Headlines

ಮನುಷ್ಯರಿಗೇ ಬುದ್ಧಿ ಕಲಿಸಿದ ಬೆಂಗಳೂರಿನ ಬೀದಿ ನಾಯಿಗಳು: ಟ್ರಾಫಿಕ್ ರೂಲ್ಸ್ ಪಾಲಿಸಿ ‘ಜಿಬ್ರಾ ಕ್ರಾಸಿಂಗ್’ನಲ್ಲೇ ರಸ್ತೆ ದಾಟಿದ ಶ್ವಾನಗಳ ಗುಂಪು – Kannada News | Watch: Bangalore’s Smartest Dogs Set Example, Cross Roads Only on Zebra Crossings

ಬೆಂಗಳೂರು, ಜು.20: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನನಿತ್ಯ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಆದರೆ, ಇದೀಗ ನಗರದ ಅತ್ಯಂತ ಬುದ್ಧಿವಂತ ಹಾಗೂ ಕಾನೂನು ಪಾಲಿಸುವ ಶ್ವಾನಗಳ ಹಿಂಡೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಬೆಂಗಳೂರಿನ ಬೀದಿಯೊಂದರಲ್ಲಿ ನಿಯಮಬದ್ಧವಾಗಿ ಕೇವಲ ಜಿಬ್ರಾ ಕ್ರಾಸಿಂಗ್ (Zebra Crossing) ಮೂಲಕವೇ ರಸ್ತೆ ದಾಟುತ್ತಿರುವ ಬೀದಿ ನಾಯಿಗಳ ಶಿಸ್ತು ಇಡೀ ಸೋಶಿಯಲ್​ ಮೀಡಿಯಾದಲ್ಲಿ ಗಮನ ಸೆಳೆದಿದೆ.

ಸಾಮಾಜಿಕ ಜಾಲತಾಣವಾದ ಎಕ್ಸ್ (X) ನಲ್ಲಿ ಹಂಚಿಕೊಳ್ಳಲಾದ ಈ ಕಿರು ವಿಡಿಯೋಗೆ, “ಬೆಂಗಳೂರಿನಲ್ಲಿ ಜಿಬ್ರಾ ಕ್ರಾಸಿಂಗ್ ಬಳಸುತ್ತಿರುವ ಡೋಗೇಶ್” ಎಂಬ ತಮಾಷೆಯ ಶೀರ್ಷಿಕೆಯನ್ನು ನೀಡಲಾಗಿದೆ. ವಿಡಿಯೋ ಚಿಕ್ಕದಾಗಿದ್ದರೂ, ಅತ್ಯಂತ ಮನರಂಜನಾತ್ಮಕವಾಗಿದ್ದು, ನೋಡನೋಡುತ್ತಿದ್ದಂತೆಯೇ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಾಹನಗಳು ಬರುವ ಹಾದಿಯನ್ನು ಗಮನಿಸಿ, ಪಾದಚಾರಿಗಳಿಗಾಗಿ ಮೀಸಲಿಟ್ಟ ಜಿಬ್ರಾ ಕ್ರಾಸಿಂಗ್‌ನಲ್ಲೇ ನಾಯಿಗಳು ಸಾಲಾಗಿ ರಸ್ತೆ ದಾಟುವ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಮಳೆ ಕೊರತೆಯಿಂದ ಬತ್ತಿದ ತುಂಗಭದ್ರಾ ನದಿ: ನೀರಿಲ್ಲದೆ ಸಾವಿರಾರು ಮೀನುಗಳು ಸಾವು

ಎಕ್ಸ್​ ಪೋಸ್ಟ್​ ಇಲ್ಲಿದೆ ನೋಡಿ:

ಈ ಶ್ವಾನಗಳ ವ್ಯವಸ್ಥಿತ ಮತ್ತು ನಾಗರಿಕ ನಡವಳಿಕೆಯನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದು, ಮನುಷ್ಯರು ಈ ಪ್ರಾಣಿಗಳನ್ನು ನೋಡಿ ಕಲಿಯುವುದು ಸಾಕಷ್ಟಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ನಾಯಿಗಳಿಗೆ ಜಿಬ್ರಾ ಕ್ರಾಸಿಂಗ್‌ನ ಉದ್ದೇಶ ಸರಿಯಾಗಿ ಅರ್ಥವಾಗಿದೆ. ಆದರೆ ಕೆಲವು ಮನುಷ್ಯರು ಇಂದಿಗೂ ಜಿಬ್ರಾ ಕ್ರಾಸಿಂಗ್‌ಗಳನ್ನು ಪಾರ್ಕಿಂಗ್ ಜಾಗ ಎಂದುಕೊಂಡಿದ್ದಾರೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. “ಮನುಷ್ಯರಿಗಿಂತ ಪ್ರಾಣಿಗಳಿಗೇ ರಸ್ತೆ ಮತ್ತು ಜಾಗದ ಪ್ರಜ್ಞೆ ಹೆಚ್ಚಾಗಿದೆ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಭಾರತದ ನಾಯಿಗಳು ಹೆಚ್ಚು ನಾಗರಿಕವಾಗಿವೆ ಇನ್ನೊಬ್ಬರು ಹೇಳಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ನಡುವೆ ಇಂತಹ ಸಕಾರಾತ್ಮಕ ಮತ್ತು ಮುದ್ದಾದ ವಿಡಿಯೋಗಳು ಸಾರ್ವಜನಿಕರಿಗೆ ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ನೆರವಾಗುತ್ತಿರುವುದು ವಿಶೇಷವಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:37 pm, Mon, 20 July 26

Source link

Leave a Reply

Your email address will not be published. Required fields are marked *