಕೆ 6,000 ರೂ ನೀಡಲಾಗುತ್ತದೆ. ವರ್ಷಕ್ಕೆ ಮೂರು ಕಂತುಗಳಲ್ಲಿ ಈ ಹಣ ವಿತರಣೆ ಆಗುತ್ತದೆ. ನೇರವಾಗಿ ರೈತರ ಬ್ಯಾಂಕ್ ಅಕೌಂಟ್ಗಳಿಗೆ ಈ ಹಣ ಜಮೆ ಆಗುತ್ತದೆ.
ಇದನ್ನೂ ಓದಿ: ಸ್ಮಾರ್ಟ್ಫೋನ್ ಉತ್ಪಾದನೆಗೆ ಉತ್ತೇಜಿಸಲು ಸರ್ಕಾರದಿಂದ ಹೊಸ ಸಬ್ಸಿಡಿ ಸ್ಕೀಮ್; ಪಿಎಲ್ಐ ಬದಲು ಹೊಸ ಯೋಜನೆ
ಫಲಾನುಭವಿಯಾಗಿದ್ದೂ ಹಣ ಬಂದಿಲ್ಲವಾ? ಹೀಗೆ ಮಾಡಿ…
ನೀವು ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ್ದು, ಹಣ ಇನ್ನೂ ಬಂದಿಲ್ಲ ಎಂದಾದಲ್ಲಿ ಹಲವಾರು ಕಾರಣಗಳಿರುವ ಸಾಧ್ಯತೆ ಇದೆ. ನೀವು ಇಕೆವೈಸಿ ಮಾಡಿಲ್ಲದಿರಬಹುದು, ಯೋಜನೆಗೆ ಅರ್ಹರಲ್ಲದಿರಬಹುದು, ಅಥವಾ ಬೇರೇನೇ ಇರಬಹುದು.
ನಿಮಗೆ ಹಣ ಬಂದಿಲ್ಲದಿದ್ದರೆ ಸ್ಕೀಮ್ನಲ್ಲಿ ನಿಮ್ಮ ಗ್ರಾಮದ ಎಲ್ಲಾ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ. ಈ ಕೆಲಸ ಮಾಡಲು ಪಿಎಂ ಕಿಸಾನ್ ವೆಬ್ಸೈಟ್ಗೆ ಹೋಗಿ: https://pmkisan.gov.in/
ಇದನ್ನೂ ಓದಿ: ಸಿಲಿಕಾನ್ ಸಿಟಿ ಹೊಂದಿರುವ ಕರ್ನಾಟಕದಲ್ಲಿ 470 ಹಳ್ಳಿಗಳಲ್ಲಿ ಈಗಲೂ ಇಲ್ಲ ಮೊಬೈಲ್ ಸಂಪರ್ಕ
ಇಲ್ಲಿ ತುಸು ಕೆಳಗೆ ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಕಾಣುತ್ತದೆ. ಅಲ್ಲಿ ಬೆನಿಫಿಶಿಯರಿ ಲಿಸ್ಟ್ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮವನ್ನು ಆಯ್ದುಕೊಳ್ಳಿ. ನಿಮ್ಮ ಊರಿನ ಎಲ್ಲಾ ಫಲಾನುಭವಿಗಳ ಪಟ್ಟಿ ಸಿಗುತ್ತದೆ. ನಿಮ್ಮ ಹೆಸರಿದೆಯಾ ನೋಡಿಕೊಳ್ಳಿ. ಇದೇ ವೆಬ್ಸೈಟ್ನಲ್ಲಿ ನೀವು ಇಕೆವೈಸಿ ಅಪ್ಡೇಟ್ ಕೂಡ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ