ಬಿಸಿಲಲ್ಲಿ ಕುಸಿದುಬಿದ್ದ ತಾಯಿ, ಯಾರ್ಯಾರನ್ನೋ ಬೇಡಿ ನೀರು ತಂದ ಮಗ, ಜನ ವಿಡಿಯೋ ಮಾಡಿದ್ರು ಸಹಾಯಕ್ಕೆ ಬರ್ಲಿಲ್ಲ

ಬಿಸಿಲಲ್ಲಿ ಕುಸಿದುಬಿದ್ದ ತಾಯಿ, ಯಾರ್ಯಾರನ್ನೋ ಬೇಡಿ ನೀರು ತಂದ ಮಗ, ಜನ ವಿಡಿಯೋ ಮಾಡಿದ್ರು ಸಹಾಯಕ್ಕೆ ಬರ್ಲಿಲ್ಲ

ಒಂದು ಹೊತ್ತಿನ ಊಟಕ್ಕೂ ಬಡತನ, ವಿಪರೀತ ಬಿಸಿಲು ಹೊಟ್ಟೆಗೇನೂ ಇಲ್ಲದೆ ಬಿಸಿಲಲ್ಲಿ ಕುಸಿದು ಬಿದ್ದ ತಾಯಿಯನ್ನು ಉಳಿಸಿಕೊಳ್ಳಲು, ಬಾಲಕನೊಬ್ಬ ಅಲ್ಲಿಲ್ಲಿ ಬೇಡಿ ನೀರನ್ನು ತಂದು ತಾಯಿಗೆ ಕುಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಚಪ್ಪಲಿ ಇಲ್ಲದೆ ಬರಿಗಾಲಲ್ಲಿ ಬಿಸಿಲಲ್ಲಿ ಓಡಿ ಚಿಪ್ಸ್​ ಹಾಗೂ ನೀರನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹೆಚ್ಚು ವಾಹನಗಳು ಓಡಾಡುವ ರಸ್ತೆಯಲ್ಲಿ ಮಹಿಳೆಯೊಬ್ಬರು ಬಿದ್ದಿರುವುದನ್ನು ಕಾಣಬಹುದು, ಮತ್ತೊಂದು ಕಡೆಯಿಂದ ಬಾಲಕ ಕೈಯಲ್ಲಿ ಬಾಟಲಿ ಹಿಡಿದು ಓಡಿ ಬರುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಆದರೆ ಅದನ್ನು ನೋಡಿ ವಿಡಿಯೋ ಮಾಡುತ್ತಿದ್ದ ಜನ ಯಾರೂ ಆತನ ಸಹಾಯಕ್ಕೆ ಬರಲಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Leave a Reply

Your email address will not be published. Required fields are marked *