ಕೊಲ್ಕತ್ತಾ, ಏಪ್ರಿಲ್ 30: ಪಶ್ಚಿಮ ಬಂಗಾಳದ ಚುನಾವಣೆಯ (West Bengal Elections) ಮತ ಎಣಿಕೆ ಮೇ 4ರಂದು ನಡೆಯಲಿದೆ. ಆದರೆ, ಮತ ಎಣಿಕೆಗೂ ಮುನ್ನ ವಿದ್ಯುನ್ಮಾನ ಮತಯಂತ್ರಗಳನ್ನು ತೆರೆದ ಆರೋಪ ಮಾಡಿರುವ ಟಿಎಂಸಿ ಬಿಜೆಪಿಯವರು ಅಕ್ರಮವಾಗಿ ಇವಿಎಂ ಓಪನ್ ಮಾಡಿದ್ದಾರೆಂದು ಇವಿಎಂಗಳನ್ನು ಇರಿಸಿರುವ ಸ್ಟ್ರಾಂಗ್ರೂಮ್ ಎದುರು ಪ್ರತಿಭಟನೆ ನಡೆಸಿದ್ದಾರೆ. ಕೊಲ್ಕತ್ತಾದ ಸ್ಟ್ರಾಂಗ್ರೂಮ್ ಹೊರಗೆ ಟಿಎಂಸಿ ನಾಯಕರ ಪ್ರತಿಭಟನೆ ನಡೆದಿದೆ. ಟಿಎಂಸಿ ನಾಯಕರಾದ ಕುನಾಲ್ ಘೋಷ್, ಶಶಿ ಪಂಜಾ ಪ್ರತಿಭಟನೆ ನಡೆಸಿದ್ದಾರೆ. ಸ್ಟ್ರಾಂಗ್ರೂಮ್ ಸೀಲ್ ಟ್ಯಾಂಪರಿಂಗ್ ಮಾಡಿದ್ದಾರೆಂದು ಆರೋಪಿಸಿ ಧರಣಿ ನಡೆಸಲಾಗಿದೆ. ಇವಿಎಂಗಳನ್ನು ತೆರೆದಿರುವ ವಿಡಿಯೋ ಕೂಡ ಟಿಎಂಸಿ ಬಿಡುಗಡೆ ಮಾಡಿದೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಟಿಎಂಸಿ ಮುಖ್ಯಸ್ಥೆ ಮತ್ತು ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸ್ಟ್ರಾಂಗ್ ಎದುರು ಜಮಾಯಿಸಿರುವ ಬಿಜೆಪಿ, ಟಿಎಂಸಿ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ