Headlines

ಪಿಎಂ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ 1,000 ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್? ಇಲ್ಲಿದೆ ಲೆಕ್ಕಾಚಾರ – Kannada News | Sukanya Samriddhi Yojana, investment period, maturity, amount, returns and other details

ಸರ್ಕಾರದಿಂದ ನಡೆಸಲಾಗುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಸುಕನ್ಯಾ ಸಮೃದ್ದಿ ಸ್ಕೀಮ್ (Sukanya Samriddhi Yojana) ಒಂದು. ಮಹಿಳೆಯರಿಗೆಂದು ಇರುವ ಕೆಲವೇ ಸ್ಕೀಮ್​ಗಳಲ್ಲಿ ಇದೂ ಒಂದು. ಹಾಗೆಯೇ, ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳ ಪೈಕಿ ಅತಿಹೆಚ್ಚು ಬಡ್ಡಿ ನೀಡುವ ಯೋಜನೆಗಳಲ್ಲೂ ಇದು ಇದೆ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಾಡುವ ಹೂಡಿಕೆ ಮೆಚ್ಯೂರಿಟಿ ಆಗಲು ಕನಿಷ್ಠ 15 ವರ್ಷ ಆಗುವುದರಿಂದ, ದೀರ್ಘಾವಧಿ ಹೂಡಿಕೆಗೆ ಹೇಳಿ ಮಾಡಿಸಿದ ಸ್ಕೀಮ್ ಇದು.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ?

ಸುಕನ್ಯಾ ಸಮೃದ್ಧಿ ಯೋಜನೆಯ ಸ್ಕೀಮ್ ಅನ್ನು ಯಾವುದಾದರೂ ಪೋಸ್ಟ್ ಆಫೀಸ್ ಅಥವಾ ಬ್ಯಾಂಕಿನಲ್ಲಿ ಪಡೆಯಬಹುದು. ನಿಮಗೆ ಹೆಣ್ಮಗು ಇದ್ದು ಅವಳ ವಯಸ್ಸು 10 ವರ್ಷಕ್ಕಿಂತ ಕಡಿಮೆ ಇದ್ದರೆ, ಆಕೆಯ ಹೆಸರಿನಲ್ಲಿ ಇದರ ಅಕೌಂಟ್ ತೆರೆಯಬಹುದು.

ಇದನ್ನೂ ಓದಿ: ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್; ಇದು ರಿಟೈರ್ಮೆಂಟ್​ಗೂ ಸೈ, ಹೆಲ್ತ್​ಕೇರ್ ವೆಚ್ಚಕ್ಕೂ ಸೈ; ಹೇಗೆ ಕೆಲಸ ಮಾಡುತ್ತೆ ಈ ಹೈಬ್ರಿಡ್ ಸ್ಕೀಮ್?

ವರ್ಷಕ್ಕೆ ಕನಿಷ್ಠ ಹೂಡಿಕೆ 250 ರೂ ಮಾತ್ರವೇ ಇರುವುದು. ಗರಿಷ್ಠ ಹೂಡಿಕೆ ವರ್ಷಕ್ಕೆ 1.5 ಲಕ್ಷ ರೂಗೆ ಸೀಮಿತವಾಗಿರುತ್ತದೆ. ಹೂಡಿಕೆ ಅವಧಿ 15 ವರ್ಷ ಇರುತ್ತದೆ. ಬಾಲಕಿಯ ವಯಸ್ಸು 21 ವರ್ಷ ದಾಟಿದಾಗ ಹೂಡಿಕೆ ಮೆಚ್ಯೂರಿಟಿಗೆ ಬರುತ್ತದೆ. ಉದಾಹರಣೆಗೆ, ಬಾಲಕಿ ವಯಸ್ಸು 1 ವರ್ಷ ಇದ್ದಾಗ ನೀವು ಈ ಅಕೌಂಟ್ ತೆರೆದು 15 ವರ್ಷ ಹಣ ಕಟ್ಟುತ್ತೀರಿ. ನಂತರ ಕಟ್ಟಬೇಕಿಲ್ಲ. ಬಾಲಕಿಯ ವಯಸ್ಸು 21 ವರ್ಷ ಪೂರ್ಣಗೊಳ್ಳುವವರೆಗೂ ಅಕೌಂಟ್​ನಲ್ಲಿರುವ ಹಣಕ್ಕೆ ಬಡ್ಡಿ ಸಂದಾಯ ಮುಂದುವರಿಯುತ್ತಾ ಇರುತ್ತದೆ. 21 ವರ್ಷ ವಯಸ್ಸಿನ ನಂತರ ಅಕೌಂಟ್​ನಿಂದ ಹಣ ಪೂರ್ಣ ಹಿಂಪಡೆಯಬಹುದು.

ಬಾಲಕಿಯ ವಯಸ್ಸು 18 ವರ್ಷ ಪೂರ್ಣಗೊಂಡಾಗ ಪಾಕ್ಷಿಕವಾಗಿ ಹಣ ಹಿಂಪಡೆಯಲು ಅವಕಾಶ ಇರುತ್ತದೆ. ಆಕೆಯ ಶಿಕ್ಷಣ ಅಥವಾ ಮದುವೆ ವೆಚ್ಚಕ್ಕೆ ಶೇ. 50ರಷ್ಟು ಹಣವನ್ನು ವಿತ್​ಡ್ರಾ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಮಾರ್ಕೆಟ್ ಟ್ರೆಂಡ್, ಎಕ್ಸ್​ಪೆನ್ಸ್ ರೇಶಿಯೋ, ಎಮರ್ಜೆನ್ ಫಂಡ್ ಇತ್ಯಾದಿ.. ಜನಸಾಮಾನ್ಯರು ಮಾಡುವ ಹೂಡಿಕೆ ತಪ್ಪುಗಳಿವು

ತಿಂಗಳಿಗೆ 1,000 ರೂ ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್?

ಸುಕನ್ಯಾ ಸಮೃದ್ಧಿ ಯೋಜನೆಯ ಅಕೌಂಟ್​ಗೆ ನೀವು ತಿಂಗಳಿಗೆ 1,000 ರೂಗಳಂತೆ ಠೇವಣಿ ಇಡುತ್ತಾ ಹೋದರೆ, ಅಂದರೆ ವರ್ಷಕ್ಕೆ 12,000 ರೂ ಹೂಡಿಕೆ ಮಾಡುತ್ತಾ ಹೋದರೆ, ಆಗ 15 ವರ್ಷದಲ್ಲಿ ನೀವು ಪಾವತಿಸುವ ಹಣ 1.8 ಲಕ್ಷ ರೂ ಆಗಿರುತ್ತದೆ. ಸದ್ಯ ಇರುವ ಶೇ. 8.2 ಬಡ್ಡಿಯೇ ಮುಂದುವರಿಯುತ್ತದೆ ಎಂದು ಪರಿಗಣಿಸಿ ಲೆಕ್ಕ ಮಾಡಿದರೆ 21 ವರ್ಷದ ಬಳಿಕ 3.74 ಲಕ್ಷ ರೂ ಬಡ್ಡಿ ಸೇರಿ ಒಟ್ಟು ಸಿಗುವ ರಿಟರ್ನ್ 5,54,206 ರೂ ಆಗಿರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *