Headlines

ಭಾರತದಲ್ಲಿ ಟಿ20 ಲೀಗ್ ಆಡಿದ ಮೂವರು ಅಫ್ಘನ್ ಕ್ರಿಕೆಟಿಗರಿಗೆ ನಿಷೇಧದ ಶಿಕ್ಷೆ – Kannada News | Afghan Cricketers Banned: ACB Action on Legends League Participation Without NOC

ಭಾರತದಲ್ಲಿ ಈ ಹಿಂದೆ ನಡೆದಿದ್ದ ಲೆಜೆಂಡ್ಸ್ ಲೀಗ್​ನಲ್ಲಿ (Legends League) ಭಾಗವಹಿಸಿದ್ದ ಮೂವರು ಅಫ್ಘಾನ್ ಆಟಗಾರರಿಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (Afghan Cricket Board) ನಿಷೇಧದ ಶಿಕ್ಷೆ ವಿಧಿಸಿದೆ ಎಂದು ವರದಿಯಾಗಿದೆ. ಮಂಡಳಿಯಿಂದ ನಿಷೇಧಕ್ಕೊಳಗಾದವರಲ್ಲಿ ಸಮಿಯುಲ್ಲಾ ಶಿನ್ವಾರಿ, ಅಫ್ತಾಬ್ ಅಲಂ ಮತ್ತು ಶಹಜಾದ್ ಮೊಹಮ್ಮದ್ ಸೇರಿದ್ದಾರೆ. ಈ ಮೂವರು ಆಟಗಾರರು ಭಾರತದಲ್ಲಿ ನಡೆದ ಲೆಜೆಂಡ್ಸ್ ಲೀಗ್‌ನಲ್ಲಿ ಅಫ್ಘಾನಿಸ್ತಾನ ಮಂಡಳಿಯ ಅನುಮತಿಯಿಲ್ಲದೆ ಭಾಗವಹಿಸಿದ್ದರು. ಹೀಗಾಗಿ ಇದರ ಪರಿಣಾಮವಾಗಿ ಎಸಿಬಿ ಈ ಮೂವರು ಆಟಗಾರರನ್ನು ನಾಲ್ಕು ತಿಂಗಳ ಕಾಲ ಕ್ರಿಕೆಟ್​ನಿಂದ ನಿಷೇಧಿಸಿದೆ. ಈಗ, ಈ ಮೂವರು ಆಟಗಾರರು ನಾಲ್ಕು ತಿಂಗಳ ಕಾಲ ಯಾವುದೇ ದೇಶೀಯ ಅಥವಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.

ಅಫ್ಘನ್ ಕ್ರಿಕೆಟ್ ಮಂಡಳಿಯ ದೊಡ್ಡ ಕ್ರಮ

ಈ ಮೂವರು ಆಟಗಾರರ ಬಗ್ಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಅಸಮಾಧಾನ ವ್ಯಕ್ತಪಡಿಸಿದ್ದು, ಭಾರತದ ನಡೆದಿದ್ದ ಲೆಜೆಂಡ್ಸ್ ಲೀಗ್ ಅನ್ನು ಐಸಿಸಿಯಾಗಲಿ ಅಥವಾ ಬಿಸಿಸಿಐಯಾಗಲಿ ನಡೆಸುವುದಿಲ್ಲ. ಹೀಗಾಗಿ ಇಂತಹ ಲೀಗ್​ಗಳಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದ್ದರಿಂದ ಮಂಡಳಿಯ ಅನುಮತಿ ಪಡೆಯದೆ ಈ ಲೀಗ್​ನಲ್ಲಿ ಆಡಿದ್ದ ಈ ಮೂವರು ಕ್ರಿಕೆಟಿಗರಿಗೆ ನಿಷೇಧ ಹೇರಲಾಗಿದೆ ಎಂಬುದನ್ನು ಅಫ್ಘನ್ ಮಂಡಳಿ ಸ್ಪಷ್ಟಪಡಿಸಿದೆ. ಈ ಲೀಗ್‌ನಲ್ಲಿ ಈ ಮೂವರು ಅಫ್ಘನ್ ಕ್ರಿಕೆಟಿಗರು ಮಾತ್ರವಲ್ಲದೆ ಅಸ್ಗರ್ ಅಫ್ಘಾನ್ ಕೂಡ ಆಡಿದ್ದರು. ಆದರೆ ಅವರು ಈಗಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರಿಂದ ಮಂಡಳಿಯು ಅವರಿಗೆ ಈ ಶಿಕ್ಷೆ ವಿಧಿಸಿಲಿಲ್ಲ.

NOC ನೀಡದ ಮಂಡಳಿ

ವರದಿಗಳ ಪ್ರಕಾರ, ಲೆಜೆಂಡ್ಸ್ ಲೀಗ್ ಪ್ರಾರಂಭವಾಗುವ ಮೊದಲು ಆಟಗಾರನೊಬ್ಬ ಎನ್​ಒಸಿ ಪಡೆಯುವ ಸಲುವಾಗಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯನ್ನು ಸಂಪರ್ಕಿಸಿದ್ದರು. ಆದರೆ ಮಂಡಳಿಯ ಸದಸ್ಯರು ಎನ್​ಒಸಿ ನೀಡಲು ಪದೇ ಪದೇ ವಿಳಂಬ ಮಾಡಿದರು. ಆ ನಂತರ ಆಟಗಾರರಿಗೆ ಆಡಲು ಅನುಮತಿ ನಿರಾಕರಿಸಿದರು. ಆದ್ದರಿಂದ, ಆಟಗಾರರಿಗೆ ಲೀಗ್‌ನಲ್ಲಿ ಭಾಗವಹಿಸುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ. ಇದಲ್ಲದೆ, ಈ ಆಟಗಾರರು ದೀರ್ಘಕಾಲದವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿದ್ದಾರೆ, ಆದ್ದರಿಂದ ಅವರು ACB ಯಿಂದ ಅನುಮತಿ ಪಡೆಯದೆ ಈ ಲೀಗ್​ನಲ್ಲಿ ಆಡಿದ್ದಾರೆ ಎಂದು ವರದಿಯಾಗಿದೆ.

ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಒಪ್ಪಂದದ ಆಟಗಾರರಿಗೆ ಕೇವಲ ಮೂರು ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶ ನೀಡಿದೆ. ಇತ್ತೀಚಿನ ವರ್ಷಗಳಲ್ಲಿ, ಹಲವಾರು ಅಫ್ಘಾನ್ ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್‌ಗಿಂತ ಟಿ20 ಲೀಗ್‌ಗಳಿಗೆ ಆದ್ಯತೆ ನೀಡಿರುವುದು, ಎಸಿಬಿ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿದೆ. ರಶೀದ್ ಖಾನ್, ನೂರ್ ಅಹ್ಮದ್ ಮತ್ತು ರಹಮಾನುಲ್ಲಾ ಗುರ್ಬಾಜ್‌ರಂತಹ ಆಟಗಾರರು ಈ ನಿರ್ಧಾರದಿಂದ ಹೆಚ್ಚು ತೊಂದರೆ ಅನುಭವಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *