ಬಾಲಯ್ಯ ಜನ್ಮದಿನಕ್ಕೆ ‘NBK 111’ ಧಮಾಕಾ: ‘ನ್ಯೂ ಏಜ್’ ಲುಕ್​ನಲ್ಲಿ ಬಂದ ನಂದಮೂರಿ – Kannada News

ನಟ ನಂದಮೂರಿ ಬಾಲಕೃಷ್ಣ ಅವರ 65ನೇ ಜನ್ಮದಿನದ (ಜೂನ್ 10) ಅಂಗವಾಗಿ, ಅವರ ನಟನೆಯ 111ನೇ ಚಿತ್ರದ (NBK111) ಮೊದಲ ಝಲಕ್ ಬಿಡುಗಡೆಯಾಗಿದೆ. ‘ಎಂಟ್ರಿ ಆಫ್ ಆನ್ ಎರಾ’ ಹೆಸರಿನ ಈ ಗ್ಲಿಂಪ್ಸ್ ವೀಡಿಯೋ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಬಾಲಯ್ಯ ಎನರ್ಜಿ ನೋಡಿ ಎಲ್ಲರೂ ಅಚ್ಚರಿ ಹೊರಹಾಕಿದ್ದಾರೆ.

‘ನೋ ಮೋರ್ ವಿಂಟೇಜ್, ಓನ್ಲಿ ನ್ಯೂ ಏಜ್’ ಹೆಸರಿನ ಟ್ಯಾಗ್‌ಲೈನ್‌ನೊಂದಿಗೆ ಈ ವೀಡಿಯೋ ಹೊರಬಂದಿದೆ. ಬಾಲಕೃಷ್ಣ ಅವರ ಎಂದಿನ ಸಾಂಪ್ರದಾಯಿಕ ಮಾಸ್ ಶೈಲಿಗಿಂತ ಇದು ಸಂಪೂರ್ಣ ಭಿನ್ನವಾಗಿದೆ. ಹೈ-ಬಜೆಟ್ ಮೇಕಿಂಗ್ ಹಾಗೂ ಹೊಚ್ಚಹೊಸ ಮಾಡರ್ನ್ ಲುಕ್‌ನಲ್ಲಿ ಬಾಲಯ್ಯ ಅಬ್ಬರಿಸಿದ್ದಾರೆ.
ಈ ಚಿತ್ರಕ್ಕೆ ‘ಕಾಂತಾರ’ ಖ್ಯಾತಿಯ ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡುತ್ತಿದ್ದಾರೆ ಎಂಬುದು ವಿಶೇಷ. ಹೀಗಾಗಿ ದೃಶ್ಯಗಳು ಹೊಸ ಶೈಲಿಯಲ್ಲಿ ಮೂಡಿ ಬಂದಿವೆ. ಇವರ ಅದ್ಭುತ ವಿಶುವಲ್ಸ್‌ಗೆ ಎಸ್‌ ತಮನ್ ತಮ್ಮ ಬಿಜಿಎಂ ಮೂಲಕ ಜೀವ ತುಂಬಿದ್ದಾರೆ. ಇದು ಹಳೆಯ ಕಾಲ ಹಾಗೂ ಇಂದಿನ ಕಾಲಘಟ್ಟದಲ್ಲಿ ನಡೆಯುವ ಐತಿಹಾಸಿಕ ಆಕ್ಷನ್ ಡ್ರಾಮಾ ಸಿನಿಮಾವಾಗಿದೆ.

ಬಾಲಯ್ಯ  ಸಿನಿಮಾ ಪೋಸ್ಟರ್

ಭಾರಿ ತಾರಾಗಣ, ಬಿಗ್ ಬಜೆಟ್:

ಗೋಪಿಚಂದ್ ಮಲಿನೇನಿ ನಿರ್ದೇಶನದ ಈ ಪ್ಯಾನ್-ಇಂಡಿಯಾ ಚಿತ್ರದಲ್ಲಿ ಲೇಡಿ ಸೂಪರ್‌ಸ್ಟಾರ್ ನಯನತಾರಾ ನಾಯಕಿಯಾಗಿದ್ದಾರೆ. ಮನೋಜ್ ಮಂಚು ಮತ್ತು ಸಮುದ್ರಖನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಸತೀಶ್ ಕಿಲ್ಲಾರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದು, ಸಿನಿಮಾದಲ್ಲಿ ಭಾರಿ ವಿಎಫ್‌ಎಕ್ಸ್ ಇರಲಿದೆ.

ಇದನ್ನೂ ಓದಿ: ‘ಜೈಲರ್ 2’ ಸಿನಿಮಾದಿಂದ ಬಾಲಯ್ಯ ಔಟ್? ವಿಜಯ್ ಸೇತುಪತಿಗೆ ದೊಡ್ಡ ಚಾನ್ಸ್

ಹೈದರಾಬಾದ್‌ನಲ್ಲಿ ಸದ್ಯ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾ ರಿಲೀಸ್ ಡೇಟ್​ ಅನ್ನು ಚಿತ್ರತಂಡ ಘೋಷಿಸಿಲ್ಲ. ಆದರೆ, ಸಿನಿಮಾ ನವೆಂಬರ್ 20 ರಂದು ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ. ‘ಅಖಂಡ 2’ ಬಳಿಕ ಮತ್ತೆ ಅಬ್ಬರಿಸಲು ಬಾಲಯ್ಯ ರೆಡಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:36 am, Thu, 11 June 26

Source link

Leave a Reply

Your email address will not be published. Required fields are marked *