ಬೆಂಗಳೂರಿನ ಹೈಟೆಕ್​ ಮದ್ಯ ಮಳಿಗೆ ಮುಂದೆ ತಾಸುಗಟ್ಟಲೆ ಕಾದು ನಿಂತ ಪ್ರೇಮಿಗಳು: 2000 ರೂ. ಕವರ್ ಚಾರ್ಜ್ ಹಾಕಿದ ಬ್ರೂವರಿ – Kannada News | Viral Video: Bangalore Valentine’s Day Disaster at Popular Brewery; Customers Outraged!

ಬೆಂಗಳೂರು, ಫೆ.16: ಬೆಂಗಳೂರಿನ ಜೋಡಿ ಹಕ್ಕಿಗಳಿಗೆ ಫೆ.14 ತುಂಬಾ ನಿರಾಸೆದಾಯಕವಾಗಿತ್ತು. ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ವ್ಯಾಲೆಂಟೈನ್ಸ್ ಡೇ ಸಂಭ್ರಮಿಸಲು ಯೋಜಿಸಿದ್ದ ನೂರಾರು ಜೋಡಿಗಳಿಗೆ ಬೆಂಗಳೂರಿನ ಜನಪ್ರಿಯ ಬ್ರೂವರಿ (Bangalore brewery) ನಿರಾಶೆ ಉಂಟು ಮಾಡಿದ ಎಂದು ಸೋಶಿಯಲ್​​ ಮೀಡಿಯಾದಲ್ಲಿ ಹೇಳಲಾಗಿದೆ. ಟೇಬಲ್‌ಗಳನ್ನು ಸಾಮರ್ಥ್ಯಕ್ಕಿಂತ ಹೆಚ್ಚು ಬುಕ್ ಮಾಡಿರುವ ಕಾರಣ, ಜೋಡಿಗಳು ಗಂಟೆಗಳ ಕಾಲ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸಂಜೆಯ ಚಳಿಯಲ್ಲಿ ಹೊರಗೆ ಉದ್ದವಾದ ಸಾಲಿನಲ್ಲಿ ನಿಂತು ಸುಸ್ತಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಅಕ್ಷಯ್ ಕುಮಾವತ್ ಎಂಬ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದು, “ಸಾಮರ್ಥ್ಯಕ್ಕಿಂತ ಹೆಚ್ಚು ಟೇಬಲ್ ಬುಕ್ ಮಾಡಿದಾಗ ಏನಾಗುತ್ತದೆ ನೋಡಿ” ಎಂಬ ಶೀರ್ಷಿಕೆ ನೀಡಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಈಗ ಭಾರಿ ವೈರಲ್ ಆಗಿದ್ದು, ಬೆಂಗಳೂರಿನ ಬ್ರೂವರಿಯ ಮ್ಯಾನೇಜ್‌ಮೆಂಟ್ ವೈಫಲ್ಯವನ್ನು ಬಯಲು ಮಾಡಿದೆ ಎಂದು ಹೇಳಿದ್ದಾರೆ. ವಿಡಿಯೋದಲ್ಲಿ ನೂರಾರು ಜೋಡಿಗಳು ಚಳಿಯಲ್ಲಿ ಮಳಿಗೆಯ ಹೊರಗೆ ಉದ್ದನೆಯ ಸಾಲಿನಲ್ಲಿ ಕಾಯುತ್ತಿರುವುದು ಕಂಡುಬಂದಿದೆ. ಟೇಬಲ್ ರಿಸರ್ವೇಶನ್ ಮಾಡಿದ್ದರೂ ಸಹ ಸೀಟು ಸಿಗದೆ ಕೋಪ ವ್ಯಕ್ತಪಡಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ವರದಿಗಳ ಪ್ರಕಾರ, ಒಬ್ಬ ವ್ಯಕ್ತಿಗೆ ತಲಾ 2,000 ರೂ. ವರೆಗೆ ಭಾರಿ ಪ್ರಮಾಣದ ಕವರ್ ಚಾರ್ಜ್ ವಸೂಲಿ ಮಾಡಲಾಗಿತ್ತು. ಇಷ್ಟೊಂದು ಹಣ ನೀಡಿದರೂ ಸರಿಯಾದ ವ್ಯವಸ್ಥೆ ಇರಲಿಲ್ಲ ಎಂಬುದು ಗ್ರಾಹಕರ ದೂರು. ಸೀಟು ಸಿಗದೆ ಹಿಂತಿರುಗಿದ ಅನೇಕ ಗ್ರಾಹಕರು ತಾವು ಪಾವತಿಸಿದ ಹಣವನ್ನು ಮರಳಿ ಪಡೆಯಲು ಬ್ರೂವರಿ ಸಿಬ್ಬಂದಿಯೊಂದಿಗೆ ಹರಸಾಹಸ ಪಡಬೇಕಾಯಿತು.ಫೆಬ್ರವರಿ 15ರಂದು ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ 40 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ನೆಟ್ಟಿಗರು ಬ್ರೂವರಿಯ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ .

ಇದನ್ನೂ ಓದಿ: “ಇಷ್ಟು ಕೆಟ್ಟದಾಗಿ ಸೋಲುವ ಬದಲು ಬಾಯ್ಕಾಟ್ ಮಾಡೋದೇ ಲೇಸಾಗಿತ್ತು”: ಪಾಕಿಸ್ತಾನವನ್ನು ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು

ಅತಿಯಾದ ದರ ಮತ್ತು ಕಳಪೆ ನಿರ್ವಹಣೆಯ ಬಗ್ಗೆಯೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.”ಕೇವಲ ಸಾಮಾಜಿಕ ಜಾಲತಾಣದ ಹೈಪ್‌ಗಾಗಿ ಇಷ್ಟು ಕಷ್ಟ ಪಡಬೇಕೇ?” ಎಂದು ಒಬ್ಬರು ಪ್ರಶ್ನಿಸಿದರೆ, “ಮನೆಯಲ್ಲೇ ಉಳಿದ ಜೋಡಿಗಳೇ ಇಂದು ಅದೃಷ್ಟವಂತರು” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. “ಒಳ್ಳೆಯ ದಿನದಲ್ಲಿ ಸಾಲಿನಲ್ಲಿ ನಿಂತು ಶಾಂತಿಯನ್ನು ಕಳೆದುಕೊಳ್ಳಬೇಕೇ?” ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *