ನಾಸಿಕ್, ಏಪ್ರಿಲ್ 15: ಭಾರತದ ಅತಿದೊಡ್ಡ ಸಾಫ್ಟ್‌ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ನಾಸಿಕ್ ಶಾಖೆಯಲ್ಲಿ ನಡೆದಿದೆ ಎನ್ನಲಾದ ಘಟನೆಗಳು ಇಡೀ ಐಟಿ ಲೋಕವನ್ನೇ ಬೆಚ್ಚಿಬೀಳಿಸಿವೆ. ಕೇವಲ ವೃತ್ತಿಪರ ಕೆಲಸಕ್ಕೆ ಸೀಮಿತವಾಗಬೇಕಿದ್ದ ಕಚೇರಿ ಆವರಣದಲ್ಲಿ ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ ಮತ್ತು ವ್ಯವಸ್ಥಿತ ಮತಾಂತರದ ಸಂಚು ನಡೆಯುತ್ತಿತ್ತು ಎಂಬ ಸ್ಫೋಟಕ ಮಾಹಿತಿ ತನಿಖೆಯಿಂದ ಹೊರಬಂದಿದೆ.
ಹಿಂದೂ ಯುವತಿಯರೇ ಟಾರ್ಗೆಟ್!
ಈ ಪ್ರಕರಣದಲ್ಲಿ ಸಾಕ್ಷಿಯೊಬ್ಬರು ನೀಡಿರುವ ಹೇಳಿಕೆ ಬೆಚ್ಚಿಬೀಳಿಸುವಂತಿದೆ. ಆರೋಪಿಗಳು ಇತರ ಪುರುಷ ಉದ್ಯೋಗಿಗಳಿಗೆ “ಹೋಗಿ ಹಿಂದೂ ಹುಡುಗಿಯರನ್ನು ನಿಮ್ಮ ಗೆಳತಿಯರನ್ನಾಗಿ ಮಾಡಿಕೊಳ್ಳಿ, ಅವರನ್ನು ಮದುವೆಯಾಗಿ ಮತಾಂತರ ಮಾಡಿ” ಎಂದು ಪ್ರಚೋದಿಸುತ್ತಿದ್ದರು. ಈ ಕೆಲಸಕ್ಕಾಗಿ ಹಣದ ಆಮಿಷವನ್ನೂ ಒಡ್ಡಲಾಗುತ್ತಿತ್ತು ಎನ್ನಲಾಗಿದೆ. 2021 ರಿಂದಲೇ ಈ ಜಾಲ ಸಕ್ರಿಯವಾಗಿದ್ದು, ಇದಕ್ಕೆ ಮಾನವ ಸಂಪನ್ಮೂಲ (HR) ವಿಭಾಗದ ಬೆಂಬಲವೂ ಇತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಬಂಧಿತರಲ್ಲಿ ಒಬ್ಬರಾದ ಹೆಚ್.ಆರ್ ಮ್ಯಾನೇಜರ್ ನಿದಾ ಖಾನ್ ಅವರನ್ನು ‘ಲೇಡಿ ಕ್ಯಾಪ್ಟನ್’ ಎಂದು ಕರೆಯಲಾಗುತ್ತಿತ್ತು. ಈಕೆ ಮಹಿಳಾ ಉದ್ಯೋಗಿಗಳೊಂದಿಗೆ ಆತ್ಮೀಯವಾಗಿ ಸ್ನೇಹ ಬೆಳೆಸಿ, ನಂತರ ಅವರಿಗೆ ನಮಾಜ್ ಮಾಡಲು ಮತ್ತು ಹಿಜಾಬ್ ಧರಿಸಲು ತರಬೇತಿ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯಾರಾದರೂ ಪ್ರತಿರೋಧ ತೋರಿದರೆ ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕಲಾಗುತ್ತಿತ್ತು.
ಎಂಟು ಮಹಿಳೆಯರಿಂದ ದೂರು: ಎಸ್ಐಟಿ ತನಿಖೆ
ಫೆಬ್ರವರಿ 2022 ರಿಂದ ಮಾರ್ಚ್ 2026 ರ ನಡುವೆ ನಡೆದ ಈ ದೌರ್ಜನ್ಯಗಳ ಬಗ್ಗೆ ಎಂಟು ಮಹಿಳಾ ಉದ್ಯೋಗಿಗಳು ಧೈರ್ಯದಿಂದ ದೂರು ನೀಡಿದ್ದಾರೆ. ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸುವುದು ಮತ್ತು ಅಸಭ್ಯವಾಗಿ ವರ್ತಿಸಿದ ಆರೋಪಗಳು ಕೇಳಿಬಂದಿವೆ.
ಹಿಂದೂ ಉದ್ಯೋಗಿಗಳನ್ನು ನಮಾಜ್ ಮಾಡಲು ಒತ್ತಾಯಿಸುವುದು ಮತ್ತು ಅವರ ಧರ್ಮವನ್ನು ಅವಮಾನಿಸುವ ಕೆಲಸ ನಿರಂತರವಾಗಿ ನಡೆಯುತ್ತಿತ್ತು. ಉನ್ನತ ಅಧಿಕಾರಿಗಳಿಗೆ ದೂರು ನೀಡಿದರೂ ಅವರು ಯಾವುದೇ ಕ್ರಮ ಕೈಗೊಳ್ಳದೆ, ಆರೋಪಿಗಳಿಗೆ ಪ್ರಚೋದನೆ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ಓದಿ: ಟಿಸಿಎಸ್ ಮತಾಂತರ, ಲೈಂಗಿಕ ಕಿರುಕುಳ ಪ್ರಕರಣ; ಕಠಿಣ ತನಿಖೆಗೆ ಟಾಟಾ ಕಂಪನಿ ಆದೇಶ
ಬಂಧಿತ ಆರೋಪಿಗಳು
ಡ್ಯಾನಿಶ್ ಶೇಖ್
ತೌಸಿಫ್ ಅತ್ತರ್
ರಾಜಾ ಮೆಮನ್
ಶಾರುಖ್ ಖುರೇಷಿ
ಶಫಿ ಶೇಖ್
ಆಸಿಫ್ ಅಫ್ತಾಬ್ ಅನ್ಸಾರಿ
ನಿದಾ ಖಾನ್ (HR ಮ್ಯಾನೇಜರ್)
ಟಾಟಾ ಸಂಸ್ಥೆಯ ಕಠಿಣ ನಿಲುವು
ಘಟನೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್, ಇದು “ಗಂಭೀರವಾಗಿ ಕಳವಳಕಾರಿ ಮತ್ತು ದುಃಖಕರ” ಎಂದು ಬಣ್ಣಿಸಿದ್ದಾರೆ. ಕಂಪನಿಯು ಈಗಾಗಲೇ ಆರೋಪಿಗಳನ್ನು ಅಮಾನತುಗೊಳಿಸಿದ್ದು, ಆರತಿ ಸುಬ್ರಮಣಿಯನ್ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿಯನ್ನು ರಚಿಸಿದೆ.
ನಾಸಿಕ್ ಪೊಲೀಸರು ರಚಿಸಿರುವ ವಿಶೇಷ ತನಿಖಾ ತಂಡ (SIT) ಈಗ ಈ ಮತಾಂತರದ ಜಾಲದ ಹಿಂದಿರುವ ದೊಡ್ಡ ತಲೆಗಳಿಗಾಗಿ ಹುಡುಕಾಟ ನಡೆಸುತ್ತಿದೆ. ಐಟಿ ಸಂಸ್ಥೆಯೊಂದರ ಒಳಗೆ ಇಂತಹ ವ್ಯವಸ್ಥಿತ ಸಂಚು ನಡೆದದ್ದು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಟಿಸಿಎಸ್ ವಿವಾದದ ಬಗ್ಗೆ ಟಿ.ವಿ. ಮೋಹನ್‌ದಾಸ್ ಪೈ ಕಿಡಿ
ನಾಸಿಕ್‌ನ ಟಿಸಿಎಸ್ (TCS) ಕಚೇರಿಯಲ್ಲಿ ನಡೆದಿದೆ ಎನ್ನಲಾದ ಮತಾಂತರದ ಪ್ರಯತ್ನ ಮತ್ತು ಕಿರುಕುಳದ ಘಟನೆಯು ಕೇವಲ ಒಂದು ಕಚೇರಿಯ ಸಮಸ್ಯೆಯಾಗಿ ಉಳಿದಿಲ್ಲ, ಬದಲಾಗಿ ಇದು ಭಾರತದ ವೈಟ್-ಕಾಲರ್ (White-Collar) ಉದ್ಯೋಗ ವಲಯದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ. ಐಟಿ ವಲಯದ ದಿಗ್ಗಜ ಮತ್ತು ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಟಿ.ವಿ. ಮೋಹನ್‌ದಾಸ್ ಪೈ ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ವೃತ್ತಿಪರತೆ ಇರಬೇಕಾದ ಕಚೇರಿಗಳಲ್ಲಿ ಒಂದು ನಿರ್ದಿಷ್ಟ ಗುಂಪು ತನ್ನ ಧಾರ್ಮಿಕ ಅಜೆಂಡಾವನ್ನು ಹೇರುವುದು ಅಪಾಯಕಾರಿ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಲಸದ ಸ್ಥಳದಲ್ಲಿ ಕೆಲವರು ತಮ್ಮ ಧರ್ಮದ ಪ್ರಚಾರ ಮಾಡುವುದು ಮತ್ತು ಇತರರನ್ನು ಮತಾಂತರಕ್ಕೆ ಪ್ರಚೋದಿಸುವುದನ್ನು ನಾನು ವೈಯಕ್ತಿಕವಾಗಿ ನೋಡಿದ್ದೇನೆ.ಸಮುದಾಯದ ರೇಖೆಗಳನ್ನು ಮೀರಿ ಸಹೋದ್ಯೋಗಿಗಳನ್ನು ಮಾನಸಿಕವಾಗಿ ಗುರಿಯಾಗಿಸಲು ಸಾಮಾಜಿಕ ಜಾಲತಾಣದ ಗುಂಪುಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ