ಕೊಪ್ಪಳ, ಏಪ್ರಿಲ್ 26: ಮುದ್ಲಾಪೂರ ಬಳಿಯ ಹಿರೇಹಳ್ಳ ಜಲಾಶಯ ಸಂಪೂರ್ಣವಾಗಿ ಬತ್ತಿದ್ದು, ನೀರಿಲ್ಲದೆ ಭಣಗುಡುತ್ತಿದೆ. ಬರಿದಾಗಿರುವ 1.67 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯವನ್ನೇ ಮಕ್ಕಳು, ಯುವಕರು ಆಟದ ಮೈದಾನ ಮಾಡಿಕೊಂಡು ಕ್ರಿಕೆಟ್ ಆಡುತ್ತಿದ್ದಾರೆ. ಹತ್ತು ವರ್ಷಗಳ ನಂತರ ಜಲಾಶಯ ಬರಿದಾಗಿದ್ದು, ಕೇವಲ ಶೇ.20ರಷ್ಟು ನೀರು ಮಾತ್ರ ಉಳಿದಿದೆ. ಇನ್ನೊಂದು ತಿಂಗಳು ಕಳೆದರೆ ಹನಿ ನೀರು ಕೂಡ ಜಲಾಶಯದಲ್ಲಿ ಸಿಗದ ಸ್ಥಿತಿ ತಲುಪಲಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.