ದಿವ್ಯಾ ಉನ್ನಿ ಯಾವುದೋ ಗಡಿಬಿಡಿಯಲ್ಲಿ ಮನೆಯ ಬಾಗಿಲು ಹಾಕದೆ ಹೊರಗೆ ಹೋಗಿದ್ದರು. ಅಮ್ಜದ್ ಮನೆಗೆ ಪಾರ್ಸೆಲ್ ಕೊಡಲು ಬಂದ ವ್ಯಕ್ತಿಯೊಬ್ಬರು ಬಾಗಿಲು ತೆರೆದಿದ್ದನ್ನು ನೋಡಿ ಮೊದಲು ಮಾಲೀಕರು ಮನೆಯೊಳಗಿದ್ದಾರೆ ಎಂದುಕೊಂಡರು. ಬಳಿಕ ಯಾರೂ ಇಲ್ಲವೆಂದು ಅರಿವಾಗಿತ್ತು. ಸಾಕಿದ ಬೆಕ್ಕು ಕೂಡ ಅಲ್ಲೇ ಇತ್ತು. ಬಳಿಕ ಪಾರ್ಸೆಲ್ ಅನ್ನು ಸುರಕ್ಷಿತವಾಗಿ ಮನೆಯ ಒಳಗೆ ಟೇಬಲ್ ಮೇಲಿರಿಸಿದ್ದಾರೆ.
ಮನೆಯೊಳಗೆ ಯಾರೂ ಇಲ್ಲದಿದ್ದರೂ ಬಾಗಿಲು ತೆರೆದಿದ್ದರೆ ಕಳ್ಳರ ಭಯ ಅಥವಾ ಸಾಕುಪ್ರಾಣಿಗಳು ಓಡಿಹೋಗುವ ಅಪಾಯವಿರುತ್ತದೆ ಎಂದು ಅರಿತ ಅಮ್ಜಾದ್, ಮೊದಲು ಪಾರ್ಸೆಲ್ ಅನ್ನು ಸುರಕ್ಷಿತವಾಗಿ ಮನೆಯೊಳಗಿನ ಮೇಜಿನ ಮೇಲೆ ಇಟ್ಟರು. ಬಳಿಕ ದಿವ್ಯಾ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಅಷ್ಟಕ್ಕೇ ಸುಮ್ಮನಾಗದ ಅವರು, ದಿವ್ಯಾ ಅವರು ಮನೆಗೆ ವಾಪಸ್ ಬರುವವರೆಗೂ ಬೇರೆಲ್ಲೂ ಹೋಗದೆ ದ್ವಾರದ ಬಳಿಯೇ ಕಾವಲು ನಿಂತರು.
ದಿವ್ಯಾ ಅವರು ಮನೆಗೆ ಬಂದಾಗ ಬಾಗಿಲ ಬಳಿ ಕಾವಲು ಕಾಯುತ್ತಿದ್ದ ಅಮ್ಜಾದ್ ಅವರ ಪ್ರಾಮಾಣಿಕತೆ ಕಂಡು ಭಾವುಕರಾದರು. ಈ ದೃಶ್ಯವನ್ನು ಅವರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ನನ್ನ ಬೆಕ್ಕು ಓಡಿಹೋಗದಂತೆ ಮನೆಯನ್ನು ಕಾಯುತ್ತಿದ್ದರು ಪ್ರಾಮಾಣಿಕತೆ ಕಂಡು ಖುಷಿಪಟ್ಟಿದ್ದಾರೆ. ಡೆಲಿವರಿ ಕಂಪನಿಗೆ ಅಮ್ಜಾದ್ ಅವರಿಗೆ ಹೆಚ್ಚಿನ ವೇತನ ನೀಡುವಂತೆ ಮನವಿ ಮಾಡಿದ್ದಾರೆ.
ಮತ್ತಷ್ಟು ಓದಿ: ವೈದ್ಯಕೀಯ ಉಪಕರಣಗಳ ಸಾಗಿಸುವ ಲಿಫ್ಟ್ನಲ್ಲಿ ತಲೆ ಸಿಲುಕಿ ಮಹಿಳಾ ಸಿಬ್ಬಂದಿ ಸಾವು
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಅಮ್ಜಾದ್ ಅವರ ಮೇಲೆ ಪ್ರಶಂಸೆಯ ಮಳೆ ಸುರಿಸಿದ್ದಾರೆ. ನಿಜವಾದ ಹೀರೊ ಎಂದರೆ ಇವರೇ ಬೆಕ್ಕನ್ನು ಸಾಕಿರುವ ನನಗೆ ಆ ಭಯ ಎಂತಹುದು ಎಂದು ನನಗೆ ಗೊತ್ತು, ಅಮ್ಜಾದ್ ಅದ್ಭುತ ಕೆಲಸ ಮಾಡಿದ್ದಾರೆ ಎಂಬಂತಹ ಸಾವಿರಾರು ಕಾಮೆಂಟ್ಗಳು ಹರಿದುಬರುತ್ತಿವೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 7:50 am, Wed, 29 April 26