Headlines

ಭಾರತದ ಫಾರೆಕ್ಸ್ ರಿಸರ್ವ್ಸ್ ಸತತ 3 ವಾರ ಏರಿಕೆ; ಒಟ್ಟು ರಿಸರ್ವ್ಸ್ 703 ಬಿಲಿಯನ್ ಡಾಲರ್ – Kannada News | India’s forex reserves crosses 703 billion USD on April 17th

ನವದೆಹಲಿ, ಏಪ್ರಿಲ್ 26: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (Forex Reserves) ಏಪ್ರಿಲ್ 17ಕ್ಕೆ 703.308 ಬಿಲಿಯನ್ ಡಾಲರ್ ಮುಟ್ಟಿದೆ. ಆ ಒಂದು ವಾರದಲ್ಲಿ ಮೀಸಲು ನಿಧಿಯಲ್ಲಿ 2.362 ಬಿಲಿಯನ್ ಡಾಲರ್​ನಷ್ಟು ಏರಿದೆ. ಸತತ ಮೂರನೇ ವಾರ ಫಾರೆಕ್ಸ್ ಹೆಚ್ಚಳ ಆಗಿರುವುದು. ಹಿಂದಿನ ವಾರದಲ್ಲಿ (ಏಪ್ರಿಲ್ 10) ಫಾರೆಕ್ಸ್ ರಿಸರ್ವ್ಸ್ 3.825 ಬಿಲಿಯನ್ ಡಾಲರ್ ಏರಿಕೆ ಆಗಿ 700.946 ಬಿಲಿಯನ್ ಡಾಲರ್​ನಷ್ಟು ಇತ್ತು.

ಚಿನ್ನದ ಸಂಗ್ರಹ ಹೆಚ್ಚಳ

ಭಾರತದ ಫಾರೆಕ್ಸ್ ರಿಸರ್ವ್ಸ್​ನಲ್ಲಿ ಎರಡನೇ ಅತಿದೊಡ್ಡ ಪಾಲು ಹೊಂದಿರುವ ಚಿನ್ನದ ಸಂಗ್ರಹ ಈ ವಾರ (ಏಪ್ರಿಲ್ 17) ಪ್ರಮುಖವಾಗಿ ಏರಿದೆ. 790 ಮಿಲಿಯನ್ ಡಾಲರ್​ಗಳಷ್ಟು ಏರಿದೆ. ಭಾರತ ಮಾತ್ರವಲ್ಲ, ಹಲವು ದೇಶಗಳ ಸೆಂಟ್ರಲ್ ಬ್ಯಾಂಕುಗಳು ಸತತವಾಗಿ ಚಿನ್ನದ ಖರೀದಿ ಮಾಡುವುದು ಮುಂದುವರಿದಿದೆ.

ಇದನ್ನೂ ಓದಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಲೈಸೆನ್ಸ್ ರದ್ದು ಮಾಡಿದ ಆರ್​ಬಿಐ; ಪೇಟಿಎಂ ಗ್ರಾಹಕರಿಗೆ ತೊಂದರೆಯಾ?

ಫಾರೆಕ್ಸ್ ಮೀಸಲು ನಿಧಿಯಲ್ಲಿ ಪ್ರಮುಖ ಭಾಗವಾಗಿರುವ ವಿದೇಶೀ ಕರೆನ್ಸಿ ಆಸ್ತಿ ಗಣನೀಯವಾಗಿ ಏರಿದೆ. 1.481 ಬಿಲಿಯನ್ ಡಾಲರ್​ಗಳಷ್ಟು ಹೆಚ್ಚಳಗೊಂಡು 557 ಬಿಲಿಯನ್ ಡಾಲರ್ ಮಟ್ಟ ದಾಟಿದೆ.

ಏಪ್ರಿಲ್ 17ರ ವಾರದಲ್ಲಿ ಏರಿಕೆಯಾದ ಫಾರೆಕ್ಸ್ ನಿಧಿ

ಒಟ್ಟೂ ಏರಿಕೆ 2.362 ಬಿಲಿಯನ್ ಡಾಲರ್

  • ಫಾರೀನ್ ಕರೆನ್ಸಿ ಅಸೆಟ್ (ಎಫ್​ಸಿಎ): 1.481 ಬಿಲಿಯನ್ ಡಾಲರ್
  • ಗೋಲ್ಡ್ ರಿಸರ್ವ್ಸ್: 790 ಮಿಲಿಯನ್ ಡಾಲರ್
  • ಎಸ್​ಡಿಆರ್: 78 ಬಿಲಿಯನ್ ಡಾಲರ್ ಏರಿಕೆ
  • ಐಎಂಎಫ್​ನಲ್ಲಿರುವ ರಿಸರ್ವ್ಸ್: 14 ಮಿಲಿಯನ್ ಡಾಲರ್

ಭಾರತದ ಒಟ್ಟು ಫಾರೆಕ್ಸ್ ರಿಸರ್ವ್ಸ್ (ಏ. 17ಕ್ಕೆ)

ಒಟ್ಟು ರಿಸರ್ವ್ಸ್: 703.308 ಬಿಲಿಯನ್ ಡಾಲರ್

  • ಫಾರೀನ್ ಕರೆನ್ಸಿ: 557.463 ಬಿಲಿಯನ್ ಡಾಲರ್
  • ಗೋಲ್ಡ್ ರಿಸರ್ವ್ಸ್: 122.133 ಬಿಲಿಯನ್ ಡಾಲರ್
  • ಎಸ್​ಡಿಆರ್: 18.841 ಬಿಲಿಯನ್ ಡಾಲರ್
  • ಐಎಂಎಫ್​ನಲ್ಲಿ ರಿಸರ್ವ್ಸ್: 4.87 ಬಿಲಿಯನ್ ಡಾಲರ್

ಇದನ್ನೂ ಓದಿ: ರುಪಾಯಿ ಮೌಲ್ಯ ಕುಸಿತ; ಆತಂಕ ಪಡಬೇಕಿಲ್ಲ; ದೀರ್ಘಾವಧಿ ಹೂಡಿಕೆಗೆ ಒಳ್ಳೆಯ ಅವಕಾಶ: ಸಿಇಎ ಅನಂತನಾಗೇಶ್ವರನ್

ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿರುವ ದೇಶಗಳಿವು

  1. ಚೀನಾ: 3.64 ಟ್ರಿಲಿಯನ್ ಡಾಲರ್
  2. ಜಪಾನ್: 1.39 ಟ್ರಿಲಿಯನ್ ಡಾಲರ್
  3. ಸ್ವಿಟ್ಜರ್​ಲ್ಯಾಂಡ್: 1.077 ಟ್ರಿಲಿಯನ್ ಡಾಲರ್
  4. ರಷ್ಯಾ: 755 ಬಿಲಿಯನ್ ಡಾಲರ್
  5. ಭಾರತ: 703 ಬಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *