
ಬೆಂಗಳೂರು, ಮಾ.18: ಇಂದು ಬೆಂಗಳೂರಿನ ಜನರಿಗೆ ಸಂತೋಷದ ಸುದ್ದಿಯನ್ನು ಗಾಳಿ ಗುಣಮಟ್ಟ ನೀಡಿದೆ. ಪ್ರತಿದಿನ ಕಳಪೆ ಮಟ್ಟದ ವರದಿಯನ್ನು ನೋಡಿ ಇದೀಗ ಉತ್ತಮ ಮಟ್ಟದ ಗಾಳಿಯನ್ನು ಹೊಂದಿದೆ ಎಂಬ ವರದಿಯನ್ನು ನೀಡಲಾಗಿದೆ. ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಸಾಧಾರಣದಿಂದ ಉತ್ತಮ ಮಟ್ಟದಲ್ಲಿದೆ. ಬೇಸಿಗೆಯ ಬಿಸಿಲಿನ ನಡುವೆಯೂ ಕೆಲವು ಭಾಗಗಳಲ್ಲಿ ಕಂಡುಬಂದ ಹಗುರ ಮಳೆಯು ಗಾಳಿಯಲ್ಲಿನ ಧೂಳಿನ ಕಣಗಳನ್ನು ಕಡಿಮೆ ಮಾಡಲು ಸಹಾಯ ಮಾಡಿದೆ.
ಬೆಂಗಳೂರಿನಲ್ಲಿ ಇಂದು ಗಾಳಿಯ ಗುಣಮಟ್ಟವು ‘ಸಾಧಾರಣ’ ಮಟ್ಟದಲ್ಲಿದೆ. ವಾಹನ ದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಮಾಲಿನ್ಯ ಸ್ವಲ್ಪ ಹೆಚ್ಚಿರಬಹುದು. ಶ್ವಾಸಕೋಶದ ಸಮಸ್ಯೆ ಇರುವವರು ಮತ್ತು ಮಕ್ಕಳು ಹೊರಗಡೆ ಹೆಚ್ಚು ಸಮಯ ಕಳೆಯುವಾಗ ಜಾಗರೂಕರಾಗಿರುವುದು ಉತ್ತಮ ಎಂದು ಹೇಳಲಾಗಿದೆ. ವಯಸ್ಕರು ಮತ್ತು ಮಕ್ಕಳಿಗೆ ಇದು ಹೆಚ್ಚಿನ ಅಪಾಯಕಾರಿಯಲ್ಲದಿದ್ದರೂ, ಶ್ವಾಸಕೋಶದ ಕಾಯಿಲೆ ಇರುವವರು ದೀರ್ಘಕಾಲದ ಹೊರಾಂಗಣ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.
ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇರುವುದರಿಂದ, ಮಳೆಯ ನಂತರ ಗಾಳಿಯಲ್ಲಿನ ಧೂಳಿನ ಕಣಗಳು (PM10) ಕಡಿಮೆಯಾಗಿ ಗಾಳಿಯ ಗುಣಮಟ್ಟ ಸುಧಾರಿಸುವ ನಿರೀಕ್ಷೆಯಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯಿಂದಾಗಿ ವಾಯು ಮಾಲಿನ್ಯ ತಗ್ಗಲಿದೆ. ಸಂಸ್ಕೃತಿ ಮತ್ತು ಪರಂಪರೆಯ ನಗರಿ ಮೈಸೂರಿನಲ್ಲಿ ಇಂದು ಗಾಳಿಯ ಶುದ್ಧತೆ ತುಸು ಏರುಪೇರಾಗಿದೆ. ಮೈಸೂರಿನಲ್ಲಿ 103 – 110 ಗಾಳಿಯ ಮಟ್ಟವನ್ನು ಹೊಂದಿದೆ. ಉಸಿರಾಟದ ತೊಂದರೆ ಇರುವವರು ಅಥವಾ ಹಿರಿಯ ನಾಗರಿಕರು ದೀರ್ಘಕಾಲದವರೆಗೆ ಹೊರಗಡೆ ಸಂಚರಿಸುವಾಗ ಮಾಸ್ಕ್ ಧರಿಸುವುದು ಸೂಕ್ತ ಎಂದು ಹೇಳಲಾಗಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮೈಸೂರಿಗಿಂತ ಗಾಳಿಯ ಗುಣಮಟ್ಟ ಉತ್ತಮವಾಗಿದ್ದರೂ, ಮಧ್ಯಾಹ್ನದ ಬಿಸಿಲು ಮತ್ತು ಧೂಳಿನಿಂದಾಗಿ ಸೂಚ್ಯಂಕವು ಸಾಧಾರಣ ಮಟ್ಟದಲ್ಲಿದೆ. ಇಲ್ಲಿ ಗಾಳಿಯ ಗುಣಮಟ್ಟ 69 – 88 ವರೆಗೆ ಇದೆ. ಇಲ್ಲಿನ ಗಾಳಿಯು ಹೆಚ್ಚಿನ ಜನರಿಗೆ ಸುರಕ್ಷಿತವಾಗಿದೆ. ಆದರೂ ರಸ್ತೆ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಧೂಳಿನ ಪ್ರಮಾಣ ಹೆಚ್ಚಿರಬಹುದು. ಇಂದು ಹುಬ್ಬಳ್ಳಿಯಲ್ಲಿ ಆಕಾಶವು ತಿಳಿಯಾಗಿದ್ದು, ತಾಪಮಾನವು 33.5°C ವರೆಗೆ ತಲುಪುವ ಸಾಧ್ಯತೆಯಿದೆ.
ಇದನ್ನೂ ಓದಿ: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ; ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಸ್ಥಿತಿ ಏನು?
ಇತರ ಪ್ರಮುಖ ನಗರಗಳ AQI ವಿವರ
| ನಗರ / ಜಿಲ್ಲೆ | AQI ಮಟ್ಟ | ವರ್ಗ (Category) |
| ಮೈಸೂರು | 106 – 110 | ಕಳಪೆ (Poor / Moderate) |
| ಮಂಗಳೂರು | 45 – 52 | ಉತ್ತಮ (Good) |
| ಹುಬ್ಬಳ್ಳಿ-ಧಾರವಾಡ | 82 – 94 | ಸಾಧಾರಣ (Moderate) |
| ಯಾದಗಿರಿ | 107 | ಕಳಪೆ (Poor) |
| ದಾವಣಗೆರೆ | 104 | ಕಳಪೆ (Poor) |
| ಚಾಮರಾಜನಗರ | 25 | ಉತ್ತಮ (Good) |
ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
ಉತ್ತಮ- 0-50
ಮಧ್ಯಮ – 50-100
ಕಳಪೆ – 100-150
ಅನಾರೋಗ್ಯಕರ – 150-200
ಗಂಭೀರ – 200 – 300
ಅಪಾಯಕಾರಿ – 300 -500+
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ