ನವದೆಹಲಿ, ಜುಲೈ 2: ಆತ ಕಾಲೇಜು ಮುಗಿಸಿದ ಯುವಕ. ವಯಸ್ಸು ಕೇವಲ 22. ಆತನ ವಯಸ್ಸಿನಲ್ಲಿ ಹುಡುಗಿಯರ ಮೇಲೆ ಲವ್ ಆಗೋದು ಸಹಜ ಬಿಡಿ. ಆದರೆ, ಆತನಿಗೆ ಲವ್ ಆಗಿದ್ದು ಹುಡುಗಿಯ ಮೇಲಲ್ಲ; ತನ್ನ ಅಜ್ಜಿಯ ವಯಸ್ಸಿನ ವೃದ್ಧೆಯ ಮೇಲೆ. ತನಗಿಂತಲೂ 50 ವರ್ಷ ದೊಡ್ಡವರಾದ ಆಗರ್ಭ ಶ್ರೀಮಂತೆಯಾದ 72 ವರ್ಷ ವಯಸ್ಸಿನ ವೃದ್ಧೆಯನ್ನು ಲವ್ ಮಾಡಿದ ಆ ಯುವಕ ಅವರನ್ನೇ ಮದುವೆಯಾಗಿದ್ದಾನೆ! ಇದು ಯಾವ ರೀತಿಯ ಲವ್ ಸ್ಟೋರಿ (Love Story) ಎಂದು ನೀವು ಆಶ್ಚರ್ಯಪಡಬಹುದು. ಆ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.
ಈ ಕುತೂಹಲಕಾರಿ ಕತೆ ಡೊಮಿನಿಕನ್ ಗಣರಾಜ್ಯದ 22 ವರ್ಷದ ಡೇನಿಯಲ್ ರಾಮಿರೆಜ್ ಮತ್ತು ಯುನೈಟೆಡ್ ಸ್ಟೇಟ್ಸ್ನ 72 ವರ್ಷದ ಎಲೀನರ್ ಹೆಡ್ಜ್ ಅವರದು. ಡೇನಿಯಲ್ ತನ್ನ ಕುಟುಂಬದ ಸಣ್ಣ ಕೆಫೆಯಲ್ಲಿ ಸಹಾಯ ಮಾಡುತ್ತಾನೆ. ಸುಮಾರು 2 ವರ್ಷಗಳ ಹಿಂದೆ ಅಮೆರಿಕದ ಫ್ಲೋರಿಡಾ ನಿವಾಸಿ ಮತ್ತು ಮಿಲಿಯನೇರ್ ರಿಯಲ್ ಎಸ್ಟೇಟ್ ಹೂಡಿಕೆದಾರ ಎಲೀನರ್ ಹೆಡ್ಜ್ ವಿಹಾರಕ್ಕೆ ಪಂಟಾ ಕಾನಾಗೆ ಬಂದಾಗ, ಇಬ್ಬರೂ ಭೇಟಿಯಾದರು. ಕ್ರಮೇಣ, ಈ ಭೇಟಿಯು ಪ್ರೀತಿಗೆ ತಿರುಗಿತು. ಕಳೆದ ತಿಂಗಳು, ಇಬ್ಬರೂ ಮಿಯಾಮಿಯಲ್ಲಿ ವಿವಾಹವಾದರು.
ಇದನ್ನೂ ಓದಿ: ಪುರುಷರು ಮದುವೆಗೂ ಮುನ್ನ ಸಂಗಾತಿಯ ಬಗ್ಗೆ ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು
50 ವರ್ಷಗಳ ವಯಸ್ಸಿನ ಅಂತರದ ಹೊರತಾಗಿಯೂ, ದಂಪತಿ ತಮ್ಮ ಬಾಂಧವ್ಯವು ತುಂಬಾ ಪ್ರಬಲವಾಗಿದೆ ಎಂದು ಹೇಳುತ್ತಾರೆ. ಮಾಧ್ಯಮಗಳೊಂದಿಗೆ ಮಾತನಾಡುವಾಗ ಡೇನಿಯಲ್ ಭಾವುಕನಾಗಿದ್ದಾನೆ. “ಅವಳೇ ನನ್ನ ಜೀವನ.. ನಾವು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತೇವೆ. ವಯಸ್ಸು ಕೇವಲ ಒಂದು ನಂಬರ್ ಮಾತ್ರ. ಅವಳು ನನ್ನನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದಾಳೆ. ನಾನು ಅವಳಿಗೆ ಮತ್ತೊಮ್ಮೆ ಮುಕ್ತವಾಗಿ ಮತ್ತು ಸಂತೋಷದಿಂದ ಬದುಕಲು ಕಲಿಸುತ್ತಿದ್ದೇನೆ” ಎಂದು ಆತ ಹೇಳಿದ್ದಾನೆ.
ತನ್ನ ಮೊದಲ ಗಂಡನ ಮರಣದ ನಂತರ ಒಂಟಿಯಾಗಿದ್ದ ಎಲೀನರ್ ಡೇನಿಯಲ್ನಲ್ಲಿ ನಿಜವಾದ ಮತ್ತು ಪ್ರಾಮಾಣಿಕ ಸಂಗಾತಿಯನ್ನು ಕಂಡುಕೊಂಡಿದ್ದಾರಂತೆ. ಈ ಮದುವೆಯ ಸುದ್ದಿ ಎಲೀನರ್ ಅವರ ಮಕ್ಕಳನ್ನು ಸ್ವಲ್ಪ ಗೊಂದಲಕ್ಕೀಡು ಮಾಡಿದೆ. @psychological ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ದಂಪತಿಗಳ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗಿವೆ.
ಇದನ್ನೂ ಓದಿ: ತಾಳಿ ಕಿತ್ತೆಸೆದು ಹೋಗಿದ್ದವಳೇ ಮತ್ತೆ ಕಟ್ಟಿಸಿಕೊಂಡಳು! ಇದು ಪೇಂಟರ್ ಹುಡುಗ, ಶ್ರೀಮಂತ ಹುಡುಗಿಯ ಸಿನಿಮೀಯ ಲವ್ ಸ್ಟೋರಿ
“ಈ ಜಗತ್ತಿನಲ್ಲಿ ಶುದ್ಧ ಪ್ರೀತಿ ಇನ್ನೂ ಅಸ್ತಿತ್ವದಲ್ಲಿದೆ ಎಂಬುದಕ್ಕೆ ಅವು ಪುರಾವೆ, ಅವರಿಗೆ ನನ್ನ ಶುಭಾಶಯಗಳು” ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು “ಇದು ಪ್ರೀತಿಯಲ್ಲ, ಆ ಹುಡುಗ ಅವಳ ಬ್ಯಾಂಕ್ ಬ್ಯಾಲೆನ್ಸ್ಗೆ ಬಿದ್ದಿದ್ದಾನೆ” ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ