Headlines

ಭಾರತದಲ್ಲಿ ಏಜ್ ವೆರಿಫಿಕೇಶನ್ ಪರೀಕ್ಷಿಸುತ್ತಿರುವ ವಾಟ್ಸಾಪ್; ವಯಸ್ಸು ತಿಳಿಸಲು ಸಿದ್ದರಾಗಿ – Kannada News | Whatsapp testing age verification feature to comply with indias dpdp act

ನವದೆಹಲಿ, ಆಗಸ್ಟ್ 9: ಮೆಟಾ (Meta) ಒಡೆತನದ ಮೆಸೇಜಿಂಗ್ ಪ್ಲಾಟ್​ಫಾರ್ಮ್ ವಾಟ್ಸಾಪ್ (WhatsApp), ಭಾರತದಲ್ಲಿ ತನ್ನ ಬಳಕೆದಾರರಿಗೆ ಜನ್ಮ ದಿನಾಂಕವನ್ನು (Date of Birth) ಸೇರಿಸಲು ಅವಕಾಶ ನೀಡುವ ಹೊಸ ಫೀಚರ್ ಅನ್ನು ಪರೀಕ್ಷಿಸಲು ಪ್ರಾರಂಭಿಸಿದೆ. ಭಾರತ ಸರ್ಕಾರ ಜಾರಿಗೆ ತರಲಿರುವ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ (DPDP) ಕಾಯ್ದೆಗೆ ಬದ್ಧವಾಗಿರಲು ಈ ಕ್ರಮ ಕೈಗೊಳ್ಳಲಾಗಿದೆ.

ಹುಟ್ಟಿದ ದಿನಾಂಕದ ಮಾಹಿತಿ: ಪ್ರಸ್ತುತ ಕೆಲ ಬಳಕೆದಾರರಿಗೆ ‘Add your date of birth’ ಎಂಬ ಪ್ರಾಂಪ್ಟ್ (Prompt) ಕಾಣಿಸಿಕೊಳ್ಳುತ್ತಿದ್ದು, ಬಳಕೆದಾರರು ತಮ್ಮ ವಯಸ್ಸನ್ನು ದೃಢೀಕರಿಸಲು ಇದು ಅವಕಾಶ ನೀಡುತ್ತದೆ. ಪರೀಕ್ಷೆಯ ಹಂತದಲ್ಲಿ ಈ ಮಾಹಿತಿಯನ್ನು ನೀಡುವುದು ಕಡ್ಡಾಯವಲ್ಲ. ಬಳಕೆದಾರರು ತಮ್ಮ ಹುಟ್ಟಿದ ದಿನಾಂಕವನ್ನು ನೀಡದೆಯೂ ವಾಟ್ಸಾಪ್ ಬಳಸುವುದನ್ನು ಮುಂದುವರಿಸಬಹುದು.

ಇದನ್ನೂ ಓದಿ: ಮಹೀಂದ್ರಾ ಗ್ರೂಪ್​ನಿಂದ ಹೊಸ ವಿಮಾನ ಸಂಸ್ಥೆ; ನೋವಾವಾಯು ಏರೋಸ್ಪೇಸ್ ಕಂಪನಿ ನೊಂದಣಿ

ಖಾಸಗಿತನಕ್ಕೆ ಧಕ್ಕೆ ಇಲ್ಲ ಎಂದ ಮೆಟಾ

ಬಳಕೆದಾರರ ವಯಸ್ಸಿನ ವಿವರಗಳು ಖಾಸಗಿಯಾಗಿದ್ದು, ಇದನ್ನು ಇತರ ಯಾವುದೇ ವಾಟ್ಸಾಪ್ ಬಳಕೆದಾರರೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ ಎಂದು ಸಂಸ್ಥೆಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

DPDP ಕಾಯ್ದೆಯ ನಿಯಮ: ಭಾರತದ ಡಿಪಿಡಿಪಿ (DPDP) ಕಾಯ್ದೆಯ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ವೈಯಕ್ತಿಕ ದತ್ತಾಂಶವನ್ನು ಬಳಸುವ ಡಿಜಿಟಲ್ ಪ್ಲಾಟ್​ಫಾರ್ಮ್​ಗಳು ಸೂಕ್ತ ವಯಸ್ಸು ದೃಢೀಕರಣ (Age-verification) ವ್ಯವಸ್ಥೆಯನ್ನು ಹೊಂದಿರಬೇಕಾಗುತ್ತದೆ.

ಇದನ್ನೂ ಓದಿ: ಎಂಡಿಆರ್ ಶುಲ್ಕ ಕೇವಲ ಶೇ. 0.04? ದೊಡ್ಡ ವ್ಯಾಪಾರಿಗಳಿಗೆ ಮಾತ್ರವಾ ಈ ಶುಲ್ಕ? ಯಾರು ದೊಡ್ಡ ವ್ಯಾಪಾರಿಗಳು?

ಪ್ರಸ್ತುತ ಈ ಫೀಚರ್ ಪರೀಕ್ಷಾ ಹಂತದಲ್ಲಿದ್ದು, ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *