Headlines

ಬ್ರೇಕಪ್​ನಲ್ಲಿ ಕೊನೆ ಆಯ್ತು ಧನುಷ್-ಮೃಣಾಲ್ ಪ್ರೀತಿ? – Kannada News | Dhanush Mrunal Thakur Breakup? Unpacking Their Rumored Relationship and Why It Ended

ಕಾಲಿವುಡ್ ಸೂಪರ್‌ಸ್ಟಾರ್ ಧನುಷ್ (Dhanush) ಹಾಗೂ ಬಾಲಿವುಡ್ ಜೊತೆಗೆ ಸೌತ್‌ನಲ್ಲೂ ಮಿಂಚುತ್ತಿರುವ ನಟಿ ಮೃಣಾಲ್ ಠಾಕೂರ್ ಕಳೆದ ಕೆಲವು ತಿಂಗಳುಗಳಿಂದ ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಗಾಸಿಪ್ ಗಲ್ಲಿ ಗಲ್ಲಿಯಲ್ಲಿ ಹರಿದಾಡಿತ್ತು. ಆದರೆ, ಈಗ ಈ ಜೋಡಿಯ ಅಭಿಮಾನಿಗಳಿಗೆ ನಿರಾಸೆಯಾಗುವಂತಹ ಸುದ್ದಿಯೊಂದು ಹೊರಬಿದ್ದಿದ್ದು, ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗಲೆಲ್ಲ ಮೃಣಾಲ್ ‘ನಾವು ಪ್ರೀತಿಸುತ್ತಿಲ್ಲ’ ಎಂದೇ ಹೇಳುತ್ತಿದ್ದರು.

2025ರ ಆಗಸ್ಟ್‌ನಲ್ಲಿ ಮೃಣಾಲ್ ಅಭಿನಯದ ‘ಸನ್ ಆಫ್ ಸರ್ದಾರ್ 2’ ಚಿತ್ರದ ಪ್ರೀಮಿಯರ್ ಶೋನಲ್ಲಿ ಧನುಷ್ ಮತ್ತು ಮೃಣಾಲ್ ಒಟ್ಟಿಗೆ ಕಾಣಿಸಿಕೊಂಡಾಗ ಇವರಿಬ್ಬರ ಡೇಟಿಂಗ್ ವದಂತಿ ಮೊದಲ ಬಾರಿಗೆ ರೆಕ್ಕೆಪುಕ್ಕ ಪಡೆದುಕೊಂಡಿತ್ತು. ಇದಕ್ಕೂ ಮುನ್ನ ಧನುಷ್ ನಟನೆಯ ‘ತೇರೆ ಇಷ್ಕ್ ಮೇ’ ಸಿನಿಮಾದ ಶೂಟಿಂಗ್ ಮುಕ್ತಾಯದ ಪಾರ್ಟಿಯಲ್ಲೂ ಮೃಣಾಲ್ ಭಾಗವಹಿಸಿ ಎಲ್ಲರ ಹುಬ್ಬೇರಿಸಿದ್ದರು. ಇಷ್ಟೇ ಅಲ್ಲದೆ, ಮೃಣಾಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಧನುಷ್ ಅವರ ಸಹೋದರಿಯರಾದ ಡಾ. ಕಾರ್ತಿಕಾ ಮತ್ತು ವಿಮಲಾ ಗೀತಾ ಅವರನ್ನು ಫಾಲೋ ಮಾಡುತ್ತಿದ್ದುದು ಇವರಿಬ್ಬರ ನಡುವಿನ ಆತ್ಮೀಯತೆಗೆ ಸಾಕ್ಷಿಯಾಗಿತ್ತು.

ಫಿಲ್ಮ್‌ಫೇರ್ ವರದಿಯ ಪ್ರಕಾರ, ಧನುಷ್ ಮತ್ತು ಮೃಣಾಲ್ ತಮಗಿದ್ದ ಪ್ರೇಮ ಸಂಬಂಧವನ್ನು ಮುರಿದುಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಈ ಸ್ಟಾರ್ ಜೋಡಿಯ ಮುನಿಸಿಗೆ ಅಥವಾ ಬ್ರೇಕಪ್‌ಗೆ ಅಸಲಿ ಕಾರಣ ಏನು ಎಂಬುದು ಸದ್ಯಕ್ಕೆ ಯಾರಿಗೂ ತಿಳಿದುಬಂದಿಲ್ಲ.

ಈ ಹಿಂದೆ ಆಪ್ತ ಮೂಲಗಳು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದವು. ‘ಹೌದು, ಅವರಿಬ್ಬರೂ ಡೇಟಿಂಗ್ ಮಾಡುತ್ತಿರುವುದು ನಿಜ. ಆದರೆ ಇದು ಆರಂಭಿಕ ಹಂತದಲ್ಲಿದೆ. ತಮ್ಮ ಮೌಲ್ಯಗಳು ಮತ್ತು ಆಲೋಚನೆಗಳಲ್ಲಿ ಇಬ್ಬರೂ ಒಂದೇ ತರಹ ಇರುವುದರಿಂದ ಸ್ನೇಹಿತರು ಇವರ ಜೋಡಿಯನ್ನು ಇಷ್ಟಪಟ್ಟಿದ್ದಾರೆ. ಆದರೆ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಲು ಅವರು ಇಷ್ಟಪಡುತ್ತಿಲ್ಲ’ ಎಂದು ತಿಳಿಸಿದ್ದವು. ಆದರೆ, ಮೃಣಾಲ್ ಮಾತ್ರ ಕಳೆದ ವರ್ಷ ಈ ಬಗ್ಗೆ ಸ್ಪಷ್ಟನೆ ನೀಡಿ, ಧನುಷ್ ತಮಗೆ ‘ಕೇವಲ ಒಳ್ಳೆಯ ಸ್ನೇಹಿತ ಅಷ್ಟೇ’ ಎಂದಿದ್ದರು.

ವೈರಲ್ ಆಗಿತ್ತು ಮದುವೆಯ ಫೋಟೋಗಳು!

ಇದೇ ವರ್ಷದ ಫೆಬ್ರವರಿಯಲ್ಲಿ ಇವರಿಬ್ಬರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಭಾರಿ ಸದ್ದು ಮಾಡಿತ್ತು. ದಕ್ಷಿಣ ಭಾರತದ ಸಾಂಪ್ರದಾಯಿಕ ಮದುವೆಯ ಉಡುಪಿನಲ್ಲಿ ಧನುಷ್-ಮೃಣಾಲ್ ಇರುವ ‘ಎಐ’ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದವು. ನಂತರ ಚಿತ್ರರಂಗದ ಆಪ್ತರು ಇದೊಂದು ಸುಳ್ಳು ವದಂತಿ ಎಂದು ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: ಧನುಷ್ ನಟನೆಯ ‘ಓಂ’ ಚಿತ್ರದಲ್ಲಿ ‘ಪುಷ್ಪ’ ಸಿನಿಮಾದ ಕಥೆ? ಸ್ಪಷ್ಟನೆ ನೀಡಿದ ನಿರ್ದೇಶಕ

ಧನುಷ್ ಅವರ ಮೊದಲ ಮದುವೆ:

ಧನುಷ್ ಅವರು ಈ ಹಿಂದೆ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರನ್ನು ವಿವಾಹವಾಗಿದ್ದರು. 18 ವರ್ಷ ಸಂಸಾರ ನಡೆಸಿದ್ದ ಈ ದಂಪತಿ 2022ರಲ್ಲಿ ಪರಸ್ಪರ ಒಪ್ಪಿಗೆಯಿಂದ ಬೇರ್ಪಡುವುದಾಗಿ ಘೋಷಿಸಿದ್ದರು. ಈ ದಂಪತಿಗೆ ಯಾತ್ರಾ ಮತ್ತು ಲಿಂಗಾ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *