ಪೊಲೀಸ್ ಕ್ವಾಟ್ರಸ್ ಜಾಗಕ್ಕೆ ಸ್ಕೆಚ್ ಹಾಕಿದ್ದ ಭೂಗಳ್ಳರು ಅಂದರ್: ಮೂವರು ಅರೆಸ್ಟ್​​

ಪೊಲೀಸ್ ಕ್ವಾಟ್ರಸ್ ಜಾಗಕ್ಕೆ ಸ್ಕೆಚ್ ಹಾಕಿದ್ದ ಭೂಗಳ್ಳರು ಅಂದರ್: ಮೂವರು ಅರೆಸ್ಟ್​​

ಬೆಂಗಳೂರು, ಏಪ್ರಿಲ್​​ 05: ಮಲ್ಲೇಶ್ವರಂನಲ್ಲಿನ ಪೊಲೀಸ್ ಕ್ವಾಟ್ರಸ್ ಜಾಗ ಕಬಳಿಸಲು ಸ್ಕೆಚ್​​ ಹಾಕಿದ್ದ ಭೂಗಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. 25 ಸಾವಿರ ಚದರಡಿ ಜಾಗವನ್ನು ಲಪಟಾಯಿಸಲು ಮುಂದಾಗಿದ್ದ ವಂಚಕರು, ಅದಕ್ಕೆ ಬೇಕಾದ ದಾಖಲೆಗಳನ್ನು ಕೂಡ ಸಿದ್ಧಪಡಿಸಿಕೊಂಡಿದ್ದರು. ಪ್ರಕರಣ ಸಂಬಂಧ ಕೃಷ್ಣ ಮೂರ್ತಿ, ಶ್ರೀನಾಥ್ ನಗರಗಡ್ಡೆ ಮತ್ತು ಕೃಷ್ಣ ಎಂಬವರನ್ನು ಅರೆಸ್ಟ್​​ ಮಾಡಲಾಗಿದ್ದು, ಇದೇ ರೀತಿ ನಗರದ ಹಲವು ಕಡೆ ಸರ್ಕಾರಿ ಜಾಗ ನುಂಗಿರುವ ಬಗ್ಗೆ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಈ ಬಗ್ಗೆ ಮಲ್ಲೇಶ್ವರಂ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ಏನು?

ಹಳೆಯ ಮಲ್ಲೇಶ್ವರಂ ಪೊಲೀಸ್ ಠಾಣೆ ಹಾಗೂ ಪೊಲೀಸ್ ವಸತಿ ಗೃಹಗಳಿರುವ ಜಾಗಕ್ಕೆ ತನ್ನದೇ ಆದ ಇತಿಹಾಸವಿದೆ. 1913ರ ಮಾಪನ ನಕ್ಷೆಯಲ್ಲಿಯೇ ಈ ಪ್ರದೇಶವನ್ನು ಪೊಲೀಸ್ ವಸತಿಗೃಹ ಎಂದು ಗುರುತಿಸಲಾಗಿದೆ. ಈಗ ಅದೇ ಜಾಗದಲ್ಲಿನ ವಸತಿಗೃಹಗಳಲ್ಲಿ ನಾಲ್ವರು ಇನ್ಸ್‌ಪೆಕ್ಟರ್‌ಗಳ ಕುಟುಂಬಗಳು ವಾಸಿಸುತ್ತಿವೆ. ಆದರೆ ಇತ್ತೀಚೆಗೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಕುಮಾರ್ ಅವರ ಮನೆಗೆ ಬಂದ ವಿದ್ಯುತ್ ಬಿಲ್​​ ಆರೋಪಿಗಳ ಕಳ್ಳಾಟವನ್ನು ಬಯಲು ಮಾಡಿದೆ. ​​ಮಹಾಲಕ್ಷ್ಮೀ ಎಂಬ ಖಾಸಗಿ ವ್ಯಕ್ತಿಯ ಹೆಸರಲ್ಲಿ ಬಿಲ್​​ ಬಂದಿರೋದು ಅನುಮಾನಕ್ಕೆ ಕಾರಣವಾಗಿ ವಿಚಾರಣೆಗಿಳಿದಾಗ ಪೊಲೀಸ್ ಕ್ವಾಟ್ರಸ್ ಜಾಗ ಕಬಳಿಸಲು ಖದೀಮರು ಸ್ಕೆಚ್​​ ಹಾಕಿರೋದು ಗೊತ್ತಾಗಿತ್ತು.

ಇದನ್ನೂ ಓದಿ: ಪೊಲೀಸ್ ಇಲಾಖೆಗೆ ಸೇರಿದ 80 ಕೋಟಿ ರೂ. ಮೌಲ್ಯದ ಆಸ್ತಿ ಕಬಳಿಕೆ! ಬೆಸ್ಕಾಂ ಅಧಿಕಾರಿಗಳು ಸೇರಿ ಹಲವರ ಮೇಲೆ ಎಫ್ಐಆರ್

ಖಾಸಗಿ ಹೆಸರಲ್ಲಿ ವಿದ್ಯುತ್​​ ಬಿಲ್​​ ಬಂದಿದ್ದು ಹೇಗೆ ಎಂದು ಸಂಬಂಧಿತ ಕಚೇರಿಗೆ ಭೇಟಿ ನೀಡಿ ವಿಚಾರಿಸಿದಾಗ ದಾಖಲೆಗಳನ್ನು ಅಕ್ರಮವಾಗಿ ಮಹಾಲಕ್ಷ್ಮೀ ಎಂಬವರ ಹೆಸರಿಗೆ ವರ್ಗಾವಣೆ ಮಾಡಿರುವುದು ಬಹಿರಂಗವಾಗಿತ್ತು. ಅಲ್ಲದೆ ಬಿಬಿಎಂಪಿ ಮೂಲಕ ಅಕ್ರಮವಾಗಿ ಇ-ಖಾತಾ ಮಾಡಿಸಿರುವುದು ಹಾಗೂ ಕೃಷ್ಣಮೂರ್ತಿ ಎಂಬಾತನಿಗೆ ಮಾರಾಟ ಮಾಡಲು ಒಪ್ಪಂದ ಪತ್ರ ಕೂಡ ಮಾಡಿರುವ ವಿಚಾರ ಜಾಗದಲ್ಲಿ ಹಾಲಿ ವಾಸವಿದ್ದ ಪೊಲೀಸ್​​ ಅಧಿಕಾರಿಗಳಿಗೇ ಶಾಕ್​​ ನೀಡಿತ್ತು. ಇಷ್ಟು ಸಾಲದ್ದಕ್ಕೆ ಈ ನಡುವೆ ಜಾಗ ಖಾಲಿ ಮಾಡಿಸುತ್ತೇನೆ ಎಂದು ಖಾಸಗಿ ವ್ಯಕ್ತಿಯ ಕಡೆಯವರು ಪೊಲೀಸ್​​ ಅಧಿಕಾರಿಗಳ ಕುಟುಂಬಕ್ಕೇ ಬೆದರಿಕೆ ಹಾಕಿರುವ ಆರೋಪವೂ ಕೇಳಿಬಂದಿತ್ತು. ಈ ಎಲ್ಲ ಘಟನೆಯ ಬಗ್ಗೆ ಪ್ರಸ್ತುತ ಲೋಕಾಯುಕ್ತ ಇನ್ಸ್‌ಪೆಕ್ಟರ್ ಕುಮಾರ್ ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *