Headlines

ಬೆಂಗಳೂರಿಗೆ ಹೊಸ ಪಾರ್ಕಿಂಗ್ ನೀತಿ: ಖಾಲಿ ನಿವೇಶನದಲ್ಲಿ ಪಾರ್ಕಿಂಗ್ ಕೊಟ್ಟರೆ 35 ವರ್ಷ ಟ್ಯಾಕ್ಸ್ ಫ್ರೀ – Kannada News | Bengaluru New Parking Policy: Vacant Landowners May Get Tax Relief for Creating Public Parking Spaces, Here is How

ಬೆಂಗಳೂರು, ಜುಲೈ 03): ಖಾಲಿ ನಿವೇಶನದಲ್ಲಿ ಪಾರ್ಕಿಂಗ್  (Parking ) ಕೊಟ್ಟರೆ 35 ವರ್ಷ ಟ್ಯಾಕ್ಸ್ ಫ್ರೀ ಎಂದು ರಾಜ್ಯ ಸರ್ಕಾರವೇನೋ ಬಂಪರ್ ಆಫರ್ ಘೋಷಿಸಿದೆ. ಆದರೆ ಬೆಂಗಳೂರಿನ ಆಸ್ತಿ ಮಾಲೀಕರು ಮಾತ್ರ ಸರ್ಕಾರದ ಈ ಪ್ಲಾನ್‌ಗೆ ಕೆಂಡಾಮಂಡಲವಾಗಿದ್ದಾರೆ. ‘ನಮ್ಮ ಸೈಟು ನಮಗೆ ಮುಖ್ಯವೇ ಹೊರತು, ನಿಮ್ಮ ಟ್ಯಾಕ್ಸ್ ಫ್ರೀ ಆಫರ್ ಅಲ್ಲ ಅಂತ ಜಿಬಿಎ ಮತ್ತು ಸಂಚಾರ ಪೊಲೀಸರ ಹೊಸ ಪಾರ್ಕಿಂಗ್ ನೀತಿಯ ವಿರುದ್ಧ ತಿರುಗಿಬಿದ್ದಿದ್ದಾರೆ. ಇದರೊಂದಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಸಂಚಾರ ಪೊಲೀಸರು ಜಂಟಿಯಾಗಿ ರೂಪಿಸುತ್ತಿರುವ ಪಾರ್ಕಿಂಗ್ ನೀತಿ-2026 ಕರಡು (Bengaluru’s New Parking Policy) ಪ್ರಕಟವಾಗುವ ಮುನ್ನವೇ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಖಾಲಿ ನಿವೇಶನಗಳಲ್ಲಿ ಮಲ್ಟಿ-ಸ್ಟೋರಿ ಅಥವಾ ಆಟೋಮೇಟೆಡ್ ಪಾರ್ಕಿಂಗ್ ನಿರ್ಮಿಸಿದರೆ 15 ರಿಂದ 35 ವರ್ಷಗಳವರೆಗೆ ಆಸ್ತಿ ತೆರಿಗೆ ವಿನಾಯಿತಿ ನೀಡುವುದಾಗಿ ಸರ್ಕಾರ ಹೇಳಿದೆ. ಆದರೆ ಈ ಆಫರ್ ಹಿಂದೆ ದೊಡ್ಡ ಜಾಲ ಅಡಗಿದೆ ಎಂಬುದು ಆಸ್ತಿ ಮಾಲೀಕರ ಗಂಭೀರ ಆರೋಪ ಮಾಡಿದ್ದಾರೆ.

ಪಾರ್ಕಿಂಗ್‌ಗೆ ಜಾಗ ಕೊಟ್ಟರೆ ನಿವೇಶನದ ಕಥೆ ಏನು?

ದಶಕಗಳ ಕಾಲ ಸಾರ್ವಜನಿಕರು ಬಂದು ಪಾರ್ಕಿಂಗ್ ಮಾಡಿದರೆ, ಆ ಜಾಗದ ಮೇಲಿನ ಹಕ್ಕು ಮಾಲೀಕರಿಗೆ ತಪ್ಪಿಹೋಗುವ ಆತಂಕ ಎದುರಾಗಿದೆ.35 ವರ್ಷಗಳ ಕಾಲ ಸಾರ್ವಜನಿಕ ಪಾರ್ಕಿಂಗ್‌ಗೆ ಜಾಗ ಕೊಟ್ಟರೆ ಮುಂದೆ ನಮ್ಮ ನಿವೇಶನದ ಕಥೆ ಏನು? ಇದು ಜಾಗ ಕಬಳಿಸುವ ತಂತ್ರನಾ? ಆಸ್ತಿ ಮಾಲೀಕರು GBA ವಿರುದ್ಧ ಅಕ್ರೊಶವನ್ನು ವ್ಯಕ್ತ ಪಡಿಸಿದ್ದಾರೆ.ಸರ್ಕಾರಕ್ಕೆ ಬೆಂಗಳೂರಿನಲ್ಲಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಯೋಗ್ಯತೆ ಇಲ್ಲದೆ, ಈಗ ನಮ್ಮ ಖಾಲಿ ಸೈಟುಗಳ ಮೇಲೆ ಕಣ್ಣು ಹಾಕಿದೆ. 35 ವರ್ಷ ಟ್ಯಾಕ್ಸ್ ಫ್ರೀ ಕೊಡ್ತೀವಿ ಅಂತಾರೆ. 35 ವರ್ಷ ಅಂದರೆ ಒಂದು ತಲೆಮಾರೇ ಕಳೆದುಹೋಗುತ್ತದೆ. ಅಲ್ಲಿಯವರೆಗೆ ನಮ್ಮ ಸ್ವಂತ ಜಾಗವನ್ನು ನಾವು ಬಳಸುವಂತಿಲ್ಲ. ಇದು ಪಾರ್ಕಿಂಗ್ ನೀತಿಯಲ್ಲ, ಖಾಸಗಿ ಜಾಗಗಳನ್ನು ಪರೋಕ್ಷವಾಗಿ ವಶಪಡಿಸಿಕೊಳ್ಳುವ ತಂತ್ರ. ನಾವು ಇದಕ್ಕೆ ಯಾವುದೇ ಕಾರಣಕ್ಕೂ ಒಪ್ಪಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಕಾರು, ಬೈಕ್​​ಗಳ ಸಂಖ್ಯೆ ಹೆಚ್ಚಳ: ಟ್ರಾಫಿಕ್ ತಜ್ಞರು ಹೇಳುವುದೇನು?

ಟ್ಯಾಕ್ಸ್ ಫ್ರೀ ಮಾಡ್ತೀವಿ ಅಂದರೆ ನಮಗೇ ಲಾಭ

ಇನ್ನು ಕೆಲವು ಜನರು ವರ್ಷ ದೊಡ್ಡ ಮೊತ್ತದ ಟ್ಯಾಕ್ಸ್ ಕಟ್ಟುತ್ತಿದ್ದೆ. ಅಲ್ಲಿ ಯಾರು ಬೇಕಾದರೂ ಬಂದು ಗಾಡಿ ನಿಲ್ಲಿಸಿ ಹೋಗ್ತಿದ್ದರು, ನಮಗೆ ನಯಾಪೈಸೆ ಸಿಗುತ್ತಿರಲಿಲ್ಲ. ಈಗ ಸರ್ಕಾರವೇ ಅಧಿಕೃತವಾಗಿ ಪಾರ್ಕಿಂಗ್ ಮಾಡಲು ಅವಕಾಶ ಕೊಟ್ಟು, 25-35 ವರ್ಷ ಟ್ಯಾಕ್ಸ್ ಫ್ರೀ ಮಾಡ್ತೀವಿ ಅಂದರೆ ನಮಗೇ ಲಾಭ. ನಾವೇ ಸ್ವತಃ ಹೂಡಿಕೆ ಮಾಡಿ ಅಥವಾ ಪಿಪಿಪಿ ಮಾಡೆಲ್‌ನಲ್ಲಿ ಪಾರ್ಕಿಂಗ್ ಬಿಲ್ಡಿಂಗ್ ಕಟ್ಟಿದರೆ, ಮುಂದಿನ ತಲೆಮಾರಿಗೆ ಒಂದು ಕಾಯಂ ಆದಾಯದ ಮೂಲ ಸಿಕ್ಕಂತಾಗುತ್ತದೆ ಎಂದು ಹೇಳುತ್ತಿದ್ದಾರೆ.

ಇಷ್ಟು ದಿನ ಖಾಲಿ ಬಿದ್ದಿದ್ದ ಸೈಟ್‌ಗಳಿಂದ ಮಾಲೀಕರಿಗೆ ಯಾವುದೇ ಆದಾಯವಿರಲಿಲ್ಲ, ಮೇಲಾಗಿ ಟ್ಯಾಕ್ಸ್ ಕಟ್ಟಬೇಕಿತ್ತು. ಆದರೆ ಈ ಯೋಜನೆ ಜಾರಿಗೆ ಬಂದರೆ, ಸೈಟ್ ಮಾಲೀಕರಿಗೆ ದಶಕಗಳ ಕಾಲ ತೆರಿಗೆ ವಿನಾಯಿತಿ ಸಿಗುವುದಲ್ಲದೆ, ಪಾರ್ಕಿಂಗ್ ಶುಲ್ಕದ ಮೂಲಕವೂ ಆದಾಯ ಗಳಿಸುವ ಅವಕಾಶ ನೀಡಿದೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *