ಹಾಸನ, ಆಗಸ್ಟ್ 16: ರೈತರ ಬೆಳೆ ವಿಮೆ ವಿಚಾರದಲ್ಲಿ ವಿಮಾ ಕಂಪನಿ ಹಾಗೂ ಕೃಷಿ ಅಧಿಕಾರಿಗಳ ವಿರುದ್ಧ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಗರಂ ಆದ ಪ್ರಸಂಗ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆದಿದೆ. ರೈತರು ವಿಮೆ ಹಣ ಕಟ್ಟಿದ್ರೆ ಅವರಿಗೆ ಪರಿಹಾರವೇ ಸಿಗಲಿಲ್ಲ. ಬೆಳೆ ಚೆನ್ನಾಗಿರುವ ಕಡೆ ಸಮೀಕ್ಷೆ ನಡೆಸಿ ಬೆಳೆ ಹಾನಿಯೇ ಇಲ್ಲ ಎಂದು ಸುಳ್ಳು ವರದಿ ಕೊಡ್ತಿದ್ದರು. ಹಾಗಾಗಿ ರೈತರು ಈ ವಿಮೆ ಮೇಲೆ ಆಸಕ್ತಿಯನ್ನೇ ಬಿಟ್ಟರು. ಆದರೆ ಇನ್ಮುಂದೆ ಇದೆಲ್ಲ ನಡೆಯಲ್ಲ. ಈ ಬಾರಿ ರೈತರು ಸಂಪೂರ್ಣ ಬೆಳೆ ಕಳೆದುಕೊಂಡಿದ್ದಾರೆ. ಬಿತ್ತನೆ ಆಗದಿರುವ ಕಡೆ ಶೇ.25ರಷ್ಟು ಪರಿಹಾರ ಕೊಡಬೇಕು. ವಿಮಾ ಕಂಪನಿಯವರನ್ನು ನಾನು ಕೇಳಲ್ಲ. ಕೃಷಿ ಇಲಾಖೆಯ ಅಧಿಕಾರಿಗಳೇ ಇದು ನಿಮ್ಮ ಜವಾಬ್ದಾರಿ. ನೀವೇ ಗಮನಹರಿಸಿ ಪರಿಹಾರ ಕೊಡಿಸಲು ಕ್ರಮವಹಿಸಿ ಎಂದು ಸಚಿವರು ಸೂಚಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.