
ಅರ್ಜುನ್ ಸರ್ಜಾ ನಟನೆಯ ‘ಬ್ಲಾಸ್ಟ್’ ಸಿನಿಮಾ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಆ್ಯಕ್ಷನ್ ಕಮರ್ಷಿಯಲ್ ಚಿತ್ರಕ್ಕೆ ರವಿ ಬಸ್ರೂರು ನೀಡಿರುವ ಅದ್ಭುತ ಸಂಗೀತ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ‘ಕೆಜಿಎಫ್’ ಹಾಗೂ ‘ಸಲಾರ್’ ಖ್ಯಾತಿಯ ರವಿ ಬಸ್ರೂರು ತಮ್ಮ ವಿಶಿಷ್ಟ ಶೈಲಿಯ ಬಿಜಿಎಂ ಮತ್ತು ಮಾಸ್ ಹಾಡುಗಳ ಮೂಲಕ ಪ್ರತಿಯೊಂದು ಸೀನ್‌ಗೂ ಜೀವ ತುಂಬಿದ್ದಾರೆ. ಚಿತ್ರದ ಕಥೆಗೆ ಅವರ ರೀ-ರೆಕಾರ್ಡಿಂಗ್ ಹೈಲೈಟ್ ಆಗಿದ್ದು, ಥಿಯೇಟರ್‌ನಲ್ಲಿ ಪ್ರೇಕ್ಷಕರಿಗೆ ಕಿವಿಗೆ ಹಬ್ಬ ಉಂಟುಮಾಡಿದೆ. ಸಿನಿಮಾದ ಒಟ್ಟಾರೆ ಯಶಸ್ಸು ಮತ್ತು ಕಲೆಕ್ಷನ್ ಹೆಚ್ಚಾಗುವಲ್ಲಿ ಅವರ ಮ್ಯೂಸಿಕ್ ಪ್ರಮುಖ ಮೈಲೇಜ್ ತಂದುಕೊಟ್ಟಿದೆ ಎಂದು ಚಿತ್ರವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.ಆ ಮ್ಯೂಸಿಕ್ನ ಒಂದು ಝಲಕ್ ಮೇಲಿನ ವಿಡಿಯೋದಲ್ಲಿ ಇದೆ.