Headlines

ಮಹಿಳಾ ಸರ್ಕಾರಿ ನೌಕರರಿಗೆ ತಮಿಳುನಾಡು ಸರ್ಕಾರದ ಸಿಹಿಸುದ್ದಿ: 3ನೇ ಮಗುವಿನ ಹೆರಿಗೆಗೂ ಸಿಗಲಿದೆ 1 ವರ್ಷ ರಜೆ | TN Govt Expands Maternity Leave: 365 Days for Third Child of Female Employees

ಚೆನ್ನೈ, ಆಗಸ್ಟ್​ 19: ತಮಿಳುನಾಡು(Tamil Nadu) ಸರ್ಕಾರವು ಮಹಿಳಾ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಮಹಿಳಾ ನೌಕರರು ತಮ್ಮ ಮೂರನೇ ಮಗುವಿನ ಜನನದ ಸಂದರ್ಭದಲ್ಲೂ ಪೂರ್ಣ 1 ವರ್ಷ ವೇತನ ಸಹಿತ ಹೆರಿಗೆ ರಜೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಮೂರನೇ ಮಗುವಿಗೆ ಕೇವಲ 12 ವಾರಗಳ ರಜೆ ಮಾತ್ರ ಇತ್ತು. ಈಗ ಅದನ್ನು ಮೊದಲ ಎರಡು ಮಕ್ಕಳಂತೆ 365 ದಿನಗಳಿಗೆ ಹೆಚ್ಚಿಸಲಾಗಿದೆ.

ಸಚಿವರ ಪ್ರಕಟಣೆ: ಮಾನವ ಸಂಪನ್ಮೂಲ ನಿರ್ವಹಣಾ ಸಚಿವ ಡಿ. ಶರತ್‌ಕುಮಾರ್ ಅವರು ವಿಧಾನಸಭೆಯಲ್ಲಿ ಇಲಾಖೆಯ ಅನುದಾನ ಬೇಡಿಕೆ ಮಂಡಿಸುವ ವೇಳೆ ಈ ಐತಿಹಾಸಿಕ ತೀರ್ಮಾನವನ್ನು ಪ್ರಕಟಿಸಿದರು. ಸರ್ಕಾರವು ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಸದಾ ಆದ್ಯತೆ ನೀಡುತ್ತಿದ್ದು, ನೌಕರರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈ ಹೊಸ ನಿಯಮವನ್ನು ಜಾರಿಗೆ ತರಲು ಶೀಘ್ರದಲ್ಲೇ ಅಧಿಕೃತ ಸರ್ಕಾರಿ ಆದೇಶ ಹೊರಬೀಳಲಿದೆ.

ತಮಿಳುನಾಡಿನಲ್ಲಿ ಹೆರಿಗೆ ರಜೆಯ ಇತಿಹಾಸ
2011: ಹೆರಿಗೆ ರಜೆಯನ್ನು 90 ದಿನಗಳಿಂದ 6 ತಿಂಗಳಿಗೆ ಹೆಚ್ಚಿಸಲಾಯಿತು.

2016: ರಜೆಯ ಅವಧಿಯನ್ನು 6 ತಿಂಗಳಿಂದ 9 ತಿಂಗಳಿಗೆ ವಿಸ್ತರಿಸಲಾಯಿತು.

2021: ಮೊದಲ ಎರಡು ಮಕ್ಕಳಿಗೆ ಹೆರಿಗೆ ರಜೆಯನ್ನು ಪೂರ್ಣ 1 ವರ್ಷಕ್ಕೆ (365 ದಿನಗಳು) ಹೆಚ್ಚಿಸಲಾಯಿತು. ಈಗ 3ನೇ ಮಗುವಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ.

ಮತ್ತಷ್ಟು ಓದಿ: ಬಿಜೆಪಿ ತೊರೆಯಲು ನಿಜವಾದ ಕಾರಣ ಬಿಚ್ಚಿಟ್ಟ ಅಣ್ಣಾಮಲೈ; ಗುಜರಾತ್ ಕೇಂದ್ರಿತ, ದೆಹಲಿ ಕೇಂದ್ರಿತ ರಾಜಕೀಯ ಧೋರಣೆಗೆ ಟೀಕೆ

‘ತಮಿಳ್ ತಾಯ್ ವಳ್ತು’ ಹಾಡು ಕಡ್ಡಾಯ

ರಾಜ್ಯಗೀತೆಗೆ ಮೊದಲ ಆದ್ಯತೆ: ತಮಿಳುನಾಡು ಸರ್ಕಾರವು ರಾಜ್ಯದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು, ಕಚೇರಿಗಳು, ಶಾಲೆ-ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಸಮಾರಂಭಗಳಲ್ಲಿ ಕಾರ್ಯಕ್ರಮದ ಆರಂಭದಲ್ಲಿ ‘ತಮಿಳ್ ತಾಯ್ ವಳ್ತು’ ಹಾಡುವುದನ್ನು ಕಡ್ಡಾಯಗೊಳಿಸಿದೆ. ಇತ್ತೀಚೆಗೆ ವಿಧಾನಸಭೆಯಲ್ಲಿ ಈ ಕುರಿತ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದ ಬೆನ್ನಲ್ಲೇ ಅಧಿಕೃತ ಆದೇಶ ಹೊರಡಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *