Headlines

ಬಾಂಗ್ಲಾದೇಶ ಆಟಗಾರನನ್ನು ಖರೀದಿಸಿದ ಕಾವ್ಯಾ ಮಾರನ್ – Kannada News | Kavya Maran Sparks New Controversy: Sunrisers Eastern Cape Signs Bangladesh Player Rishad Hossain

ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್‌ನ ಮಾಲೀಕರಾದ ಕಾವ್ಯಾ ಮಾರನ್ (Kavya Maran) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ, ಚರ್ಚೆಗೆ ಕಾರಣ ತಂಡದ ಪ್ರದರ್ಶನವಲ್ಲ, ಬದಲಿಗೆ ತಮ್ಮ ಮಾಲೀಕತ್ವದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ (Sunrisers Eastern Cape) ತಂಡಕ್ಕೆ ಬಾಂಗ್ಲಾದೇಶ ಆಟಗಾರನನ್ನು ಖರೀದಿಸಿರುವುದು. ಕೆಲವು ತಿಂಗಳ ಹಿಂದೆ ಇದೇ ಕಾವ್ಯಾ ಮಾರನ್ ತಮ್ಮ ತಂಡಕ್ಕೆ ಪಾಕಿಸ್ತಾನದ ಆಟಗಾರನನ್ನು ಖರೀದಿಸಿ ವಿವಾದಕ್ಕೆ ಕಾರಣರಾಗಿದ್ದರು. ಇದೀಗ ಬಾಂಗ್ಲಾದೇಶ ಆಟಗಾರನನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ವಾಸ್ತವವಾಗಿ ಕಾವ್ಯಾ ಮಾರನ್ ಐಪಿಎಲ್‌ನಲ್ಲಿ ತಂಡವನ್ನು ಹೊಂದಿರುವಂತೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಎಸ್​ಎ20 ಲೀಗ್​ನಲ್ಲೂ ತಂಡವನ್ನು ಹೊಂದಿದ್ದಾರೆ. ಈ ಲೀಗ್​ನಲ್ಲಿ ಕಾವ್ಯಾ ಮಾರನ್ ಮಾಲೀಕತ್ವದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಫ್ರಾಂಚೈಸಿ ಮುಂಬರುವ ಆವೃತ್ತಿಗಾಗಿ ಬಾಂಗ್ಲಾದೇಶದ ಸ್ಪಿನ್ನರ್ ರಿಷದ್ ಹೊಸೈನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ.

ಈಸ್ಟರ್ನ್ ಕೇಪ್ ತಂಡಕ್ಕೆ ಹೊಸ ಎಂಟ್ರಿ

ಎಲ್ಲಾ ಆರು ಫ್ರಾಂಚೈಸಿಗಳು ಮುಂಬರುವ ಹೊಸ ಆವೃತ್ತಿಗೂ ಮುನ್ನ ತಮ್ಮ ತಂಡದಲ್ಲಿ ಉಳಿಸಿಕೊಂಡಿರುವ ಹಾಗೂ ತಂಡಕ್ಕೆ ಹೊಸದಾಗಿ ಸೇರಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಅದರಂತೆ ಹಾಲಿ ಚಾಂಪಿಯನ್ ಸನ್‌ರೈಸರ್ಸ್ ಈಸ್ಟರ್ನ್ ಕೇಪ್, ನಾಯಕ ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಯಾನ್ಸನ್ ಮತ್ತು ಕ್ವಿಂಟನ್ ಡಿ ಕಾಕ್ ಅವರಂತಹ ದಿಗ್ಗಜರನ್ನು ಉಳಿಸಿಕೊಂಡಿದೆ. ಇವರ ಜೊತೆಗೆ ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಮಿಚೆಲ್ ಮಾರ್ಷ್ ಅವರನ್ನು ತಂಡಕ್ಕೆ ಹೊಸದಾಗಿ ಸೇರಿಸಿಕೊಂಡಿದ್ದು, ಇವರ ಜೊತೆಗೆ ಬಾಂಗ್ಲಾದೇಶ ಸ್ಪಿನ್ನರ್ ರಿಯಾದ್ ಹೊಸೈನ್ ಅವರನ್ನು ಸಹ ತಂಡಕ್ಕೆ ಆಯ್ಕೆ ಮಾಡಿದೆ.

ಬಾಂಗ್ಲಾ ಆಟಗಾರನ ಖರೀದಿ

ತಂಡದ ಆಫ್ಘನ್ ಸ್ಪಿನ್ನರ್ ಅಲ್ಲಾ ಗಜನ್‌ಫರ್ ಈ ಬಾರಿ ಲೀಗ್‌ನ ಭಾಗವಾಗಿರದ ಕಾರಣ ಕಾವ್ಯ ಮಾರನ್ ಫ್ರಾಂಚೈಸಿ ಬಾಂಗ್ಲಾದೇಶದ ಲೆಗ್-ಸ್ಪಿನ್ನರ್ ರಿಷದ್ ಹೊಸೈನ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ಕಾವ್ಯಾ ಮಾರನ್ ಈ ಬಾಂಗ್ಲಾದೇಶ ಸ್ಪಿನ್ನರ್ ಅನ್ನು ಖರೀದಿಸಿರುವುದು ಭಾರತೀಯರ ಕೋಪವನ್ನು ಹೆಚ್ಚಿಸಿದೆ. ಏಕೆಂದರೆ ಇದೇ ಕಾವ್ಯಾ ಮಾರನ್ ದಿ ಹಂಡ್ರೆಡ್‌ ಲೀಗ್​ನಲ್ಲಿ ತನ್ನ ತಂಡಕ್ಕೆ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ ಅಹ್ಮದ್ ಅವರನ್ನು ಖರೀದಿಸಿದ್ದರು. ಆ ಸಮಯದಲ್ಲಿ ಕಾವ್ಯಾ ವಿರುದ್ಧ ದೇಶದಲ್ಲಿ ಆಕ್ರೋಶ ಭುಗಿಲೆದಿತ್ತು.

ಇದೀಗ ಮತ್ತೊಮ್ಮೆ ಕಾವ್ಯಾ ಮಾರನ್ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ಕಳೆದ ಒಂದೂವರೆ ವರ್ಷದಿಂದ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಹದಗೆಟ್ಟಿರುವುದು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರವನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಇದರ ಪರಿಣಾಮವಾಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಹೊರ ಹಾಕಲಾಗಿತ್ತು. ಇದರಿಂದ ಕೆರಳಿದ್ದ ಬಾಂಗ್ಲಾದೇಶ ಕೂಡ ಭಾರತದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಆಡಲು ನಿರಾಕರಿಸಿತು. ಇದರ ನಂತರ, ಎರಡೂ ದೇಶಗಳ ಕ್ರಿಕೆಟ್ ಮಂಡಳಿಗಳ ನಡುವಿನ ಸಂಬಂಧಗಳು ಇನ್ನಷ್ಟು ಹದಗೆಟ್ಟಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:44 pm, Wed, 5 August 26

Source link

Leave a Reply

Your email address will not be published. Required fields are marked *