
ಬೆಳಗಾವಿ, (ಏಪ್ರಿಲ್ 12): ಅವರಿಬ್ರು ಪ್ರೀತಿಸಿ ಮದುವೆ ಆಗಿದ್ರು. 14 ವರ್ಷದ ಅವರ ಸುಖ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದಾರೆ. ಹೀಗಿರುವಾಗ್ಲೇ ಆ ಸಂಸಾರಕ್ಕೆ ಅದೊಬ್ಬ ಎಂಟ್ರಿ ಆಗಿದ್ದ. ನೋಡ ನೋಡ್ತಿದ್ದಂತೆ ಆ ಸಂಸಾರವನ್ನೇ ಆ ಪಾಪಿ ಛಿದ್ರ ಮಾಡಿದ್ದಾನೆ. ಪ್ರಿಯಕರನಿಗಾಗಿ ಗಂಡನನ್ನೇ ಕೊಲ್ಲಿಸಿದ ಪಾಪಿ ಪತ್ನಿ ಅರೆಸ್ಟ್ ಆಗಿದ್ದೇ ರೋಚಕವಾಗಿದೆ. ಹೌದು… ಬೆಳಗಾವಿಯಲ್ಲಿ (Belagavi) ಪತ್ನಿಯಿಂದಲೇ ಪತಿ ಕೊಲೆ ಆಗಿದ್ದು, ನೌಟಂಕಿ ಆಟ ಆಡ್ತಿದ್ದ ಈ ಡೌವ್ರಾಣಿ ಪ್ರಿಯಕರನ ಜತೆ ಹಿಂಡಲಗಾ ಜೈಲುಪಾಲಾಗಿದ್ದಾಳೆ.
ಅವಿನಾಶ್- ಲಕ್ಷ್ಮೀ ಅನ್ನೋ ಈ ಜೋಡಿ 14 ವರ್ಷಗಳ ಹಿಂದೆಯೇ ಪ್ರೀತಿಸಿ ಮದುವೆ ಆಗಿದ್ರು. ಇಬ್ಬರ ಜಾತಿ ಬೇರೆಯಾದ್ರೂ ಇವರ ಪ್ರೀತಿಗೆ ಅದು ಅಡ್ಡಿ ಆಗಿರಲಿಲ್ಲ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಬೆಳಗಾವಿಯ ಅನಗೋಳದಲ್ಲಿ ಆಯುರ್ವೇದಿಕ್ ಕ್ಲಿನಿಕ್ ಇಟ್ಟುಕೊಂಡು ಅವಿನಾಶ್ ಬದುಕು ಕಟ್ಟಿಕೊಂಡಿದ್ರು. ಆದ್ರೆ ಏಪ್ರಿಲ್ 6 ರಂದು ಇದೇ ಕ್ಲಿನಿಕ್ನಲ್ಲೇ ಅವಿನಾಶ್ ಶವವಾಗಿದ್ರು. ನನ್ನ ಗಂಡನಿಗೆ ಶುಗರ್ ಹೆಚ್ಚಾಗಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ತಲೆಗೆ ಪೆಟ್ಟಾಗಿ ಗಂಡ ಮೃತಪಟ್ಟಿದ್ದಾನೆ ಅಂತಾ ಕತೆ ಹೇಳಿದ ಲಕ್ಷ್ಮೀ, ಗಂಡನ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ಳು. ಆದ್ರೆ ಪೋಸ್ಟ್ ಮಾರ್ಟಂ ರಿಪೋರ್ಟ್ ಬರ್ತಿದ್ದಂತೆ ಈ ಸಾವಿನ ಅಸಲಿಯತ್ತು ಬಯಲಾಗಿದೆ.