Headlines

ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ – Kannada News | Religious Leader Controversy: Kalaburagi Swamiji’s Viral Alcohol and Song Video Ignites Anger

ಕಲಬುರಗಿ, ಆ.17 : ಪೂಜ್ಯ ಭಾವನೆಯಿಂದ ನೋಡುವ ಮಠದಲ್ಲೇ ಸ್ವಾಮೀಜಿಯೊಬ್ಬರು ಎದುರಿಗೆ ಮದ್ಯದ ಬಾಟಲ್ ಇಟ್ಟುಕೊಂಡು ಸಿನಿಮಾ ಹಾಡು ಹಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಶ್ರೀ ಮರುಳಾರಾಧ್ಯ ಸ್ವಾಮೀಜಿ ಅವರ ಬಿಂದಾಸ್ ಮೋಜಿನ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾವಿಧಾರಿ ಸ್ವಾಮೀಜಿ ಕೈಯಲ್ಲಿ ಮೈಕ್ ಹಿಡಿದು, ಎದುರುಗಡೆ ಮದ್ಯದ (ಮದ್ಯದ ಬಾಟಲಿ) ಇಟ್ಟುಕೊಂಡು ಪ್ರಸಿದ್ಧ ರವಿಚಂದ್ರನ್ ಅಭಿನಯದ “ಯಾರಿವಳು ಯಾರಿವಳು…” ಎಂಬ ಜನಪ್ರಿಯ ಸಿನಿಮಾ ಹಾಡನ್ನು ಮಠದಲ್ಲಿಯೇ ಗತ್ತಿನಿಂದ ಹಾಡಿದ್ದಾರೆ. ಪವಿತ್ರ ಶ್ರಾವಣ ಮಾಸದ ಆರಂಭದಲ್ಲೇ ಮಠದ ಆವರಣದಲ್ಲೇ ನಡೆದ ಈ ಘಟನೆಯ ವೀಡಿಯೋ ಹೊರಬಿದ್ದಿದ್ದು, ಸ್ವಾಮೀಜಿಯ ನಡವಳಿಕೆಗೆ ಸ್ಥಳೀಯರು ಹಾಗೂ ಧಾರ್ಮಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಹಿಂದೆ ಇದೇ ಸ್ವಾಮೀಜಿ “ಹಿಂದೂ ಧರ್ಮದ ರಕ್ಷಣೆಗಾಗಿ ಮಕ್ಕಳ ಕೈಯಲ್ಲಿ ಪೆನ್ನಿನ ಬದಲು ಖಡ್ಗ ಕೊಡಿ” ಎಂದು ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಅವರ ಈ ‘ಬಿಂದಾಸ್’ ಅವತಾರ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *