Headlines

ಬಾಯ್​​ಫ್ರೆಂಡ್ ಪರಿಚಯಿಸಿದ ನಟಿ ಅಮೂಲ್ಯ ಗೌಡ; ಹೊಸ ವೆಂಚರ್ ಶುರು – Kannada News | Kamali Serial Fame Amulya Gowda Introduces Boyfriend Niranjan and Announces New YouTube Channel

ನಟಿ ಅಮೂಲ್ಯ ಗೌಡ (Amulya Gowda) ಸಾಕಷ್ಟು ವರ್ಷಗಳಿಂದ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಹೊಸ ಹೊಸ ಆಫರ್​ಗಳು ಬರುತ್ತಿವೆ. ಸದ್ಯ ಅವರು ಉದಯ ಟಿವಿಯಲ್ಲಿ ‘ಮಹಾಲಕ್ಷ್ಮಿ ಮದುವೆ’  ಹೆಸರಿನ ಧಾರಾವಾಹಿ ಮಾಡುತ್ತಿದ್ದಾರೆ. ಈಗ ಅವರು ಅಭಿಮಾನಿಗಳಿಗೆ ಒಂದು ಗುಡ್​ ನ್ಯೂಸ್ ನೀಡಿದ್ದಾರೆ. ಹಲವು ವರ್ಷಗಳಿಂದ ಹರಿದಾಡುತ್ತಿದ್ದ ವದಂತಿಯನ್ನು ಅಮೂಲ್ಯ ನಿಜ ಎಂದು ಒಪ್ಪಿಕೊಂಡಿದ್ದಾರೆ.

2018ರಿಂದ 2022ರವರೆಗೆ ಜೀ ಕನ್ನಡದಲ್ಲಿ ಪ್ರಸಾರ ಕಂಡ ‘ಕಮಲಿ’ ಧಾರಾವಾಹಿಯಲ್ಲಿ ಅಮೂಲ್ಯ ನಟಿಸಿದ್ದರು. ಇವರಿಗೆ ಜೊತೆಯಾಗಿ ನಿರಂಜನ್ ಬಣ್ಣ ಹಚ್ಚಿದ್ದರು. ಆ ಸಮಯದಲ್ಲೇ ಇವರು ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಇದನ್ನು ಅವರು ಎಂದಿಗೂ ನೇರವಾಗಿ ಒಪ್ಪಿಕೊಂಡಿರಲಿಲ್ಲ. ಈಗ ಅದಕ್ಕೆ ಸಮಯ ಬಂದಿದೆ. ಹೊಸ ಯೂಟ್ಯೂಬ್ ಚಾನೆಲ್ ಮಾಡಿರೋ ಅಮೂಲ್ಯ ಗೌಡ ಅವರು, ಪ್ರೀತಿ ವಿಷಯವನ್ನು ಅಧಿಕೃತ ಮಾಡಿದ್ದಾರೆ.

ಇದನ್ನೂ ಓದಿ: ‘ಸನ್‌ ಉದಯ’ ಟಿವಿಯಲ್ಲಿ ಅಮೂಲ್ಯ ಗೌಡ ಹೊಸ ಧಾರಾವಾಹಿ ‘ಮಹಾಲಕ್ಷ್ಮೀ ಮದುವೆ’

ಈ ಮೊದಲು ‘ನಿರಂಜನ್ ಅವರೇನಾ ನಿಮ್ಮ ಬಾಯ್​ಫ್ರೆಂಡ್’ ಎಂದು ಕೇಳಿದಾಗ ಅಮೂಲ್ಯ ಅವರು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದರು. ‘ನಾನು ಈಗಲೇ ಏನೂ ಹೇಳೋಲ್ಲ’ ಎಂದು ಹೇಳಿ ಜಾರಿಕೊಳ್ಳುತ್ತಿದ್ದರು. ಅವರು ಪ್ರೀತಿ ವಿಷಯವನ್ನು ಒಪ್ಪಿಕೊಂಡೂ ಇರಲಿಲ್ಲ, ನಿರಾಕರಿಸಿಯೂ ಇರಲಿಲ್ಲ. ಈಗ ಪ್ರೀತಿ ವಿಷಯವನ್ನು ಅಧಿಕೃತಮಾಡಿದ್ದಾರೆ.

ಬಾಯ್​​ಫ್ರೆಂಡ್ ರಿವೀಲ್ ವಿಡಿಯೋ ಹಂಚಿಕೊಂಡಿರೋ ಅಮೂಲ್ಯ ಗೌಡ, ಅದರಲ್ಲಿ ನಿರಂಜನ್ ಅವರನ್ನೂ ಕರೆತಂದಿದ್ದಾರೆ. ಇಬ್ಬರೂ ಮೊದಲು ಭೇಟಿ ಆಗಿದ್ದು ಎಲ್ಲಿ, ಯಾವ ಗುಣ ಇಷ್ಟ ಆಯಿತು ಎಂಬಿತ್ಯಾದಿ ವಿಷಯಗಳನ್ನು ಹೇಳಿಕೊಂಡಿದ್ದಾರೆ. ಆ ಬಳಿಕ ಇಬ್ಬರೂ ಪ್ರೀತಿ ವಿಷಯ ಒಪ್ಪಿಕೊಂಡಿದ್ದಾರೆ. ಇಬ್ಬರೂ ಒಟ್ಟಾಗಿ ಯೂಟ್ಯೂಬ್ ಚಾನೆಲ್ ನಡೆಸೋದಾಗಿ ಹೇಳಿದ್ದಾರೆ. ಈ ಮೂಲಕ ಶೀಘ್ರವೇ ಇವರು ಮದುವೆ ಆಗೋ ಸೂಚನೆ ನೀಡಿದ್ದಾರೆ. ನಿರಂಜನ್ ಅವರು ಸ್ಟಾರ್ ಸುವರ್ಣದಲ್ಲಿ ‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *