‘ಪೆದ್ದಿ’ ವಿವಾದ: ಬಾಲಿವುಡ್ ದೂರುಗಳ ಬಗ್ಗೆ ನಿತ್ಯಾ ಮೆನನ್ ಪ್ರತ್ಯುತ್ತರ – Kannada News

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾನಲ್ಲಿ ನಟಿ ಜಾನ್ವಿ ಕಪೂರ್ ಅವರ ಪಾತ್ರವನ್ನು ಅತಿಯಾಗಿ ಗ್ಲಾಮರೈಸ್ ಮಾಡಿ ತೋರಿಸಲಾಗಿದೆ. ಇದು ಮಹಿಳೆಯರಿಗೆ ಮಾಡಿದ ಅವಮಾನ, ನಟಿಯರಿಗೆ ಮಾಡಿದ ಅವಮಾನ ಎಂಬ ಟೀಕೆ ವ್ಯಕ್ತವಾಗಿದೆ. ಅದರಲ್ಲೂ ಇದೇ ವಿಷಯವನ್ನು ಇರಿಸಿಕೊಂಡು ಬಾಲಿವುಡ್​​ನ ಕೆಲ ಮಂದಿ, ದಕ್ಷಿಣ ಭಾರತ ಚಿತ್ರರಂಗದ ದೂಷಣೆಗೆ ಮುಂದಾಗಿದ್ದು, ಮಹಿಳೆಯರನ್ನು ಭೋಗದ ವಸ್ತುವಿನಂತೆ ತೋರಿಸುವುದು ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಮಾನ್ಯ, ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಹಿಳೆಯರಿಗೆ ಗೌರವ ನೀಡುವುದಿಲ್ಲ ಎಂಬೆಲ್ಲ ದೂರುಗಳು ಕೇಳಿ ಬರುತ್ತಿವೆ. ಇದಕ್ಕೆ ನಟಿ ನಿತ್ಯಾ ಮೆನನ್ ಸರಿಯಾಗಿ ಪ್ರತ್ಯುತ್ತರ ನೀಡಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಟಿ ನಿತ್ಯಾ ಮೆನನ್, ‘ಸಿನಿಮಾಗಳಲ್ಲಿ ಮಹಿಳೆಯರನ್ನು ಭೋಗ ವಸ್ತುವಿನಂತೆ ತೋರಿಸುವುದು ಕೇವಲ ದಕ್ಷಿಣ ಭಾರತದ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ, ಇದು ಇಡೀ ಮನರಂಜನಾ ಉದ್ಯಮದಲ್ಲೇ ಇರುವ ಒಂದು ದೊಡ್ಡ ಪಿಡುಗಾಗಿದೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಾತ್ರ ಈ ಪಿಡುಗು ಇದೆ ಎನ್ನಲಾಗದು, ಇದು ಎಲ್ಲಾ ಕಡೆಯೂ ಇದೆ. ಇದೊಂದು ಟ್ರೆಂಡ್ ಆಗಿಬಿಟ್ಟಿದೆ ಮತ್ತು ಎಲ್ಲರೂ ಇದನ್ನು ಅನುಸರಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಕಮರ್ಶಿಯಲ್ ಆಗಿ ಯಾವುದು ವರ್ಕೌಟ್ ಆಗುತ್ತದೆಯೋ ಮತ್ತು ಪ್ರೇಕ್ಷಕರನ್ನು ಯಾವುದು ಹೆಚ್ಚು ಉತ್ತೇಜಿಸುತ್ತದೆಯೋ, ಅಂತಹ ವಿಷಯಗಳನ್ನು ಸಿನಿಮಾಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಹೀಗಾಗಿ ಕಲಾವಿದರು ತಮ್ಮದೇ ಆದ ಕೆಲವು ಗಡಿಗಳನ್ನು ಹಾಕಿಕೊಳ್ಳಬೇಕು ಎಂದು ನನಗನಿಸುತ್ತದೆ. ದೃಶ್ಯದಲ್ಲಿ ನಟಿಸುವ ವ್ಯಕ್ತಿಯು ತಮಗೆ ಇಷ್ಟವಿಲ್ಲದಿದ್ದರೆ ಕಟ್ಟುನಿಟ್ಟಾಗಿ ನಿರಾಕರಿಸುವ ಧೈರ್ಯ ತೋರಬೇಕು’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:Peddi Movie review: ‘ಪೆದ್ದಿ’: ರಾಮ್ ಚರಣ್ ಸಿಕ್ಸರ್, ನಿರ್ದೇಶಕ ರನೌಟ್

ನಟಿಯರು ಬಲವಾದ ನಿಯಮಗಳನ್ನು ಹೊಂದಿರಬೇಕು ಮತ್ತು ಕಲಾವಿದರಾಗಿ ತಮ್ಮ ಜವಾಬ್ದಾರಿಯನ್ನು ಅರಿತಿರಬೇಕು. ನಾನು ಕೆಲವು ರೀತಿಯ ಪಾತ್ರಗಳು ಅಥವಾ ದೃಶ್ಯಗಳಲ್ಲಿ ಎಂದಿಗೂ ನಟಿಸುವುದಿಲ್ಲ. ಇದು ನಿಮ್ಮ ಆದ್ಯತೆಗಳು ಮತ್ತು ಒಬ್ಬ ನಟ ಅಥವಾ ಕಲಾವಿದರಾಗಿ ನಿಮ್ಮ ಜವಾಬ್ದಾರಿ ಏನು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅಂಥಹಾ ದೃಶ್ಯಗಳನ್ನು ಒಪ್ಪಿಕೊಳ್ಳದ ಕಾರಣ ನನಗೆ ಸಿಗದ ಸಿನಿಮಾಗಳು ಅಥವಾ ಜಾನರ್‌ಗಳು ಇವೆಯೇ? ಖಂಡಿತಾ ಇವೆ. ಆದರೆ ನಾನು ಅವಕಾಶಗಳಿಗಿಂತಲೂ ನನ್ನ ಮೌಲ್ಯಗಳನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ನೀವು ಕೇವಲ ಟಾಪ್ ಸ್ಟಾರ್ ಆಗಲು ಏನು ಬೇಕಾದರೂ ಮಾಡಲು ಸಿದ್ಧರಿದ್ದರೆ, ಅದು ನಿಮ್ಮ ವೈಯಕ್ತಿಕ ನಿರ್ಧಾರವಾಗಿರುತ್ತದೆ’ ಎಂದು ನಿತ್ಯಾ ಹೇಳಿದ್ದಾರೆ.

ಜಾನ್ಹವಿ ಕಪೂರ್ ಪಾತ್ರವನ್ನು ಅತಿಯಾಗಿ ಗ್ಲಾಮರೈಸ್ ಮಾಡಿರುವ ಬಗ್ಗೆ ‘ಪೆದ್ದಿ’ ಸಿನಿಮಾ ಬಗ್ಗೆ ಟೀಕೆ ವ್ಯಕ್ತವಾಗಿದೆ. ಇದೀಗ ಸಿನಿಮಾದ ನಿರ್ದೇಶಕ ಬುಚ್ಚಿಬಾಬು ಸನಾ, ಜಾನ್ಹವಿಯ ದೃಶ್ಯಗಳಿಗೆ ಕತ್ತರಿ ಹಾಕುವುದಾಗಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *