ಪ್ಲೀಸ್ ಸಾಯಬೇಡಮ್ಮ; ರೈಲು ಹಳಿ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ತಾಯಿಯನ್ನು ಕಾಪಾಡಿದ 7 ವರ್ಷದ ಮಗಳು

ಪ್ಲೀಸ್ ಸಾಯಬೇಡಮ್ಮ; ರೈಲು ಹಳಿ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ತಾಯಿಯನ್ನು ಕಾಪಾಡಿದ 7 ವರ್ಷದ ಮಗಳು

ನವದೆಹಲಿ, ಮಾರ್ಚ್ 17: ಅಲಿಘರ್ ರೈಲು ನಿಲ್ದಾಣದಲ್ಲಿ ಯಾರೂ ಊಹಿಸದ ಘಟನೆಯೊಂದು ನಡೆದಿದೆ. ರೈಲು ಇನ್ನೇನು ಸ್ಟೇಷನ್​ಗೆ ತಲುಪಬೇಕು ಎನ್ನುವಷ್ಟರಲ್ಲಿ ತನ್ನ ಮಗಳ ಜೊತೆ ರೈಲಿಗಾಗಿ ಕಾಯುತ್ತಿದ್ದ ಮಹಿಳೆ ರೈಲು ಹಳಿ ಮೇಲೆ ಹಾರಿದ್ದಳು. ಆತ್ಮಹತ್ಯೆಗೆ ಯತ್ನಿಸಿದ ಆಕೆಯ ಹಿಂದೆಯೇ ಓಡಿದ 7 ವರ್ಷದ ಮಗಳು ಅಮ್ಮಾ ಬೇಡಮ್ಮಾ ಎನ್ನುತ್ತಾ ಕೂಗತೊಡಗಿದ್ದಾಳೆ. ಆಕೆಯ ಕಿರುಚಾಟ ಕೇಳಿದ ನಂತರ ಇತರ ಪ್ರಯಾಣಿಕರು ಮತ್ತು ಜಿಆರ್‌ಪಿ ಸಿಬ್ಬಂದಿ ಓಡಿ ಬಂದು ಆ ಮಹಿಳೆಯನ್ನು ಕಾಪಾಡಿದ್ದಾರೆ.

ಮನೆಯಲ್ಲಿನ ಕೌಟುಂಬಿಕ ಹಿಂಸಾಚಾರದಿಂದ ನೊಂದಿದ್ದ ಮಹಿಳೆ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದಳು. ರೈಲು ಸಮೀಪಿಸುತ್ತಿರುವುದನ್ನು ನೋಡಿದ ಆಕೆ ಹಳಿಗಳ ಕಡೆಗೆ ಹೋದಳು. ಅಷ್ಟರಲ್ಲೇ ಅವರ 7 ವರ್ಷದ ಮಗಳು ಟ್ವಿಂಕಲ್ ಓಡಿ ಬಂದು ಆಕೆಯನ್ನು ಹಿಡಿದುಕೊಂಡಳು. ಆ ಬಾಲಕಿ ಜೋರಾಗಿ ಕೂಗುತ್ತಿದ್ದಳು “ಅಮ್ಮ, ಬೇಡಮ್ಮಾ, ಸಾಯೋದು ಬೇಡಮ್ಮ” ಎಂದು ಅಳುತ್ತಿದ್ದಳು. ಅಮ್ಮನನ್ನು ಹಳಿಯಿಂದ ಹಿಂದಕ್ಕೆ ಎಳೆಯಲು ಪ್ರಯತ್ನಿಸುತ್ತಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆಕೆಯ ಕೂಗು ಕೇಳಿ ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಸ್ಥಳಕ್ಕೆ ಧಾವಿಸಿದರು. ಆ ಮಹಿಳೆಯನ್ನು ರಕ್ಷಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Leave a Reply

Your email address will not be published. Required fields are marked *