Headlines

ಮಹಾಭಾರತದ ‘ಕುಂತಿ’ ಶಫಕ್ ನಾಜ್ ಈಗ ಎಲ್ಲಿದ್ದಾರೆ?

ಸ್ಟಾರ್ ಪ್ಲಸ್ ವಾಹಿನಿಯಲ್ಲಿ 2013ರಲ್ಲಿ ಪ್ರಸಾರವಾದ ಪೌರಾಣಿಕ ಧಾರಾವಾಹಿ‘ಮಹಾಭಾರತ’ (Mahabharat) ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಸೀರಿಯಲ್‌ಗಳಲ್ಲಿ ಒಂದು. 16 ಸೆಪ್ಟೆಂಬರ್ 2013 ರಿಂದ 16 ಆಗಸ್ಟ್ 2014ರವರೆಗೆ ಒಟ್ಟು 267 ಸಂಚಿಕೆಗಳಾಗಿ ಮೂಡಿಬಂದ ಈ ಅದ್ಭುತ ಸರಣಿಯಲ್ಲಿ ಹಲವು ಪ್ರಮುಖ ನಟರು ಬಣ್ಣ ಹಚ್ಚಿದ್ದರು. ಈ ಧಾರಾವಾಹಿಯಲ್ಲಿ ಪಾಂಡವರ ತಾಯಿ ‘ಕುಂತಿ’ ಪಾತ್ರದಲ್ಲಿ ನಟಿಸಿದ್ದ ಮುಸ್ಲಿಂ ನಟಿ ಶಫಕ್ ನಾಜ್ ಅವರ ಬಗ್ಗೆ ಒಂದು ಕುತೂಹಲಕಾರಿ ವಿಷಯ ಇಲ್ಲಿದೆ.

ಕೇವಲ 21ನೇ ವಯಸ್ಸಿಗೆ ತಾಯಿ ಪಾತ್ರ!

ಧಾರಾವಾಹಿಯಲ್ಲಿ ಅತ್ಯಂತ ಜವಾಬ್ದಾರಿಯುತ ಹಾಗೂ ಕಷ್ಟಕರವಾದ ಕುಂತಿ ಪಾತ್ರಕ್ಕೆ ಶಫಕ್ ನಾಜ್ ಆಯ್ಕೆಯಾದಾಗ ಅವರಿಗೆ ಕೇವಲ 21 ವರ್ಷ ವಯಸ್ಸು! ಆಶ್ಚರ್ಯದ ಸಂಗತಿಯೆಂದರೆ, ಅವರ ಮಕ್ಕಳಾಗಿ ನಟಿಸಿದ ಪಾಂಡವರು ಮತ್ತು ಕರ್ಣನ ಪಾತ್ರಧಾರಿಗಳು ನಿಜ ಜೀವನದಲ್ಲಿ ಈ ನಟಿಗಿಂತ ವಯಸ್ಸಿನಲ್ಲಿ ಸಾಕಷ್ಟು ದೊಡ್ಡವರಾಗಿದ್ದರು.

ಯುಧಿಷ್ಠಿರ (ರೋಹಿತ್ ಭಾರದ್ವಾಜ್’: ಸರಣಿಯಲ್ಲಿ ಧರ್ಮರಾಯನಾಗಿ ನಟಿಸಿದ್ದ ರೋಹಿತ್ ಭಾರದ್ವಾಜ್ ಅವರಿಗೆ ಆಗ 31 ವರ್ಷ ವಯಸ್ಸು. ಅಂದರೆ ತಾಯಿಯ ಪಾತ್ರ ಮಾಡಿದ್ದ ಶಫಕ್ ನಾಜ್ ಅವರಿಗಿಂತ ರೋಹಿತ್ 10 ವರ್ಷ ದೊಡ್ಡವರಾಗಿದ್ದರು.

ಭೀಮ (ಸೌರವ್ ಗುರ್ಜರ್): ಭೀಮನ ಪಾತ್ರದಲ್ಲಿ ಅಬ್ಬರಿಸಿದ್ದ ಸೌರವ್ ಗುರ್ಜರ್ ಅವರಿಗೆ ಆ ಸಮಯದಲ್ಲಿ 29 ವರ್ಷ ವಯಸ್ಸಾಗಿತ್ತು. ಇವರೂ ಕೂಡ ತೆರೆಯ ಮೇಲಿನ ತಮ್ಮ ತಾಯಿಗಿಂತ ವಯಸ್ಸಿನಲ್ಲಿ ಹಿರಿಯರು.

ಇದನ್ನೂ ಓದಿ: ಇದೇ ವರ್ಷ ಪ್ರಾರಂಭವಾಗಲಿದೆ ‘ಮಹಾಭಾರತ’: ನಿರ್ದೇಶಕ ರಾಜಮೌಳಿ ಅಲ್ಲ, ಮತ್ಯಾರು?

ಕರ್ಣ (ಅಹಂ ಶರ್ಮಾ): ಸೂರ್ಯಪುತ್ರ ಕರ್ಣನ ಪಾತ್ರದ ಮೂಲಕ ರಾತ್ರೋರಾತ್ರಿ ದೇಶಾದ್ಯಂತ ಭಾರಿ ಪ್ರಸಿದ್ಧಿ ಪಡೆದ ನಟ ಅಹಂ ಶರ್ಮಾ ಅವರಿಗೆ ಆಗ 24 ವರ್ಷ ವಯಸ್ಸಾಗಿತ್ತು. ಇವರೂ ಸಹ ಶಫಕ್‌ಗಿಂತ ದೊಡ್ಡವರಾಗಿದ್ದರು.

ಈಗ ಎಲ್ಲಿದ್ದಾರೆ ಶಫಕ್ ನಾಜ್?

ಚಿಕ್ಕ ವಯಸ್ಸಿನಲ್ಲೇ ಹಿರಿಯ ನಟರಿಗೆ ತಾಯಿಯಾಗಿ ನಟಿಸಿ, ಆ ಕಠಿಣ ಪಾತ್ರಕ್ಕೆ ಶಫಕ್ ನಾಜ್ ಸಂಪೂರ್ಣ ನ್ಯಾಯ ಒದಗಿಸಿದ್ದರು. ಅವರ ನಟನೆಗೆ ಆಗ ಅಪಾರ ಪ್ರಶಂಸೆ ವ್ಯಕ್ತವಾಗಿತ್ತು. ಇನ್ನು ಇವರ ಪ್ರಸ್ತುತ ಜೀವನದ ಬಗ್ಗೆ ಹೇಳುವುದಾದರೆ, ಶಫಕ್ ಸದ್ಯ ಕಿರುತೆರೆಯಿಂದ ಸ್ವಲ್ಪ ದೂರ ಉಳಿದಿದ್ದಾರೆ. ಆದರೆ, ಒಟಿಟಿ ಪ್ಲಾಟ್‌ಫಾರ್ಮ್‌ಗಳ ಮೂಲಕ ವೆಬ್ ಸರಣಿಗಳಲ್ಲಿ ಸಕ್ರಿಯರಾಗಿದ್ದು, ಡಿಜಿಟಲ್ ಪರದೆಯ ಮೇಲೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *