ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 1.5 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ – Kannada News | Bengaluru Police Seize 1.5 Crore Worth Drugs; Senegal National Detained in Major Bust

ಬೆಂಗಳೂರು, ಫೆಬ್ರವರಿ 17: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಡ್ರಗ್ಸ್​​ ದಂಧೆಕೋರರ ಹಾವಳಿ ಮುಂದುವರಿದಿದೆ. ಮೇಲಿಂದ ಮೇಲೆ ನಡೆಯುತ್ತಿರುವ ಖಾಕಿ ಕಾರ್ಯಾಚರಣೆಗೂ ಬಗ್ಗದ ಖದೀಮರು ಪೊಲೀಸರ ಕಣ್ತಪ್ಪಿಸಿ ದಂಧೆ ಮುಂದುವರಿಸಿದ್ದಾರೆ. ನಗರದ ವಿವಿಧೆಡೆ ಡ್ರಗ್ಸ್ ಮಾರುತ್ತಿದ್ದ ಸೆನೆಗಲ್ ಮೂಲದ ಬ್ಯಾರಿ ಯಾಯ ಅಲಿಯಾಸ್ ಒಕೊಲಿ ಎಂಬಾತನನ್ನು ಬಂಧಿಸಲಾಗಿದ್ದು, ಆರೋಪಿಯಿಂದ ಬರೋಬ್ಬರಿ ಒಂದೂವರೆ ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. 29 LSD ಮಾತ್ರೆ, 546 ಗ್ರಾಂ MDMA, 152 ಗ್ರಾಂ ಹೈಡ್ರೋ ಗಾಂಜಾ, 131 ಗ್ರಾಂ ಕೊಕೇನ್​​​, 27 LSD ಸ್ಟ್ರಿಪ್ಸ್​​ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಎರಡನೇ ಬಾರಿಗೆ ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾಗಿದ್ದು, ಈ ಹಿಂದೆಯೂ ಈತನನ್ನು ಬಂಧಿಸಿ ಗಡಿಪಾರು ಮಾಡಲಾಗಿತ್ತು. ಆದರೆ ಮತ್ತೆ ಡ್ರಗ್ಸ್ ಮಾರಾಟದಲ್ಲಿ ನಿರತನಾಗಿದ್ದ ಈತ ಖಾಕಿ ಕೈಗೆ ಸಿಕ್ಕಿಬಿದ್ದಿದ್ದು, ಮತ್ತೊಂದು ಹೆಸರಿನಲ್ಲಿ ಆರೋಪಿ ದಾಖಲಾತಿ ಮಾಡಿಸಿಕೊಂಡಿದ್ದೇಗೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಕ್ಯಾಂಡಿ ಪ್ಯಾಕೆಟ್​ಗಳಲ್ಲಿ ಬ್ಯಾಂಕಾಕ್​ನಿಂದ ಬರುತ್ತಿತ್ತು ಡ್ರಗ್ಸ್! ಬೆಂಗಳೂರು ಏರ್​ಪೋರ್ಟಲ್ಲಿ ಇಬ್ಬರ ಬಂಧನ

ಮಾದಕದ್ರವ್ಯ ಸಾಗಾಟ: ವಿದೇಶಿ ಮಹಿಳೆ ವಶಕ್ಕೆ

Bengaluru Airport

ವಶಕ್ಕೆ ಪಡೆಯಲಾದ ಮಾದಕ ವಸ್ತು

ಅಕ್ರಮವಾಗಿ ಬೆಂಗಳೂರಿಗೆ ಮಾದಕದ್ರವ್ಯ ಸಾಗಾಣೆ ಮಾಡುತ್ತಿದ್ದ ವಿದೇಶಿ ಮಹಿಳೆಯನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್​​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದೆಹಲಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಕಾಶ್ ಏರ್ ಲೈನ್ಸ್ ನಲ್ಲಿ‌ ಆಗಮಿಸಿದ್ದ ಮಹಿಳಾ ಪ್ರಯಾಣಿಕಳ ಬಳಿ ಇದ್ದ ಸುಮಾರು 2.5 ಕೆಜಿ ಮೆಥಾಂಪೆಟಮೈನ್ ಗಾಂಜಾವನ್ನು ಸೀಜ್​​ ಮಾಡಲಾಗಿದೆ. ವಶಕ್ಕೆ ಪಡೆಯಲಾದ ಮಹಿಳೆ ನೈಜಿರಿಯಾ ಮೂಲದ ವೆರೋನಿಕಾ ಎಮ್ಯಾನುಯೆಲ್ ಎಂದು ಗೊತ್ತಾಗಿದ್ದು, ಆಕೆಯ ವಿಚಾರಣೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *