Headlines

ಬೆಂಗಳೂರು-ಮಂಗಳೂರು ರೈಲು ಪ್ರಯಾಣಿಕರಿಗೆ ಗುಡ್​​​ ನ್ಯೂಸ್​​ ನೀಡಿದ ಸಚಿವ ಅಶ್ವಿನಿ ವೈಷ್ಣವ್ – Kannada News | Bengaluru Mangaluru Vande Bharat, High Speed Rail and Electrification: Ashwini Vaishnaw’s Vision

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಮತ್ತು ಮಂಗಳೂರು ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದ್ದಾರೆ. ಈ ಬಗ್ಗೆ ಸಚಿವ ಅಶ್ವಿನಿ ವೈಷ್ಣವ್ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ಮಂಗಳೂರು ಮತ್ತು ಬೆಂಗಳೂರು ನಡುವೆ ವಂದೇ ಭಾರತ್ ರೈಲು (Bengaluru-Mangaluru Vande Bharat) ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದ್ದಾರೆ. ಬೆಂಗಳೂರು ಮತ್ತು ಮುಂಬೈ ನಡುವೆ ಶೀಘ್ರದಲ್ಲೇ ಪ್ರೀಮಿಯಂ ರೈಲು ಕಾರ್ಯಾಚರಣೆ ಆರಂಭಿಸಲಿದ್ದು, ಪುಣೆ-ಬೆಂಗಳೂರು ರೈಲು ಕಾರಿಡಾರ್‌ನ ಕಾರ್ಯಯೋಜನೆಯನ್ನು ನಡೆಸಲಾಗಿದೆ ಎಂದು ಹೇಳಿದ್ದಾರೆ.

ನಾವು ಈಗಾಗಲೇ ಹಾಸನ ಮತ್ತು ಮಂಗಳೂರಿನ ರೈಲ್ವೇ ವಿದ್ಯುದೀಕರಣದ ದುರಸ್ಥಿತಿ ಪೂರ್ಣಗೊಂಡಿದೆ. ರೈಲು ಓಡಾಡಕ್ಕೂ ಮುನ್ನ ಅನೇಕ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಆ ಪರೀಕ್ಷೆಗಳು ಮುಗಿದ ನಂತರ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ಮಾಡಬೇಕಿದೆ. ಆ ಕೆಲಸವೂ ತಕ್ಷಣದಲ್ಲಿ ಪೂರ್ಣಗೊಳ್ಳಲಿದೆ. ಇದರ ನಂತರ ರೈಲುಗಳ ವೇಳಾಪಟ್ಟಿ ತಯಾರು ಮಾಡಲಾಗುತ್ತದೆ. ಕಾರವಾರದವರೆಗಿನ ಈ ಸೇವೆಯು ಕರ್ನಾಟಕದ ಸಂಪೂರ್ಣ ಕರಾವಳಿ ಭಾಗವನ್ನು ಒಳಗೊಳ್ಳುತ್ತೇವೆ. ಇಂತಹ ಯೋಜನೆಗಳಿಗೆ ನಾವು ರಾಜ್ಯ ಬಜೆಟ್‌ನಿಂದ ಇನ್‌ಪುಟ್ ತೆಗೆದುಕೊಳ್ಳುವ ಕೆಲಸ ಕೂಡ ನಡೆಯಲಿದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ 12 ಜೋಡಿ ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸುತ್ತಿದ್ದು, ಭವಿಷ್ಯದಲ್ಲಿ ಇಡೀ ರಾಜ್ಯದಲ್ಲಿ ದಿಉ ಕಾರ್ಯನಿರ್ವಹಿಸಲಿದೆ. ಇದು ನಿಮಗೆ ನನ್ನ ಭರವಸೆ, ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಯಾವಾಗಲೂ ತನ್ನ ಭರವಸೆಗಳನ್ನು ಈಡೇರಿಸುತ್ತಾ ಬಂದಂತೆ, ಈ ಭರವಸೆಯನ್ನು ಸಹ ಈಡೇರಿಸಲಾಗುವುದು ಎಂದು ಹೇಳಿದ್ದಾರೆ. ಕರಾವಳಿಯು ವ್ಯಾಪಾರಕ್ಕೆ ಪ್ರಮುಖ ಕೇಂದ್ರವಾಗಿರುವುದರಿಂದ ಎರಡು ರೈಲುಗಳು ಇರುತ್ತವೆ. ಒಂದು ಕರಾವಳಿಯಿಂದ ಬೆಂಗಳೂರಿಗೆ ಮತ್ತು ಇನ್ನೊಂದು ಬೆಂಗಳೂರಿನಿಂದ ಕರಾವಳಿಗೆ. ಇನ್ನು ಬೆಂಗಳೂರು-ಚೆನ್ನೈ ಹೈ-ಸ್ಪೀಡ್ ಕಾರಿಡಾರ್ ಒಮ್ಮೆ ಜಾರಿಗೆ ಬಂದರೆ ಎರಡೂ ನಗರಗಳ ನಡುವಿನ ಪ್ರಯಾಣದ ಸಮಯ 73 ನಿಮಿಷಗಳು ಎಂದು ಅವರು ಹೇಳಿದ್ದಾರೆ. ಬೆಂಗಳೂರು ಮತ್ತು ಚೆನ್ನೈ ಒಂದು ಅರ್ಥದಲ್ಲಿ ಎರಡು ವಿಲೀನಗೊಂಡ ನಗರಗಳಾಗುತ್ತವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೈಟೆಕ್ 2-ನ್ಯಾನೋಮೀಟರ್ ಚಿಪ್ ಅನಾವರಣಗೊಳಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಒಂದೇ ದಿನದಲ್ಲಿ ನಿಮ್ಮ ವ್ಯವಹಾರವನ್ನು ಮುಗಿಸಬಹುದು, ಕೆಲಸ ಮಾಡಬಹುದು, ಚೆನ್ನೈನಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿ ಮಾಡಬಹುದು ಮತ್ತು ಅದೇ ದಿನ ಬೆಂಗಳೂರಿಗೆ ಹಿಂತಿರುಗಬಹುದು ಎಂದು ಹೇಳಿದ್ದಾರೆ. ಅದೇ ರೀತಿ, ಹೈದರಾಬಾದ್ ಮತ್ತು ಬೆಂಗಳೂರು ನಡುವಿನ ಪ್ರಯಾಣದ ಸಮಯ ಎರಡು ಗಂಟೆಗಳಾಗಿರುತ್ತದೆ ಮತ್ತು ಇದೆಲ್ಲವೂ ದಕ್ಷಿಣ ಭಾರತದ ಹೈ-ಸ್ಪೀಡ್ ಡೈಮಂಡ್ ಕಾರಿಡಾರ್‌ನ ಭಾಗವಾಗಿರುತ್ತದೆ. ಮೊದಲ ಹಂತದಲ್ಲಿ ಮುಂಬೈ-ಅಹಮದಾಬಾದ್ ಯೋಜನೆ ಮಾಡಲಾಗುವುದು ಏಕೆಂದರೆ ಇದು ಅತ್ಯಂತ ಉದ್ದ ರೈಲು ಸಂಪರ್ಕವಾಗಿದೆ. ಜತೆಗೆ ಇದರಲ್ಲಿ ಹಲವು ಸವಾಲುಗಳು ಇದೆ. ಇದರ ಜತೆಗೆ ಬುಲೆಟ್​​​ ಟ್ರೈನ್​​​ಗೂ ಚಾಲನೆ ಸಿಗಲಿದೆ. ಈಗಾಗಲೇ ಮೊದಲ ಹಂತ ಯೋಜನೆ ಪೂರ್ಣಗೊಳುತ್ತಿದೆ. ಮುಂದಿನ ಅಂದರೆ ಎರಡನೇ ಹಂತದಲ್ಲಿ 7 ಬುಲೆಟ್​​ ರೈಲುಗಳಿಗೆ ಅನುಮೋದನೆ ಸಿಕ್ಕಿದೆ. ವಿಕ್ಷಿತ್ ಭಾರತ್ ಮಾರ್ಗ ನಕ್ಷೆಯಡಿಯಲ್ಲಿ, ಬುಲೆಟ್ ರೈಲು ಕಾರಿಡಾರ್‌ಗಳ ಒಟ್ಟು ಉದ್ದವನ್ನು 7,000 ಕಿ.ಮೀ ತಲುಪಲು ಯೋಜಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *