Headlines

ಬಿಗ್​​ಬಾಸ್ ಸ್ಪರ್ಧಿಗಳಿಗೆ ಎದುರಾಗಲಿದೆ ಅಗ್ನಿಪರೀಕ್ಷೆ, ಎದುರಿದ್ದಾರೆ ನಾಲ್ವರು ತೀರ್ಪುಗಾರರು – Kannada News | Bigg Boss Agniparikshe, Four ex Bigg Boss contestants will be Jury

ಬಿಗ್​​ಬಾಸ್ ಕನ್ನಡ (Bigg Boss Kannada) ಹೊಸ ಸೀಸನ್ ಪ್ರಾರಂಭಕ್ಕೆ ದಿನಗಳಷ್ಟೆ ಬಾಕಿ ಇದೆ. ಮುಂದಿನ ವಾರವೇ ಕಾರ್ಯಕ್ರಮ ಪ್ರಾರಂಭ ಆಗಲಿದೆ. ಈ ಬಾರಿ ಸಾಮಾನ್ಯರಿಗೂ ಸಹ ಬಿಗ್​​ಬಾಸ್ ಮನೆಗೆ ಟಿಕೆಟ್ ನೀಡಲಾಗಿದೆ. ಈ ಬಾರಿ ಸಾಕಷ್ಟು ವಿಶೇಷತೆಗಳು ಬಿಗ್​​ಬಾಸ್​​ನಲ್ಲಿ ಇರಲಿವೆ. ಅದರಲ್ಲೂ ಸ್ಪರ್ಧಿಗಳ ಆಯ್ಕೆ ಈ ಬಾರಿ ಬಹಳ ಭಿನ್ನವಾಗಿರಲಿದೆ. ಈ ಬಾರಿ ‘ಬಿಗ್​​ಬಾಸ್ ಅಗ್ನಿಪರೀಕ್ಷೆ’ ಎಂಬ ಹೊಸ ಕಾನ್ಸೆಪ್ಟ್ ಅನ್ನು ಪರಿಚಯಿಸಲಾಗಿದ್ದು, ಮನೆಯ ಒಳಗೆ ಹೋಗುವ ಸ್ಪರ್ಧಿಗಳು ಮೊದಲು ಅಗ್ನಿಪರೀಕ್ಷೆಯನ್ನು ಎದುರಿಸಬೇಕಿರಲಿದೆ. ಈ ಪರೀಕ್ಷೆಯನ್ನು ತೆಗೆದುಕೊಳ್ಳುವವರು ನಾಲ್ಕು ಬಿಗ್​​ಬಾಸ್ ಪರಿಣಿತರು.

ಹೌದು, ಮನೆಯ ಒಳಗೆ ಹೋಗುವ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆಯಲ್ಲಿ ಗೆಲ್ಲಬೇಕಿರುತ್ತದೆ. ಈ ಅಗ್ನಿಪರೀಕ್ಷೆಯನ್ನು ತೆಗೆದುಕೊಂಡು ತೀರ್ಪು ನೀಡಿ ಸ್ಪರ್ಧಿಯನ್ನು ಒಳಗೆ ಕಳಿಸುವ ಜವಾಬ್ದಾರಿಯನ್ನು ನಾಲ್ವರು ಮಾಜಿ, ಬಿಗ್​​ಬಾಸ್ ಸ್ಪರ್ಧಿಗಳಿಗೆ ವಹಿಸಲಾಗಿದೆ. ಹಿರಿಯ ನಟಿ, ಮಾಜಿ ಬಿಗ್​​ಬಾಸ್ ವಿನ್ನರ್ ಶ್ರುತಿ, ಮಾಜಿ ಸ್ಪರ್ಧಿಗಳಾದ ಚಂದನ್ ಗೌಡ, ಸಂಗೀತಾ ಶೃಂಗೇರಿ ಮತ್ತು ವಿನಯ್ ಗೌಡ ಅವರನ್ನು ತೀರ್ಪುಗಾರರನ್ನಾಗಿ ಮಾಡಲಾಗಿದ್ದು, ಇವರುಗಳು ಸ್ಪರ್ಧಿಗಳ ಅಥವಾ ಆಕಾಂಕ್ಷಿಗಳ ಪರೀಕ್ಷೆಯನ್ನು ತೆಗೆದುಕೊಳ್ಳಲಿದ್ದಾರೆ.

ಈ ಕುರಿತು ಹೊಸ ಪ್ರೋಮೊ ಒಂದನ್ನು ಬಿಗ್​​ಬಾಸ್ ಹಂಚಿಕೊಂಡಿದ್ದು, ಪ್ರೋಮೊನಲ್ಲಿ ವಿನಯ್ ಗೌಡ, ಚಂದನ್, ಸಂಗೀತ ಮತ್ತು ಶ್ರುತಿ ಅವರುಗಳು ಬಿಗ್​​ಬಾಸ್​​ನಲ್ಲಿ ಈ ಬಾರಿ ಎದುರಾಗಲಿರುವ ಅಗ್ನಿಪರೀಕ್ಷೆ ಮತ್ತು ಅದರ ಕಠಿಣತೆಯ ಬಗ್ಗೆ ಮಾತನಾಡಿದ್ದಾರೆ. ‘ಪ್ರತಿ ಬಾರಿ ಬಿಗ್​​ಬಾಸ್ ಮನೆಯ ಒಳಗೆ ಯುದ್ಧ ಆಗೋದು ನೋಡಿದ್ದೀರ. ಆದರೆ ಈ ಬಾರಿ ಮನೆಯ ಒಳಗೆ ಹೋಗೋಕೆ ಮಹಾಯುದ್ಧನೇ ನಡೆಯಲಿದೆ. ಈ ಮಹಾಯುದ್ಧದಲ್ಲಿ ಗೆದ್ದು ಮನೆಯ ಒಳಗೆ ಎಂಟ್ರಿ ಆಗೋದು ಯಾರು’ ಎಂದು ಈ ನಾಲ್ವರು ತೀರ್ಪುಗಾರರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:ಬಿಗ್​​ಬಾಸ್ ಕನ್ನಡ: ಗಿಲ್ಲಿ ಪರವಾಗಿ ಮತ ಕೇಳಿದ ಮಳವಳ್ಳಿ ಶಾಸಕ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವವರು, ಬಿಗ್​​ಬಾಸ್ ಮನೆಗೆ ಹೋಗಬೇಕೆಂದು ಅರ್ಜಿ ಸಲ್ಲಿಸಿರುವ ಸಾಮಾನ್ಯರು ಇನ್ನೂ ಕೆಲವರು ಈ ಅಗ್ನಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಕಷ್ಟು ಮಂದಿ ಆಕಾಂಕ್ಷಿಗಳನ್ನು ಈ ತೀರ್ಪುಗಾರರು ಹಲವು ರೀತಿಯಲ್ಲಿ ಪರೀಕ್ಷೆ ನಡೆಸಿ ಕೆಲವರನ್ನು ಆಯ್ಕೆ ಮಾಡಲಿದ್ದಾರೆ. ಈ ಆಯ್ಕೆ ಪ್ರಕ್ರಿಯೆ ಶೀಘ್ರವೇ ನಡೆಯಲಿದೆ ಎನ್ನಲಾಗುತ್ತಿದೆ.

ಬಿಗ್​​ಬಾಸ್ ಕನ್ನಡ ಸೀಸನ್ 13 ಆಗಸ್ಟ್ 16 ರಿಂದ ಆರಂಭ ಆಗಲಿದೆ. ಸುದೀಪ್ ಅವರು ಪ್ರತಿಬಾರಿಯಂತೆ ಅದ್ಧೂರಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸ್ಪರ್ಧಿಗಳನ್ನು ಪರಿಚಯಿಸಲಿದ್ದಾರೆ. ವೀಕೆಂಡ್ ಕಾರ್ಯಕ್ರಮವನ್ನು ಲೈವ್ ಆಗಿ ನೋಡಲು ಸಹ ಅವಕಾಶವನ್ನು ಪಡೆದುಕೊಳ್ಳಬಹುದಾಗಿದೆ. ಲಾಲ್​​ಬಾಗ್​​ನಲ್ಲಿ ನಡೆಯುತ್ತಿರುವ ಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಿ ಅಲ್ಲಿ ಇರುವ ಬಿಗ್​​ಬಾಸ್​​ ಎಕ್ಸ್​​ಪೀರಿಯನ್ಸ್ ಜೋನ್​​ನಲ್ಲಿ ಸೆಲ್ಫಿ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *