ಸಂಗೀತಾ ಶೃಂಗೇರಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸ್ಪರ್ಧಿಸಿದ್ದರು. ಈ ಸೀಸನ್ ಬಳಿಕ ಅವರು ಸಿಂಹಿಣಿ ಎಂದೇ ಫೇಮಸ್ ಆದರು. ಇದಾದ ಬಳಿಕ ಅವರು ಒಪ್ಪಿಕೊಂಡ ಮೊದಲ ಸಿನಿಮಾ ಸೆಟ್ಟೇರಿದೆ.
ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ‘ಮಾರಿಗೋಲ್ಡ್’ ಸಿನಿಮಾ ರಿಲೀಸ್ ಆಯಿತು. ಆದರೆ, ಈ ಚಿತ್ರ ಬಿಗ್ ಬಾಸ್ಗೂ ಮೊದಲು ಶೂಟ್ ಆಗಿತ್ತು. ಈಗ ಹೊಸ ಸಿನಿಮಾ ಒಪ್ಪಿಕೊಂಡಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
‘ಪದ್ಮನಾಭ ಆ್ಯಂಡ್ ಫ್ಯಾಮಿಲಿ’ ಹೆಸರಿನ ಹೊಸ ಸಿನಿಮಾ ಸೆಟ್ಟೇರಿದೆ. ಇಸ್ಮಾಯಿಲ್ ಅವರು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ತುಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಅವರು ಆ್ಯಕ್ಟೀವ್ ಆಗಿದ್ದಾರೆ. ಈ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ.
ಸದಾಶಿವ ಶೆಟ್ಟಿ ಅವರು ‘ಪದ್ಮನಾಭ ಆ್ಯಂಡ್ ಫ್ಯಾಮಿಲಿ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟುಹಾಕಿದೆ. ಬಿಗ್ ಬಾಸ್ ಬಳಿಕ ಒಪ್ಪಿದ ಮೊದಲ ಸಿನಿಮಾ ಇದಾಗಿದೆ.
ಸಂಗೀತಾ ಶೃಂಗೇರಿ ಅವರು ಕಿರುತೆರೆ ಮೂಲಕ ಗಮನ ಸೆಳೆದವರು. ಆ ಬಳಿಕ ಅವರು ಹಿರಿತೆರೆಗೆ ಕಾಲಿಟ್ಟರು. ಬಿಗ್ ಬಾಸ್ ಅವರಿಗೆ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿತು.




