Headlines

ಮಂಗಗಳ ದಾಳಿಯಿಂದ ತಪ್ಪಿಸಿಕೊಳ್ಳುವಾಗ ತಾರಸಿಯಿಂದ ಕೆಳಗೆ ಬಿದ್ದು ವೃದ್ಧೆ ಸಾವು – Kannada News | Elderly Woman Dies After Falling From Terrace While Fleeing Monkey Attack in Uttar Pradesh

ಅಮ್ರೋಹಾ, ಫೆಬ್ರವರಿ 10: ಮಂಗ(Monkey)ಗಳ ದಾಳಿಯಿಂದ ತಪ್ಪಿಸಿಕೊಳ್ಳಲು ವೃದ್ಧೆಯೊಬ್ಬರು ಛಾವಣಿಯಿಂದ ಹಾರಿ ಪ್ರಾಣಬಿಟ್ಟಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. ಈ ದುರಂತ ಘಟನೆ ಆದಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಪ್ಸರಾ ಗ್ರಾಮದಲ್ಲಿ ಸಂಭವಿಸಿದೆ.  ವರದಿಗಳ ಪ್ರಕಾರ, ಪಪ್ಸರಾ ಗ್ರಾಮದ ನಿವಾಸಿ ಮುನ್ನಾ ಎಂಬುವವರು ತಮ್ಮ ಮನೆಯ ಛಾವಣಿಯ ಮೇಲೆ ಕುಳಿತಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಪರಸ್ಪರ ಜಗಳವಾಡುತ್ತಿದ್ದ ಕೋತಿಗಳ ಗುಂಪು ಇದ್ದಕ್ಕಿದ್ದಂತೆ ಛಾವಣಿಯ ಮೇಲೆ ಓಡಿ ಬಂದಿದ್ದವು, ಆಗ ಮಹಿಳೆ ಭಯಭೀತರಾಗಿ ಎದ್ದು ನಿಂತಿದ್ದರು.

ಅಷ್ಟರಲ್ಲಿ ಕೋತಿಗಳು ಅವರ ಮೇಲೆ ದಾಳಿ ಮಾಡಿದ್ದವು, ಗಾಬರಿಗೊಂಡ ಮಹಿಳೆ ಚಮೇಲಿ ಓಡಲು ಪ್ರಯತ್ನಿಸಿದ್ದಾರೆ, ಸಮತೋಲನ ಕಳೆದುಕೊಂಡು ನೇರವಾಗಿ ಕೆಳಗೆ ಬಿದ್ದಿದ್ದಾರೆ. ಬಿದ್ದ ಪರಿಣಾಮ ಅವರ ದೇಹದ ಹಲವು ಭಾಗಗಳು ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದವು. ಅವರ ಕುಟುಂಬವು ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿತ್ತು, ಆದರೆ ಮಾರ್ಗಮಧ್ಯದಲ್ಲೇ ಅವರು ಮೃತಪಟ್ಟಿದ್ದರು.

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಷಯದ ಬಗ್ಗೆ ಮಾಹಿತಿ ಪಡೆದರು. ಆದರೆ ಕುಟುಂಬವು ಯಾವುದೇ ಕಾನೂನು ಕ್ರಮ ಕೈಗೊಳ್ಳಲು ನಿರಾಕರಿಸಿತು. ಅಗತ್ಯ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ಪೊಲೀಸರು ಹಿಂತಿರುಗಿದರು.

ಮತ್ತಷ್ಟು ಓದಿ: ಕ್ರಿಕೆಟ್ ಆಡುತ್ತಿದ್ದವರಿಗೆ ಕ್ವಾಟ್ಲೆ ಕೊಟ್ಟ ಮಂಗ: ದಿಕ್ಕಾಪಾಲಾಗಿ ಓಡಿದ ಯುವಕರು

ಮತ್ತೊಂದು ಘಟನೆ
ಮುಂಬೈನ ವಿಲೇ ಪಾರ್ಲೆ (ಪೂರ್ವ) ಪ್ರದೇಶದ ಬಹುಮಹಡಿ ಕಟ್ಟಡದಲ್ಲಿ ಸೋಮವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿತ್ತು. ಈ ದುರಂತ ಘಟನೆಯಲ್ಲಿ 63 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಲೇ ಪಾರ್ಲೆಯ ಸುವಿಧಾ ಪರ್ಲ್ ಕಟ್ಟಡದಲ್ಲಿ ಈ ಘಟನೆ ಸಂಭವಿಸಿದೆ.

ಅಧಿಕಾರಿಗಳ ಪ್ರಕಾರ, ಬೆಳಗ್ಗೆ 9.51 ರ ಸುಮಾರಿಗೆ ಕಟ್ಟಡದ 13 ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೊಗೆ ಮತ್ತು ಜ್ವಾಲೆಯ ದಟ್ಟಣೆ ವೇಗವಾಗಿ ಹರಡಿತ್ತು, ಇದು ನಿವಾಸಿಗಳಲ್ಲಿ ಭಯಭೀತಿಯನ್ನುಂಟುಮಾಡಿತು. ಬೆಂಕಿಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ಕನಿಷ್ಠ ಐದು ಅಗ್ನಿಶಾಮಕ ದಳದ ವಾಹನಗಳು ತಕ್ಷಣ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದವು. ಗಣನೀಯ ಪ್ರಯತ್ನದ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:01 am, Tue, 10 February 26

Source link

Leave a Reply

Your email address will not be published. Required fields are marked *