ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಅದ್ದೂರಿಯಾಗಿ ನಿರ್ಮಾಣ ಆಗಿದೆ. ಯಶ್ ನಟನೆಯ ಈ ಚಿತ್ರಕ್ಕೆ ಮೋಹನ್ ಬಿ. ಕೆರೆ ಅವರು ಕಲಾ ನಿರ್ದೇಶನ ಮಾಡಿದ್ದಾರೆ. ತಮಗೆ ಈ ಅವಕಾಶ ಸಿಕ್ಕಿದ್ದಕ್ಕೆ ಅವರು ಖುಷಿಯಾಗಿದ್ದಾರೆ. ಬೆಂಗಳೂರಿನಲ್ಲಿ ಮೋಹನ್ ಬಿ. ಕೆರೆ ಅವರು ‘ಟಾಕ್ಸಿಕ್’ ಚಿತ್ರಕ್ಕಾಗಿ ಹಲವು ಸೆಟ್ ಹಾಕಿದರು. ಆ ಬಗ್ಗೆ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ಈ ಚಿತ್ರಕ್ಕಾಗಿ ಹಲವು ಸೆಟ್ ಹಾಕಿದ್ದೆವು. ನಾನು ಬಿಟ್ಟುಕೊಡಲು ಸಾಧ್ಯವಾಗದ ರಹಸ್ಯಗಳು ಸಾಕಷ್ಟು ಇವೆ. ಸಿನಿಮಾ ಎಂಬುದೇ ಒಂದು ಕುತೂಹಲ. ಅದನ್ನು ನಾವು ಚಿತ್ರಮಂದಿರಕ್ಕೆ ಬಂದು ಎಂಜಾಯ್ ಮಾಡಬೇಕು. ಬೆಂಗಳೂರಿನಲ್ಲಿ ಈ ಸಿನಿಮಾಗೆ 10ಕ್ಕೂ ಅಧಿಕ ಸೆಟ್ ಹಾಕಿದ್ದೆವು. ಅದಕ್ಕಾಗಿ ಅಂದಾಜು 75 ಕೋಟಿ ರೂಪಾಯಿ ತನಕ ಖರ್ಚು ಆಗಿದೆ’ ಎಂದು ಅವರು ಹೇಳಿದ್ದಾರೆ. ಒಟ್ಟಾರೆಯಾಗಿ ಸೆಟ್ ನಿರ್ಮಾಣದ ಕೆಲಸ ಹೇಗೆ ನಡೆಯಿತು ಎಂಬುದನ್ನು ಮೋಹನ್ ಬಿ. ಕೆರೆ ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.