ಬೆಂಗಳೂರು, (ಏಪ್ರಿಲ್ 22): ಬೆಂಗಳೂರಿನಲ್ಲಿ ಪ್ರೇಯಸಿಯೊಬ್ಬಳು, ವೆಸ್ಟರ್ನ್ ಸ್ಟೈಲ್ ನಲ್ಲಿ ಪ್ರಪೋಸ್ ಮಾಡ್ತೀನಿ ಬಾ ಎಂದು ತನ್ನ ಪ್ರಿಯಕರನನ್ನ ಮನೆಗೆ ಕರೆಯಿಸಿಕೊಂಡಿದ್ದು, ಬಳಿಕ ಪ್ರಿಯಕರನ ಕೈಕಾಲು ಕಟ್ಟಿ, ಬಟ್ಟೆ ಬಿಚ್ಚಿದ್ದಾಳೆ. ಬಳಿಕ ಪ್ರಪೋಸ್ ಮಾಡ್ತಾಳೆ ಅಂತಾ ಅಂದ್ಕೊಂಡಿದ್ದ ಯುವಕನ ಮೇಲೆ ಪ್ರೇಯಸಿಯೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಸದ್ಯ ಪ್ರಕರಣ ಸಂಬಂಧ ಪ್ರೇಯಿಸಿ ಪ್ರೇಮಾಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇನ್ನೊಂದೆಡೆ ಇದ್ದ ಒಬ್ಬನೇ ಮಗ ಕಿರಣ್ನನ್ನು ಕಳೆದುಕೊಂಡ ತಂದೆ ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಅವಳಿಗೂ ಕಠಿಣ ಶಿಕ್ಷೆಯಾಗಬೇಕೆಂದು ಕಣ್ಣೀರಿಟ್ಟಿದ್ದಾರೆ.