ಮಾನ್ಸೂನ್ ಆಗಮನದೊಂದಿಗೆ, ಹವಾಮಾನವು ಆಹ್ಲಾದಕರವಾಗಿರುತ್ತದೆ. ಈ ಶೀತ ಮತ್ತು ತೇವಯುಕ್ತ ವಾತಾವರಣವು ಬ್ಯಾಕ್ಟೀರಿಯಾ, ವೈರಸ್ಗಳು, ಶಿಲೀಂಧ್ರಗಳು ಬೆಳೆಯಲು ಅವಕಾಶ ಮಾಡಿಕೊಡುತ್ತದೆ. ಈ ಕಾರಣದಿಂದಾಗಿ ಮಳೆಗಾಲದಲ್ಲಿ ಶೀತ, ಜ್ವರದಂತಹ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅಲ್ಲದೆ ಕೆಲವೊಂದು ತರಕಾರಿಗಳನ್ನು (vegetables) ತಿನ್ನುವುದರಿಂದಲೂ ಸೋಂಕು ತಗುಲುವ ಅಪಾಯ ಇದೆ. ಹೌದು ಮಳೆಗಾಲದಲ್ಲಿ ಕೆಲವು ತರಕಾರಿಗಳಲ್ಲಿ ಅತೀ ಹೆಚ್ಚು ಅಗೋಚರವಾಗಿರುವ ಕೀಟಗಳು, ಸೂಕ್ಷ್ಮಾಣು ಜೀವಿಗಳು ಇರುವ ಕಾರಣ ಅವುಗಳ ಸೇವನೆಯಿಂದಲೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಮಳೆಗಾಲದಲ್ಲಿ ಈ ಕೆಲವು ತರಕಾರಿಗಳನ್ನು ಸೇವನೆ ಮಾಡಬಾರದು.
ಮಳೆಗಾಲದಲ್ಲಿ ಸೇವನೆ ಮಾಡಬಾರದ ತರಕಾರಿಗಳು:
ಹೂಕೋಸು: ಮಳೆಗಾಲದಲ್ಲಿ ಕೀಟಗಳು ಮತ್ತು ಸೂಕ್ಷ್ಮಜೀವಿಗಳು ಹೆಚ್ಚಾಗಿ ಹೂಕೋಸಿನ ಎಲೆಗಳನ್ನು ಆಕ್ರಮಿಸುತ್ತವೆ. ಅನೇಕಾರೂ ಸೂಕ್ಷ್ಮ ಜೀವಿಗಳು ಕೂಡ ಇದರಲ್ಲಿರುತ್ತವೆ. ಇದರ ಸೇವನೆಯಿಂದ ಹೊಟ್ಟೆ ಸಂಬಂಧಿ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಮಳೆಗಾಲದಲ್ಲಿ ಹೂಕೋಸನ್ನು ಸೇವನೆ ಮಾಡಿ
ಬದನೆಕಾಯಿ: ಮಳೆಗಾಲದಲ್ಲಿ ಬದನೆಕಾಯಿ ಸೇವಿಸೋದು ಸಹ ಅಷ್ಟು ಒಳ್ಳೆಯದಲ್ಲ. ಏಕೆಂದರೆ ಈ ಸಮಯದಲ್ಲಿ ಬದನೆಕಾಯಿ ಹೆಚ್ಚು ಕೀಟಗಳ ಭಾದೆಗೆ ಒಳಗಾಗುತ್ತದೆ. ಈ ತರಕಾರಿಯೊಳಗೆ ಸಣ್ಣ ಕೀಟಗಳು ಹೆಚ್ಚಾಗಿ ಕಂಡುಬರುತ್ತವೆ. ಹೀಗಿರುವಾಗ ಅದನ್ನು ಸರಿಯಾದ ರೀತಿಯಲ್ಲಿ ಕ್ಲೀನ್ ಮಾಡದೇ, ಸರಿಯಾಗಿ ಬೇಯಿಸದರೆ ತಿಂದರೆ ಹೊಟ್ಟೆ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಸೊಪ್ಪು ತರಕಾರಿಗಳು: ಪಾಲಕ್, ಲೆಟಿಸ್, ಮೆಂತ್ಯ ದಂತಹ ಸೊಪ್ಪು ತರಕಾರಿಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ಮಳೆಗಾಲದಲ್ಲಿ ಇವುಗಳನ್ನು ಸೇವಿಸುವುದನ್ನಿ ಸಾಧ್ಯವಾದಷ್ಟು ತಪ್ಪಿಸಬೇಕು. ಏಕೆಂದರೆ ಮಳೆಗಾಲದಲ್ಲಿ, ಪಾಲಕ್ ಸೊಪ್ಪಿನಂತಹ ಎಲೆಗಳ ತರಕಾರಿಗಳು ಸುಲಭವಾಗಿ ಕೊಳೆ, ಸಣ್ಣ ಕೀಟಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಆಶ್ರಯಿಸಬಹುದು. ಆದ್ದರಿಂದ ಈ ಸಮಯದಲ್ಲಿ ಅವುಗಳ ಸೇವನೆಯನ್ನು ತಪ್ಪಿಸಿ, ಈ ಸೊಪ್ಪನ್ನು ತಿನ್ನಲೇಬೇಕು ಎಂದಿದ್ದರೆ ಅವುಗಳನ್ನು ಚೆನ್ನಾಗಿ ತೊಳೆದು ಚೆನ್ನಾಗಿ ತೊಳೆದ ನಂತರವೇ ತಿನ್ನಬೇಕು.
ಎಲೆಕೋಸು: ಮಳೆಗಾಲದ ಸಮಯದಲ್ಲಿ ಎಲೆಕೋಸು ಖರೀದಿಸುವುದನ್ನು ಸಹ ಸಾಧ್ಯವಾದಷ್ಟು ತಪ್ಪಿಸಿ. ಮಳೆಗಾಲದಲ್ಲಿನ ಹೆಚ್ಚಿನ ಆದ್ರತೆಯು ಎಲೆಕೋಸಿನಲ್ಲಿ ಬ್ಯಾಕ್ಟೀರಿಯಾ ಮತ್ತು ಕೀಟಗಳು ಸಂತಾನೋತ್ಪತ್ತಿ ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ ಈ ತರಕಾರಿಯನ್ನು ಚೆನ್ನಾಗಿ ಸ್ವಚ್ಛಗೊಳಿಸದೆ, ಸೇವನೆ ಮಾಡಿದರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ತುಳಸಿ ಸಸ್ಯ ಸೊಂಪಾಗಿ ಬೆಳೆಯಬೇಕೆಂದರೆ, ಮಳೆಗಾಲದಲ್ಲಿ ಈ ರೀತಿ ಗಿಡವನ್ನು ಆರೈಕೆ ಮಾಡಿ
ಅಣಬೆ: ಅಣಬೆಗಳು ನೈಸರ್ಗಿಕವಾಗಿ ಹೆಚ್ಚಿನ ಪ್ರಮಾಣದ ತೇವಾಂಶವನ್ನು ಹೊಂದಿರುತ್ತವೆ, ಇದು ಮಳೆಗಾಲದಲ್ಲಿ ಅವು ಹಾಳಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಮಳೆಗಾಲದಲ್ಲಿ ಅಣಬೆ ಖರೀದಿಸುವುದು ಸೂಕ್ತವಲ್ಲ.
ಈ ತರಕಾರಿಗಳು ಆರೋಗ್ಯಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಆದ್ದರಿಂದ, ಮಳೆಗಾಲದಲ್ಲಿ ಅವುಗಳನ್ನು ಸಂಪೂರ್ಣವಾಗಿ ತಪ್ಪಿಸುವ ಅಗತ್ಯವಿಲ್ಲ. ಅವುಗಳನ್ನು ಸಂಪೂರ್ಣವಾಗಿ ತ್ಯಜಿಸುವ ಬದಲು ಅವುಗಳನ್ನು ಸುರಕ್ಷಿತವಾಗಿ ಸೇವಿಸುವುದರ ಮೇಲೆ ನಿಮ್ಮ ಗಮನ ಹರಿಸಬೇಕು. ಅಲ್ಲದೆ ತಾಜಾ ತರಕಾರಿಗಳನ್ನು ಖರೀದಿಸಿ, ಅವುಗಳನ್ನು ಚೆನ್ನಾಗಿ ತೊಳೆಯಿರಿ, ಅವುಗಳನ್ನು ಚೆನ್ನಾಗಿ ಬೇಯಿಸಿ ಮತ್ತು ಅವುಗಳನ್ನು ಸರಿಯಾಗಿ ಸಂಗ್ರಹಿಸಿ. ಪಾಲಕ್, ಎಲೆಕೋಸು, ಹೂಕೋಸು, ಬ್ರೊಕೊಲಿ, ಬದನೆ, ಕ್ಯಾಪ್ಸಿಕಂ ಮತ್ತು ಅಣಬೆಗಳಂತಹ ತರಕಾರಿಗಳನ್ನು ಕತ್ತರಿಸುವ ಮೊದಲು ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಕೀಟಗಳು ಮತ್ತು ಕೊಳೆಯನ್ನು ತೆಗೆದುಹಾಕಲು, ಎಲೆಗಳ ತರಕಾರಿಗಳು, ಹೂಕೋಸು ಮತ್ತು ಬ್ರೊಕೊಲಿಯನ್ನು ಸ್ವಲ್ಪ ಉಪ್ಪು ಅಥವಾ ವಿನೆಗರ್ ಸೇರಿಸಿದ ಶುದ್ಧ ನೀರಿನಲ್ಲಿ 15 ರಿಂದ 20 ನಿಮಿಷಗಳ ಕಾಲ ನೆನೆಸಿಡಿ. ನಂತರ ಅವುಗಳನ್ನು ಚೆನ್ನಾಗಿ ತೊಳೆಯಿರಿ. ನಂತರವೇ ಸೇವಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ