ಮತ್ತೆ ಒಂದಾಗಿ ಸಿನಿಮಾ ಮಾಡ್ತಾರಾ ಅಜಯ್ ದೇವಗನ್, ಓಂ ರಾವುತ್? ಸಿಕ್ತು ಸ್ಪಷ್ಟನೆ

ಮತ್ತೆ ಒಂದಾಗಿ ಸಿನಿಮಾ ಮಾಡ್ತಾರಾ ಅಜಯ್ ದೇವಗನ್, ಓಂ ರಾವುತ್? ಸಿಕ್ತು ಸ್ಪಷ್ಟನೆ

ಬಾಲಿವುಡ್‌ನ ಬ್ಲಾಕ್‌ಬಸ್ಟರ್ ಸಿನಿಮಾ ‘ತನಾಜಿ: ದಿ ಅನ್​ಸಂಗ್ ವಾರಿಯರ್’ ಮೂಲಕ ನಟ ಅಜಯ್ ದೇವಗನ್ ಅವರು ದೊಡ್ಡ ಮಟ್ಟದ ಯಶಸ್ಸು ಕಂಡಿದ್ದರು. ಆ ಸಿನಿಮಾಗೆ ನಿರ್ದೇಶಕ ಓಂ ರಾವುತ್ (Om Raut) ಅವರು ಆ್ಯಕ್ಷನ್-ಕಟ್ ಹೇಳಿದ್ದರು. ಈಗ ಓಂ ರಾವುತ್ ಮತ್ತು ಅಜಯ್ ದೇವಗನ್ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿತ್ತು. ಆದರೆ, ಈ ವರದಿಗಳ ಬಗ್ಗೆ ಈಗ ಅಜಯ್ ದೇವಗನ್ (Ajay Devgn) ಅವರ ಕಡೆಯಿಂದ ಅಧಿಕೃತ ಸ್ಪಷ್ಟನೆ ಬಂದಿದೆ.

ಕೇಳಿಬಂದ ವದಂತಿಗಳಿಗೆ ಅಜಯ್ ದೇವಗನ್ ಪರ ವಕ್ತಾರರು ತೆರೆ ಎಳೆದಿದ್ದಾರೆ. ಅಜಯ್ ದೇವಗನ್ ಮತ್ತು ಓಂ ರಾವುತ್ ಮತ್ತೊಂದು ಐತಿಹಾಸಿಕ ಸಿನಿಮಾಕ್ಕಾಗಿ ಒಂದಾಗುತ್ತಿದ್ದಾರೆ ಎಂಬ ವರದಿಗಳನ್ನು ನಟನ ತಂಡ ಸಂಪೂರ್ಣವಾಗಿ ನಿರಾಕರಿಸಿದೆ. ಈ ಬಗ್ಗೆ ‘ಅಜಯ್ ದೇವಗನ್ ಫಿಲ್ಮ್ಸ್’ ವಕ್ತಾರರು ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಅಜಯ್ ದೇವಗನ್ ಮತ್ತು ಓಂ ರಾವುತ್ ಮತ್ತೆ ಒಂದಾಗುತ್ತಿದ್ದಾರೆ ಎಂಬ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಸದ್ಯಕ್ಕೆ ಅಂತಹ ಯಾವುದೇ ಚರ್ಚೆಗಳು ಅಥವಾ ಸಹಯೋಗಗಳು ನಡೆಯುತ್ತಿಲ್ಲ. ಈ ಸುದ್ದಿಗಳು ಸಂಪೂರ್ಣವಾಗಿ ಆಧಾರರಹಿತ. ಅಜಯ್ ಮತ್ತು ಓಂ ರಾವುತ್ ಇಬ್ಬರೂ ಪ್ರಸ್ತುತ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ನಟಿ ಕಾಜೋಲ್ ಬಳಿ ಆಸ್ತಿ ಇಷ್ಟೊಂದಾ? ಅಜಯ್ ದೇವಗನ್ ದಂಪತಿ ಪೈಕಿ ಯಾರು ಶ್ರೀಮಂತರು?

ಸದ್ಯಕ್ಕೆ ‘ದೃಶ್ಯಂ 3’ ಮೇಲೆ ಅಜಯ್ ದೇವಗನ್ ಅವರು ಗಮನ ಹರಿಸಿದ್ದಾರೆ. ಅಜಯ್ ದೇವಗನ್ ಕಳೆದ ವರ್ಷ ‘ದೇ ದೇ ಪ್ಯಾರ್ ದೇ 2’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಅವರು ಬಹುನಿರೀಕ್ಷಿತ ‘ದೃಶ್ಯಂ 3’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅಕ್ಟೋಬರ್ 2ರಂದು ಆ ಸಿನಿಮಾ ಬಿಡುಗಡೆ ಆಗಲಿದೆ. ಆ ಸಿನಿಮಾಗಾಗಿ ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *