ಪೋಸ್ಟ್ ಆಫೀಸ್ನ ಸಣ್ಣ ಉಳಿತಾಯ ಯೋಜನೆಗಳಲ್ಲೇ (Small Savings Scheme) ಗರಿಷ್ಠ ಬಡ್ಡಿ ತರುವ ಯೋಜನೆಗಳ ಪೈಕಿ ಎಸ್ಸಿಎಸ್ಎಸ್ ಒಂದು. ಇದು ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS- Senior Citizen Saving Scheme). ಸುಕನ್ಯಾ ಸಮೃದ್ಧಿ ಯೋಜನೆ ರೀತಿ ಎಸ್ಸಿಎಸ್ಎಸ್ ಶೇ. 8.2 ವಾರ್ಷಿಕ ಬಡ್ಡಿ ಆಫರ್ ಮಾಡುತ್ತದೆ. ಈ ಯೋಜನೆಯಲ್ಲಿ ತಿಂಗಳಿಗೆ 20,500 ರೂವರೆಗೂ ಮಾಸಿಕ ಆದಾಯ ಸೃಷ್ಟಿಸುವ ಅವಕಾಶ ಇರುತ್ತದೆ. ಇದು ಪೋಸ್ಟ್ ಆಫೀಸ್ನಲ್ಲಿ ಲಭ್ಯ ಇರುವ ಸ್ಕೀಮ್.
ಎಸ್ಸಿಎಸ್ಎಸ್ ಯೋಜನೆಯಲ್ಲಿ ಯಾರು ಹೂಡಿಕೆ ಮಾಡಬಹುದು?
- 60 ವರ್ಷ ವಯಸ್ಸು ದಾಟಿದ ಹಿರಿಯ ನಾಗರಿಕರು ಈ ಯೋಜನೆ ಹೊಂದಬಹುದು.
- ವಿಆರ್ಎಸ್ ಪಡೆದು ಬೇಗ ನಿವೃತ್ತರಾಗಿರುವ 55-60 ವರ್ಷ ವಯಸ್ಸಿನ ನಾಗರಿಕರು ಎಸ್ಸಿಎಸ್ಎಸ್ ಅಕೌಂಟ್ ತೆರೆಯಬಹುದು.
- ರಕ್ಷಣಾ ಪಡೆಯಲ್ಲಿ ಕೆಲಸ ಮಾಡಿ ನಿವೃತ್ತರಾದವರು 50 ವರ್ಷ ವಯಸ್ಸು ಮುಟ್ಟಿದರೆ ಈ ಯೋಜನೆಗೆ ನೊಂದಾಯಿಸಬಹುದು.
ಇದನ್ನೂ ಓದಿ: ಹತ್ತು ಕೋಟಿ ರೂ ಹಣ ಸೇರಿಸಲು ಎಷ್ಟು ಸಮಯ ಮತ್ತು ಹೂಡಿಕೆ ಬೇಕು? ಇಲ್ಲಿದೆ ಡೀಟೇಲ್ಸ್
ಎಸ್ಸಿಎಸ್ಎಸ್ ಅಕೌಂಟ್ನಲ್ಲಿ ಹೇಗೆ ಹೂಡಿಕೆ?
ಆಧಾರ್, ಪ್ಯಾನ್ ಇತ್ಯಾದಿ ದಾಖಲೆಗಳೊಂದಿಗೆ ಪೋಸ್ಟ್ ಆಫೀಸ್ನಲ್ಲಿ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ಅಡಿಯಲ್ಲಿ ಅಕೌಂಟ್ ತೆರೆಯಬಹುದು. ಇದರಲ್ಲಿ ಲಂಪ್ಸಮ್ ಆಗಿ 1,000 ರೂನಿಂದ 30,00,000 ರೂವರೆಗೆ ಹೂಡಿಕೆಗೆ ಅವಕಾಶ ಇರುತ್ತದೆ.
ಹೂಡಿಕೆ ಅವಧಿ 5 ವರ್ಷ ಇರುತ್ತದೆ. ಅಕೌಂಟ್ ತೆರೆದ ನಂತರ ಪ್ರತೀ ಕ್ವಾರ್ಟರ್ಗೆ ಬಡ್ಡಿ ಹಣ ನಿಮ್ಮ ಅಕೌಂಟ್ಗೆ ಜಮೆಯಾಗುತ್ತಾ ಹೋಗುತ್ತದೆ. ಹೀಗೆ ಐದು ವರ್ಷ ಬಡ್ಡಿ ಸಿಗುತ್ತಿರುತ್ತದೆ. ನಂತರ ಅಕೌಂಟ್ ಮೆಚ್ಯೂರ್ ಆಗಿ, ನಿಮ್ಮ ಅಸಲಿ ಹಣವನ್ನು ಹಿಂಪಡೆಯಬಹುದು. ಅಗತ್ಯ ಇದ್ದರೆ ಸ್ಕೀಮ್ ಅನ್ನು ಇನ್ನೂ ಮೂರು ವರ್ಷ ವಿಸ್ತರಿಸಬಹುದು.
ಇದನ್ನೂ ಓದಿ: ಹೂಡಿಕೆದಾರರನ್ನು ಸೆಳೆಯುತ್ತಿವೆ ವ್ಯಾಲ್ಯೂ ಮ್ಯೂಚುವಲ್ ಫಂಡ್ಗಳು; ಏನಿವುಗಳ ವಿಶೇಷತೆ?
20,500 ರೂ ಮಾಸಿಕ ಆದಾಯ ಸೃಷ್ಟಿಸುವುದು ಹೇಗೆ?
ಈ ಸ್ಕೀಮ್ ಅಡಿಯಲ್ಲಿ 30 ಲಕ್ಷ ರೂವರೆಗೆ ಹೂಡಿಕೆ ಮಾಡಬಹುದು. ನೀವು ಗರಿಷ್ಠ ಮೊತ್ತ ಹೂಡಿಕೆ ಮಾಡಿದರೆ ಪ್ರತೀ ಕ್ವಾರ್ಟರ್ನಲ್ಲಿ ನಿಮಗೆ 61,500 ರೂ ಬಡ್ಡಿ ಹಣ ಅಕೌಂಟ್ಗೆ ಬಂದು ಬೀಳುತ್ತದೆ. ಅಂದರೆ, ತಿಂಗಳಿಗೆ 20,500 ರೂ ಆಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ