2026 ರ ಮಹಿಳಾ ಟಿ20 ಏಷ್ಯಾಕಪ್ (2026 Women’s T20 Asia Cup) ವೇಳಾಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಇಂದು ಪ್ರಕಟಿಸಿದೆ. ಅದರಂತೆ 10ನೇ ಆವೃತ್ತಿಯ ಈ ಪಂದ್ಯಾವಳಿ 2026 ರ ಆಗಸ್ಟ್ 28 ರಿಂದ ಪ್ರಾರಂಭವಾಗಲಿದೆ. ಟೂರ್ನಮೆಂಟ್‌ನ ಎಲ್ಲಾ ಪಂದ್ಯಗಳು ಯುಎಇಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಒಟ್ಟು 8 ತಂಡಗಳು ಟೂರ್ನಮೆಂಟ್‌ನಲ್ಲಿ ಭಾಗವಹಿಸಲಿದ್ದು, ಈ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎಂದಿನಂತೆ ಎ ಗುಂಪಿನಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ಭಾರತ ಮತ್ತು ಪಾಕಿಸ್ತಾನದ ಜೊತೆಗೆ ಥೈಲ್ಯಾಂಡ್ ಮತ್ತು ಹಾಂಗ್ ಕಾಂಗ್ ತಂಡಗಳು ಸೇರಿವೆ. ಬಿ ಗುಂಪಿನಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾ, ಬಾಂಗ್ಲಾದೇಶ, ಯುಎಇ ಮತ್ತು ಇಂಡೋನೇಷ್ಯಾ ತಂಡಗಳು ಸೇರಿವೆ.
ಈ ದಿನದಂದು ಭಾರತ- ಪಾಕ್ ಫೈಟ್
ಪ್ರತಿ ಗುಂಪಿನಲ್ಲಿರುವ ತಂಡಗಳು ಪರಸ್ಪರ ಒಂದೊಂದು ಪಂದ್ಯವನ್ನು ಆಡಲಿವೆ. ಇದರರ್ಥ ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಗುಂಪು ಹಂತದಲ್ಲೇ ಮುಖಾಮುಖಿಯಾಗಲಿವೆ. ಈ ಎರಡೂ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯ ಸೆಪ್ಟೆಂಬರ್ 5, 2026 ರಂದು ನಡೆಯಲಿದೆ. ಈ ಪಂದ್ಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದ್ದು, ಟಾಸ್ ಸಂಜೆ 7.30 ಕ್ಕೆ ನಡೆಯಲಿದೆ.
𝐓𝐡𝐞 𝐰𝐚𝐢𝐭 𝐢𝐬 𝐨𝐯𝐞𝐫 🙌
The official fixtures for the #𝐃𝐏𝐖𝐨𝐫𝐥𝐝𝐖𝐨𝐦𝐞𝐧𝐬𝐀𝐬𝐢𝐚𝐂𝐮𝐩𝟐𝟎𝟐𝟔 are here. All matches will be played under lights at the Dubai International Stadium as Asia’s finest go head-to-head for continental glory 🏆#ACC pic.twitter.com/p4PgjbtdIW
— AsianCricketCouncil (@ACCMedia1) August 6, 2026
ಮಹಿಳಾ ಟಿ20 ಏಷ್ಯಾಕಪ್ ವೇಳಾಪಟ್ಟಿ
- 28 ಆಗಸ್ಟ್ 2026: ಥೈಲ್ಯಾಂಡ್ vs ಹಾಂಗ್ ಕಾಂಗ್
- 29 ಆಗಸ್ಟ್ 2026: ಶ್ರೀಲಂಕಾ vs ಯುಎಇ
- 30 ಆಗಸ್ಟ್ 2026: ಭಾರತ vs ಥೈಲ್ಯಾಂಡ್,
- 31 ಆಗಸ್ಟ್ 2026: ಬಾಂಗ್ಲಾದೇಶ vs ಇಂಡೋನೇಷ್ಯಾ
- 1 ಸೆಪ್ಟೆಂಬರ್ 2026: ಪಾಕಿಸ್ತಾನ vs ಥೈಲ್ಯಾಂಡ್
- 2 ಸೆಪ್ಟೆಂಬರ್ 2026: ಶ್ರೀಲಂಕಾ vs ಇಂಡೋನೇಷ್ಯಾ
- 3 ಸೆಪ್ಟೆಂಬರ್ 2026: ಭಾರತ vs ಹಾಂಗ್ ಕಾಂಗ್
- 4 ಸೆಪ್ಟೆಂಬರ್ 2026: ಯುಎಇ vs ಇಂಡೋನೇಷ್ಯಾ
- 5 ಸೆಪ್ಟೆಂಬರ್ 2026: ಪಾಕಿಸ್ತಾನ vs ಭಾರತ
- 6 ಸೆಪ್ಟೆಂಬರ್ 2026: ಶ್ರೀಲಂಕಾ vs ಬಾಂಗ್ಲಾದೇಶ
- 7 ಸೆಪ್ಟೆಂಬರ್ 2026: ಪಾಕಿಸ್ತಾನ vs ಹಾಂಗ್ ಕಾಂಗ್
- 8 ಸೆಪ್ಟೆಂಬರ್ 2026: ಬಾಂಗ್ಲಾದೇಶ vs ಯುಎಇ
ಸೆಮಿಫೈನಲ್‌ನ ಮೊದಲ ಪಂದ್ಯ ಸೆಪ್ಟೆಂಬರ್ 10 ರಂದು ನಡೆಯಲಿದ್ದು, ಎರಡನೇ ಸೆಮಿಫೈನಲ್ ಪಂದ್ಯ ಸೆಪ್ಟೆಂಬರ್ 11 ರಂದು ನಡೆಯಲಿದೆ. ಅಂತಿಮವಾಗಿ ಫೈನಲ್ ಪಂದ್ಯ ಸೆಪ್ಟೆಂಬರ್ 13 ರಂದು ನಡೆಯಲಿದೆ.