ನಟನಾಗಿ, ನಿರ್ಮಾಪಕನಾಗಿ ಡಾಲಿ ಧನಂಜಯ ಅವರು ಕನ್ನಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸದ್ಯಕ್ಕೆ ಚಂದನವನ ಕಷ್ಟದಲ್ಲಿದೆ. ಪುನೀತ್ ರಾಜ್ಕುಮಾರ್ ನಿಧನರಾಗಿದ್ದು ಮತ್ತು ದರ್ಶನ್ ಅವರು ಜೈಲು ಸೇರಿದ್ದು ಚಿತ್ರರಂಗಕ್ಕೆ ದೊಡ್ಡ ಪೆಟ್ಟುಕೊಟ್ಟಂತೆ ಆಗಿದೆ. ಆ ಬಗ್ಗೆ ಡಾಲಿ ಧನಂಜಯ (Daali Dhananjaya) ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಆ ಎರಡು ಘಟನೆಗಳು ದೊಡ್ಡ ಪೆಟ್ಟುಗಳು. ಪುನೀತ್ ರಾಜ್ಕುಮಾರ್ ಮತ್ತು ದರ್ಶನ್ ಅವರು ಚಿತ್ರರಂಗದ ದೊಡ್ಡ ಮರಗಳು. ಒಂದು ವೇಳೆ ಟೈಮ್ ಟ್ರಾವೆಲ್ ಮಾಡುವ ಅವಕಾಶ ನನಗೆ ಸಿಕ್ಕರೆ ಆ ಎರಡು ಘಟನೆಗಳನ್ನು ನಾನು ತಡೆಯುತ್ತೇನೆ ಅಂತ ಸ್ನೇಹಿತರ ಬಳಿ ಆಗಾಗ ಹೇಳುತ್ತಿರುತ್ತೇನೆ. ಆ ಎರಡು ಘಟನೆಗಳು ಆಗಬಾರದಾಗಿತ್ತು. ಕೆಲವೊಂದನ್ನು ನಾವು ಬದಲಾಯಿಸೋಕೆ ಆಗಲ್ಲ. ಮುಂದಕ್ಕೆ ಏನು ಮಾಡಬಹುದು ಎಂಬುದು ಯೋಚನೆ ಮಾಡಬೇಕು’ ಎಂದು ಡಾಲಿ ಧನಂಜಯ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.