ನವದೆಹಲಿ, ಏಪ್ರಿಲ್ 27: ರಾಘವ್ ಚಡ್ಡಾ (Raghav Chadha) ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಇತರ 6 ಸಂಸದರು ಭಾರತೀಯ ಜನತಾ ಪಕ್ಷ (ಬಿಜೆಪಿ)ದೊಂದಿಗೆ ವಿಲೀನಗೊಳ್ಳಲು ಮಾಡಿದ ಮನವಿಯನ್ನು ರಾಜ್ಯಸಭಾ ಅಧ್ಯಕ್ಷರು ಅಂಗೀಕರಿಸಿದ್ದಾರೆ. ಈ ಮೂಲಕ ಮೇಲ್ಮನೆಯ ಸದಸ್ಯರ ಪಟ್ಟಿಯನ್ನು ನವೀಕರಿಸಲಾಗಿದೆ. ಈ ವಿಲೀನದೊಂದಿಗೆ, ಬಿಜೆಪಿಯ ಬಲ 113ಕ್ಕೆ ಏರಿತು. ಹಾಗೇ, ಎನ್ಡಿಎ ರಾಜ್ಯಸಭೆಯಲ್ಲಿ 140 ಸ್ಥಾನಗಳನ್ನು ದಾಟಿದೆ. ಈ ವಿಲೀನದ ಬಳಿಕ ಆಮ್ ಆದ್ಮಿ ಪಕ್ಷದ ಬಲ 3ಕ್ಕೆ ಇಳಿದಿದೆ.
ರಾಘವ್ ಚಡ್ಡಾ ಜೊತೆಗೆ, ಹರ್ಭಜನ್ ಸಿಂಗ್, ರಾಜೇಂದ್ರ ಗುಪ್ತಾ, ವಿಕ್ರಮಜಿತ್ ಸಿಂಗ್ ಸಾಹ್ನಿ, ಸ್ವಾತಿ ಮಲಿವಾಲ್, ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅವರು ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಈ ವಿಲೀನದ ನಂತರ 7 ಸಂಸದರು ರಾಜ್ಯಸಭಾ ಅಧ್ಯಕ್ಷರನ್ನು ತಮ್ಮನ್ನು ಬಿಜೆಪಿ ಸಂಸದರೆಂದು ಪರಿಗಣಿಸುವಂತೆ ಮನವಿ ಮಾಡಿದ್ದರು. ಅದನ್ನು ಈಗ ಅಂಗೀಕರಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ