Headlines

‘ಬಿಗ್ ಬಾಸ್’ ಭಾವಿ ಸ್ಪರ್ಧಿಗಳಿಗೆ ‘ಅಗ್ನಿಪರೀಕ್ಷೆ’; ಜಡ್ಜ್​ ಸ್ಥಾನದಲ್ಲಿ ಗಿಲ್ಲಿ, ಸಂಗೀತಾ? – Kannada News | Bigg Boss Kannada Season 13: Sangeetha, Vinay, and Gilli Nata Rumored to Judge Agniparikshe

‘ಬಿಗ್ ಬಾಸ್’ (Bigg Boss) ಪ್ರತಿ ಸೀಸನ್​​ ಕೂಡ ಹೊಸ ಹೊಸ ರೂಪದಲ್ಲಿ ಬರುತ್ತದೆ. ಈ ಮೊದಲು ಬಿಗ್ ಬಾಸ್ ಟೀಂ ಆಯ್ಕೆ ಮಾಡಿದವರಿಗೆ ನೇರವಾಗಿ ಎಂಟ್ರಿ ಸಿಗುತ್ತಿತ್ತು. ಆದರೆ, ಇತ್ತೀಚೆಗೆ ಇದನ್ನು ಬದಲಿಸಲಾಗಿತ್ತು. ಬಿಗ್ ಬಾಸ್ ವೇದಿಕೆಯಲ್ಲಿ ಇರೋ ವೀಕ್ಷಕರಿಗೆ ವೋಟ್ ಹಾಕುವ ಅವಕಾಶ ನೀಡಿ ಸ್ಪರ್ಧಿಗಳು ಮನೆ ಒಳಗೆ ಹೋಗಬೇಕೋ, ಬೇಡವೋ ಎಂದು ನಿರ್ಧರಿಸುತ್ತಿದ್ದರು. ಈ ಬಾರಿ ಈ ಶೈಲಿಯನ್ನು ಮತ್ತಷ್ಟು ಬದಲಿಸೋ ಸಾಧ್ಯತೆ ಇದೆ. ಈ ಬಾರಿ ಸ್ಪರ್ಧಿಗಳಿಗೆ ‘ಅಗ್ನಿಪರೀಕ್ಷೆ’ ಆಯೋಜನೆ ಮಾಡುವ ಯೋಜನೆ ರೂಪಿಸಲಾಗಿದೆ ಎನ್ನಲಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ ವೇಳೆಗೆ ಹೊಸ ಸೀಸನ್ ಆರಂಭ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಾ ಇದೆ. ಆಗಸ್ಟ್ 2ರಂದು ಪ್ರೋಮೋ ರಿಲೀಸ್ ಆಗಿದೆ. ಸುದೀಪ್ ಅವರ ಗೆಟಪ್ ಗಮನ ಸೆಳೆದಿದೆ. ಈ ಶೋ ಬಗ್ಗೆ ವೀಕ್ಷಕರಿಗೆ ಕುತೂಹಲ ಮೂಡಿದೆ. ಈಗ ಹೊಸ ಆಯಾಮದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಈ ಬಾರಿಯ ಬಿಗ್ ಬಾಸ್​ ಅಲ್ಲಿ ಜನ ಸಾಮಾನ್ಯರಿಗೂ ಅವಕಾಶ ನೀಡಲಾಗುತ್ತದೆ ಎಂದು ಕಲರ್ಸ್ ಕನ್ನಡ ವಾಹಿನಿ ಈ ಮೊದಲು ಘೋಷಣೆ ಮಾಡಿದೆ. ಇದಕ್ಕೆ ಲಕ್ಷಾಂತರ ಮಂದಿ ಅಪ್ಲಿಕೇಷನ್ ಹಾಕಿದ್ದಾರೆ ಎನ್ನಲಾಗಿದೆ. ಇವರ ಪೈಕಿ ಕೆಲವೇ ಕೆಲವರನ್ನು ಆಯ್ಕೆ ಮಾಡಲಾಗುತ್ತದೆ. ಇದಕ್ಕೆ ಅಗ್ನಿಪರೀಕ್ಷೆ ಇಡಲಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.

ಈಗ ಕೇಳಿ ಬರುತ್ತಿರುವ ಹೊಸ ವದಂತಿ ಎಂದರೆ ಅಗ್ನಿಪರೀಕ್ಷೆಯಲ್ಲಿ ಸಂಗೀತಾ ಶೃಂಗೇರಿ, ಗಿಲ್ಲಿ ನಟ ಹಾಗೂ ವಿನಯ್ ಗೌಡ ಜಡ್ಜ್​ ಸ್ಥಾನದಲ್ಲಿ ಇರಲಿದ್ದಾರೆ ಎನ್ನಲಾಗಿದೆ. ಈ ಮೂವರು ಬಿಗ್ ಬಾಸ್​ನಲ್ಲಿ ಫೈಯರ್ ಬ್ರ್ಯಾಂಡ್ ರೀತಿ ಗುರುತಿಸಿಕೊಂಡವರು. ಈ ಕಾರಣದಿಂದ ಇವರನ್ನು ಆಯ್ಕೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಬಿಗ್ ಬಾಸ್ ಸಂಭಾವನೆ ಗುಟ್ಟು ರಟ್ಟು ಮಾಡಿದ ಧನರಾಜ್; ಅಸಲಿ ವಿಷಯ ಕೇಳಿ ಜನ ಶಾಕ್

ಇನ್ನು, ಜೀ ಕನ್ನಡದಲ್ಲಿ ಶೀಘ್ರವೇ ‘ಹಳ್ಳಿ ಪವರ್ ರೀಲೋಡೆಡ್’ ಶೋ ಆಯೋಜನೆ ಮಾಡಲಾಗುತ್ತಿದೆ. ಬಿಗ್ ಬಾಸ್ ಪ್ರಸಾರ ಸಮಯ ಹಾಗೂ ಹಳ್ಳಿ ಪವರ್ ಶೋ ಸಮಯ ಒಂದೇ ಇರಲಿದೆ ಎಂದು ಊಹಿಸಲಾಗಿದೆ. ಹೀಗಾಗಿ, ಎರಡು ಶೋಗಳ ಮಧ್ಯೆ ಕಾಂಪಿಟೇಷನ್ ಏರ್ಪಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *